ತೈವಾನ್ ನಲ್ಲಿ ರಿಕ್ಟರ್ ಮಾಪಕದಲ್ಲಿ 7.4ರಷ್ಟು ತೀವ್ರತೆಯ ಪ್ರಬಲ ಭೂಕಂಪನ ಸಂಭವಿಸಿದ್ದು, ಕಳೆದ 25 ವರ್ಷಗಳಲ್ಲೇ ದೊಡ್ಡ ಭೂಕಂಪನ ಇದಾಗಿದೆ.
ತೈವಾನ್ ನಲ್ಲಿ ಬುಧವಾರ ಸಂಭವಿಸಿದ ಪ್ರಬಲ ಭೂಕಂಪನದಲ್ಲಿ ಕನಿಷ್ಠ ಒಬ್ಬರು ಮೃತಪಟ್ಟಿದ್ದು, ಹಲವಾರು ಮಂದಿ ಗಾಯಗೊಂಡಿದ್ದಾರೆ. ಈ ಭೂಕಂಪನದ ಪ್ರಭಾವದಿಂದ ಜಪಾನ್ ನ ಯೊನಗುನಿ ದ್ವೀಪದಲ್ಲಿ ಸುನಾಮಿ ಕಾಣಿಸಿಕೊಂಡಿದೆ.
1999ರಲ್ಲಿ ತೈವಾನ್ ನಲ್ಲಿ ಇದಕ್ಕಿಂತ ಕಡಿಮೆ ಅಂದರೆ 7.2 ತೀವ್ರತೆಯಲ್ಲಿ ಭೂಕಂಪನ ಸಂಭವಿಸಿತ್ತು. ಇದರಿಂದ 2500ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದರು.