ಆರಂಭಿಕ ಯಶಸ್ವಿ ಜೈಸ್ವಾಲ್ ಮತ್ತು ನಾಯಕ ಶುಭಮನ್ ಗಿಲ್ ಸಿಡಿಸಿದ ಶತಕಗಳ ನೆರವಿನಿಂದ ಭಾರತ ತಂಡ ಮೊದಲ ಟೆಸ್ಟ್ ಪಂದ್ಯದ ಮೊದಲ ದಿನವೇ ಇಂಗ್ಲೆಂಡ್ ವಿರುದ್ಧ ಹಿಡಿತ ಸಾಧಿಸಿದೆ.
ಲೀಡ್ಸ್ ನಲ್ಲಿ ಶುಕ್ರವಾರ ಆರಂಭಗೊಂಡ 5 ಟೆಸ್ಟ್ ಪಂದ್ಯಗಳ ಸರಣಿಯ ಮೊದಲ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡುವ ಅವಕಾಶ ಪಡೆದ ಭಾರತ ದಿನದಾಟ ಮುಕ್ತಾಯಕ್ಕೂ ಮುನ್ನ ಮೊದಲ ಇನಿಂಗ್ಸ್ ನಲ್ಲಿ 85 ಓವರ್ ಗಳಲ್ಲಿ 3 ವಿಕೆಟ್ ಕಳೆದುಕೊಂಡು 359 ರನ್ ಪೇರಿಸಿತು.
ಯಶಸ್ವಿ ಜೈಸ್ವಾಲ್ ಮತ್ತು ಕೆಎಲ್ ರಾಹುಲ್ ಮೊದಲ ವಿಕೆಟ್ ಗೆ 91 ರನ್ ಪೇರಿಸಿ ಉತ್ತಮ ಆರಂಭ ನೀಡಿದರು. ರಾಹುಲ್ 78 ಎಸೆತಗಲಲ್ಲಿ 8 ಬೌಂಡರಿ ಒಳಗೊಂಡ 42 ರನ್ ಗಳಿಸಿ ಔಟಾದರು.
ಮತ್ತೊಂದು ತುದಿಯಲ್ಲಿ ಕೆಂಪು ಚೆಂಡಿನ ಪಂದ್ಯದಲ್ಲಿ ಪ್ರಾಬಲ್ಯ ಮುಂದುವರಿಸಿದ ಯಶಸ್ಚಿ ಜೈಸ್ವಾಲ್ ಇಂಗ್ಲೆಂಡ್ ವಿರುದ್ಧ 3ನೇ ಹಾಗೂ ಇಂಗ್ಲೆಂಡ್ ನೆಲದಲ್ಲಿ ಮೊದಲ ಶತಕ ಸಿಡಿಸಿದರು. ಜೈಸ್ವಾಲ್ 159 ಎಸೆತಗಳಲ್ಲಿ 16 ಬೌಂಡರಿ ಮತ್ತು 1 ಸಿಕ್ಸರ್ ಒಳಗೊಂಡ 101 ರನ್ ಬಾರಿಸಿ ಔಟಾದರು.
ಮಧ್ಯಮ ಕ್ರಮಾಖದಲ್ಲಿ ಸರ್ಪರಾಜ್ ಬದಲು ಅಖಾಡಕ್ಕೆ ಇಳಿದ ಸಾಯಿ ಸುದರ್ಶನ್ ಶೂನ್ಯ ಸುತ್ತಿ ನಿರಾಸೆ ಮೂಡಿಸಿದರು.
ನಂತರ ಜೊತೆಯಾದ ಗಿಲ್ ಮತ್ತು ರಿಷಭ್ ಪಂತ್ ನಾಲ್ಕನೇ ವಿಕೆಟ್ ಗೆ 138 ರನ್ ಜೊತೆಯಾಟ ನಿಭಾಯಿಸಿದರು. ಗಿಲ್ ಶತಕ ಗಳಿಸಿದರೆ ಪಂತ್ ಅರ್ಧಶತಕ ಪೂರೈಸಿದರು. ಗಿಲ್ ನಾಯಕನಾಗಿ ಶತಕ ಸಿಡಿಸಿದ 4ನೇ ಭಾರತೀಯ ಆಟಗಾರ ಎಂಬ ದಾಖಲೆಗೆ ಪಾತ್ರರಾದರು.
ಗಿಲ್ 157ಎಸೆತಗಳಲ್ಲಿ 1 ಬೌಂಡರಿ ಮತ್ತು 4 ಸಿಕ್ಸರ್ ಸಹಾಯದಿಂದ ಶತಕ ಪೂರೈಸಿದ್ದು, 127 ರನ್ ಬಾರಿಸಿ ಅಜೇಯರಾಗಿ ಉಳಿದರೆ ರಿಷಭ್ ಪಂತ್ 102 ಎಸೆತಗಳಲ್ಲಿ 65 ರನ್ ಗಳಿಸಿದರು.


