ಬ್ರಿಟನ್ ಪ್ರಧಾನಿ ಸ್ಥಾನಕ್ಕೆ ಪತಿ ರಿಷಿ ಸುನಕ್ ರಾಜೀನಾಮೆ ಭಾಷಣ ಮಾಡುವ ವೇಳೆ 42,000 ಮೌಲ್ಯದ ಉಡುಪು ಧರಿಸಿದ್ದಕ್ಕಾಗಿ ಸುಧಾಮೂರ್ತಿ ಪುತ್ರಿ ಆಕ್ಷತಾ ಮೂರ್ತಿ ವ್ಯಾಪಕ ಟೀಕೆಗೆ ಗುರಿಯಾಗಿದ್ದಾರೆ.
ಬ್ರಿಟನ್ ಸಾರ್ವತ್ರಿಕ ಚುನಾವಣೆಯಲ್ಲಿ ಕನ್ಸರ್ವೆಟಿವ್ ಪಕ್ಷ ಹೀನಾಯವಾಗಿ ಸೋಲುಂಡಿತ್ತು. ಈ ಮೂಲಕ 14 ವರ್ಷಗಳ ಆಡಳಿತ ಅಂತ್ಯಗೊಂಡರೆ ಲೇಬರ್ ಪಕ್ಷ ಜಯಭೇರಿಯೊಂದಿಗೆ ಅಧಿಕಾರಕ್ಕೇರಿದೆ.
ಪಕ್ಷದ ಹೀನಾಯ ಸೋಲಿನ ಹಿನ್ನೆಲೆಯಲ್ಲಿ ರಿಷಿ ಸುನಕ್ ಪ್ರಧಾನಿ ಕಚೇರಿ ಮುಂಭಾಗದಲ್ಲಿ ರಾಜೀನಾಮೆ ಭಾಷಣ ಮಾಡಿದರು. ಈ ವೇಳೆ ಪತ್ನಿ ಅಕ್ಷತಾ ಮೂರ್ತಿ 42,000 ಮೌಲ್ಯದ ಫ್ರಾಕ್ ಧರಿಸಿ ನಿಂತಿದ್ದರು.
ಅಕ್ಷತಾ ಮೂರ್ತಿ ನೀಲಿ ಮತ್ತು ಬಿಳಿ ಬಣ್ಣದ ಫ್ರಾಕ್ ಧರಿಸಿದ್ದು, ಕೆಳ ಭಾಗದಲ್ಲಿ ಕೆಂಪು ಪಟ್ಟಿ ಇತ್ತು. ಉಡುಪಿ ಆಯ್ಕೆ ಬಗ್ಗೆ ಕೆಲವರು ಅಸಮಾಧಾನ ವ್ಯಕ್ತಪಡಿಸಿದರೆ, ಇನ್ನು ಕೆಲವರು ಉಡುಪಿನ ಬೆಲೆಯ ಬಗ್ಗೆ ಟೀಕೆ ವ್ಯಕ್ತಪಡಿಸಿದ್ದಾರೆ.
ಅಕ್ಷತಾ ಮೂರ್ತಿ ಧರಿಸಿದ ವಸ್ತ್ರ ಜರ್ಮನ್ ಬೂಟ್ ಗಳಾಗಿದ್ದು, ಅವರ ಉಡುಪು ನೋಡುತ್ತಿದ್ದರೆ ಶೀಘ್ರದಲ್ಲೇ ಅವರು ಅಮೆರಿಕಕ್ಕೆ ವಲಸೆ ಹೋಗುವ ಸಾಧ್ಯತೆ ಇದೆ ಎಂದು ಒಬ್ಬರು ಅಭಿಪ್ರಾಯಪಟ್ಟಿದ್ದಾರೆ.