ನೋಯ್ಡಾ: ಪ್ರೊ ಕಬಡ್ಡಿ 11ನೇ ಆವೃತ್ತಿಯ ಟೂರ್ನಿಯಲ್ಲಿ ಬೆಂಗಳೂರು ಬುಲ್ಸ್ ಹಾಗೂ ಗುಜರಾತ್ ಟೈಟನ್ಸ್ ನಡುವಣ ಪಂದ್ಯ ರೋಚಕ ಟೈನಲ್ಲಿ ಅಂತ್ಯವಾಗಿದೆ. ಈ ಮೂಲಕ ಬುಲ್ಸ್ ಇದೇ ಮೊದಲ ಬಾರಿಗೆ ಟೂರ್ನಿಯಲ್ಲಿ ಟೈ ಸಾಧಿಸಿದೆ.
ಈ ಪಂದ್ಯದಲ್ಲಿ ಉಭಯ ತಂಡಗಳು ಅಂಕಗಳನ್ನು ಹಂಚಿಕೊಂಡವು. ಬೆಂಗಳೂರು 19 ಅಂಕಗಳೊಂದಿಗೆ 12ನೇ ಸ್ಥಾನ, 29 ಅಂಕಗಳೊಂದಿಗೆ ಜೈಂಟ್ಸ್ 10ನೇ ಸ್ಥಾನದಲ್ಲಿದೆ.
ಮೊದಲ ಪಂದ್ಯದಿಂದ ಉಭಯ ತಂಡಗಳು ಜಿದ್ದಾಜಿದ್ದಿನ ಆಟವನ್ನು ಪ್ರದರ್ಶಿಸಿದವು. ಈ ಹಂತದಲ್ಲಿ ಬುಲ್ಸ್ 15-13 ಅಂಕಗಳಿಂದ ಮುನ್ನಡೆ ಸಾಧಿಸಿತು. ಈ ವೇಳೆ ದಾಳಿ ಹಾಗೂ ಟ್ಯಾಕಲ್‌ನಲ್ಲಿ ತಲಾ 7 ಅಂಕಗಳನ್ನು ಹಾಕಿಕೊಂಡವು. ಈ ಅವಧಿಯಲ್ಲಿ ಯಾವುದೇ ತಂಡ ಆಲೌಟ್ ಆಗಲೇ ಇಲ್ಲ.
ಎರಡನೇ ಅವಧಿಯಲ್ಲಿ ಉಭಯ ತಂಡಗಳು ಭರ್ಜರಿ ಪ್ರದರ್ಶನ ನೀಡಿದವು. ಈ ಪಂದ್ಯದಲ್ಲಿ ಎರಡೂ ತಂಡಗಳು ತಲಾ ಒಂದು ಬಾರಿ ಬೋಸ್ ಅಂಕವನ್ನು ಕಲೆ ಹಾಕಿದವು.
ಈ ವೇಳೆ ಉಭಯ ತಂಡಗಳು ಅಂಕಗಳನ್ನು ಸುಲಭವಾಗಿ ಬಿಟ್ಟುಕೊಡಲಿಲ್ಲ. ಕೊನೆಯ ಎರಡು ನಿಮಿಷದ ಆಟ ನಿಜಕ್ಕೂ ರೋಚಕತೆಯಿಂದ ಕೂಡಿತ್ತು. ಕೊನೆಯ ಕ್ಷಣದ ಆಟದಲ್ಲಿ ಉಭಯ ತಂಡಗಳು ಅಮೋಘ ಆಟದ ಪ್ರದರ್ಶನ ನೀಡಿದವು.
ಮುಂಬಾಗೆ ಗೆಲುವು: ಎರಡನೇ ಪಂದ್ಯದಲ್ಲಿ ಯು ಮುಂಬಾ 43-29 ಅಂಕಗಳೊಂದಿಗೆ ಪುಣೇರಿ ಪಲ್ಟನ್ ವಿರುದ್ಧ ಜಯ ಸಾಧಿಸಿತು. ಈ ಪಂದ್ಯದಲ್ಲಿ ಅಜಿತ್ ಚೌಹಾಣ್ ಅಮೋಘ ಪ್ರದರ್ಶನ ನೀಡಿ 12 ಅಂಕ ಕಲೆ ಹಾಕಿದವು.
ಈ ಪಂದ್ಯದಲ್ಲಿ ಜಯ ಸಾಧಿಸುತ್ತಿದ್ದಂತೆ ಮುಂಬಾ ತಂಡ 51 ಅಂಕಗಳೊಂದಿಗೆ ಅಂಕ ಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೆ ಬಡ್ತಿ ಪಡೆಯಿತು. ಮುಂಬಾ ಟೂರ್ನಿಯಲ್ಲಿ ಸಾಧಿಸಿದ 9ನೇ ಗೆಲುವು ಇದಾಗಿದೆ. ಪುಣೇರಿ ಟೂರ್ನಿಯಲ್ಲಿ ಆರನೇ ಸೋಲು ಕಂಡಿದ್ದು 42 ಅಂಕಗಳನ್ನು ಸೇರಿಸಿದ್ದು, 6ನೇ ಸ್ಥಾನವನ್ನು ಹೊಂದಿದೆ.