Thursday, December 11, 2025
Google search engine
Homeವಿದೇಶಪಾಕಿಸ್ತಾನಕ್ಕೆ ಚೀನಾದ 40 j-35 ಯುದ್ಧ ವಿಮಾನ ಪೂರೈಕೆ: ಭಾರತ ಈ ವಿಷಯದಲ್ಲಿ 10 ವರ್ಷ...

ಪಾಕಿಸ್ತಾನಕ್ಕೆ ಚೀನಾದ 40 j-35 ಯುದ್ಧ ವಿಮಾನ ಪೂರೈಕೆ: ಭಾರತ ಈ ವಿಷಯದಲ್ಲಿ 10 ವರ್ಷ ಹಿಂದಿದೆ!

ಭಾರತ ವಾಯುಪಡೆ ಬಳಿ ಇಲ್ಲದ ಸ್ಲೇಥ್ ವಿಭಾಗಕ್ಕೆ ಸೇರಿದ ಜೆ-35 ಯುದ್ಧ ವಿಮಾನವನ್ನು ಪಾಕಿಸ್ತಾನಕ್ಕೆ ಚೀನಾ ಪೂರೈಸಿದೆ.

ಜೆ-35 ಸ್ಲೇಥ್ 40 ಯುದ್ಧ ವಿಮಾನಗಳನ್ನು ಚೀನಾ ಪೂರೈಸಿದೆ. ಈ ಮೂಲಕ ವಾಯು ಯುದ್ಧದಲ್ಲಿ ಈ ರೀತಿಯ ವಿಮಾನ ಹೊಂದಿದ ಕೆಲವೇ ರಾಷ್ಟ್ರಗಳ ಪಟ್ಟಿಗೆ ಪಾಕಿಸ್ತಾನ ಸೇರಿದಂತಾಗಿದೆ. ಅಲ್ಲದೇ ಭಾರತ ಈ ಯುದ್ಧ ವಿಮಾನ ಕೂಡ ಹೊಂದಿಲ್ಲ. ಅಲ್ಲದೇ 10 ವರ್ಷಗಳಷ್ಟು ಹಿಂದೆ ಉಳಿಯುವಂತಾಗಿದೆ.

ಇತ್ತೀಚೆಗಷ್ಟೇ ಭಾರತ ನಡೆಸಿದ ಆಪರೇಷನಗ ಸಿಂಧೂರ್ ಕಾರ್ಯಚರಣೆಯಲ್ಲಿ ಜರ್ಝರಿತವಾಗಿದ್ದ ಪಾಕಿಸ್ತಾನಕ್ಕೆ ಜೆ35 ಸ್ಲೇಥ್ ಯುದ್ಧ ವಿಮಾನ ಸೇರ್ಪಡೆಯಿಂದ ಆನೆ ಬಲ ಬಂದಂತಾಗಿದೆ.

5ನೇ ತಲೆಮಾರಿನ ಸ್ಲೇಥ್ ವಿಮಾನ ಪಾಕಿಸ್ತಾನದ ಬತ್ತಳಿಕೆಗೆ ಸೇರ್ಪಡೆಯಾಗಿದೆ.

ಸ್ಲೇಥ್ ಅಂದರೆ ಅಡ್ವಾನ್ಸಡ್ ಮಿಡಿಯಂ ಕಂಬ್ಯಾಟ್ ಯುದ್ಧ ವಿಮಾನವಾಗಿದ್ದು, ಇದು ಭಾರತದ ವಾಯುದಾಳಿಯನ್ನು ಸಮರ್ಥವಾಗಿ ನಿಭಾಯಿಸಲು ಇದು ನೆರವಾಗಲಿದೆ. ಅಲ್ಲದೇ ಭಾರತಕ್ಕೆ ಇದು ಪರೋಕ್ಷ ಎಚ್ಚರಿಕೆ ಗಂಟೆಯಾಗಿದೆ.

ಮಾಜಿ ಏರ್ ಪೈಲೆಟ್ ಆಗಿರುವ ಗ್ರೂಪ್ ಕ್ಯಾಪ್ಟನ್ ಅಜಯ್ ಅಲವಾತ್,ಪಾಕಿಸ್ತಾನಕ್ಕೆ 5ನೇ ತಲೆಮಾರಿನ ಸ್ಲೇಥ್ ವಿಮಾನ ಸೇರ್ಪಡೆ ಅಚ್ಚರಿ ವಿಷಯವಲ್ಲ. ಏಕೆಂದರೆ ಕಳೆದ 6 ತಿಂಗಳಿಂದ ಪಾಕಿಸ್ತಾನದ ಪೈಲೆಟ್ ಗಳು ಚೀನಾದಲ್ಲಿ ತರಬೇತಿ ಪಡೆಯುತ್ತಿದ್ದರು ಎಂದು ಹೇಳಿದರು.
ಅಚ್ಚರಿ ವಿಷಯ ಅಂದರೆ ನಿಗದಿತ ಸಮಯಕ್ಕಿಂತ ಮುಂಚೆ ಈ ವಿಮಾನಗಳು ಬಂದಿವೆ ಎಂದು ಅವರು ಸ್ಪಷ್ಟಪಡಿಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments