ಮಧ್ಯಮ ವೇಗಿ ಜಸ್ ಪ್ರೀತ್ ಬುಮ್ರಾ ಆಸ್ಟ್ರೇಲಿಯಾ ವಿರುದ್ಧದ ನಾಲ್ಕನೇ ಟೆಸ್ಟ್ ಪಂದ್ಯದ ಎರಡನೇ ಇನಿಂಗ್ಸ್ ನಲ್ಲಿ ಮತ್ತೊಮ್ಮೆ ಮಿಂಚಿನ ದಾಳಿ ನಡೆಸಿ ಟೆಸ್ಟ್ ಕ್ರಿಕೆಟ್ ನಲ್ಲಿ 200 ವಿಕೆಟ್ ಪೂರೈಸಿದ ದಾಖಲೆ ಬರೆದಿದ್ದಾರೆ.
ಮೆಲ್ಬೋರ್ನ್ ನಲ್ಲಿ ನಡೆಯುತ್ತಿರುವ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದಲ್ಲಿ ಬುಮ್ರಾ ಟ್ರಾವಿಸ್ ಹೆಡ್ ವಿಕೆಟ್ ಪಡೆದು ಟೆಸ್ಟ್ ಕ್ರಿಕೆಟ್ ನಲ್ಲಿ 200 ವಿಕೆಟ್ ಪೂರೈಸಿದರು. ಈ ಮೂಲಕ ಕ್ರಿಕೆಟ್ ದಿಗ್ಗಜರಾದ ಮಾಲ್ಕಂ ಮಾರ್ಷ್, ಜೋಯೆಲ್ ಗಾರ್ನರ್, ಕರ್ಟ್ಲಿ ಆಂಬ್ರೊಸ್ ಮುಂತಾದವರ ದಾಖಲೆಗಳನ್ನು ಮುರಿದರು.
ಇದೇ ವೇಳೆ 20ಕ್ಕಿಂತ ಕಡಿಮೆ ಸರಾಸರಿಯಲ್ಲಿ 200ಕ್ಕೂ ಹೆಚ್ಚು ವಿಕೆಟ್ ಪಡೆದ ಬೌಲಿಂಗ್ ದಿಗ್ಗಜರ ಪಟ್ಟಿಯಲ್ಲಿ ಜಸ್ ಪ್ರೀತ್ ಬುಮ್ರಾ ಅಗ್ರಸ್ಥಾನಕ್ಕೇರುವ ಮೂಲಕ ಇತಿಹಾಸ ಸೃಷ್ಟಿಸಿದರು.
ಈಗಾಗಲೇ ವಿಶ್ವದ ಶ್ರೇಷ್ಠ ಬೌಲರ್ ಗಳ ಪಟ್ಟಿಯಲ್ಲಿ ಸ್ಥಾನ ಗಿಟ್ಟಿಸಿರುವ ಬುಮ್ರಾ 19.26 ಸರಾಸರಿಯಲ್ಲಿ ವಿಕೆಟ್ ಪಡೆದ ಬೌಲರ್ ಎನಿಸಿಕೊಂಡರು. ಮಾಲ್ಕಂ ಮಾರ್ಷಲ್ (20.9), ಜೋಯಲೆ ಗಾರ್ನರ್ (21.0) ಮತ್ತು ಕರ್ಟ್ಲಿ ಆಂಬ್ರೋಸ್ (21.0) ದಾಖಲೆಗಳನ್ನು ಬುಮ್ರಾ ಹಿಂದಿಕ್ಕಿದರು.