ಏಷ್ಯನ್ ಚಾಂಪಿಯನ್ಸ್ ಟ್ರೋಫಿಯಲ್ಲಿ ಕಂಚಿನ ಪದಕ ಗೆದ್ದ ಸಾಧನೆ ಮಾಡಿದ ಪಾಕಿಸ್ತಾನ ಹಾಕಿ ತಂಡಕ್ಕೆ 100 ಡಾಲರ್ ಅಂದರೆ 28 ಸಾವಿರ ರೂ. ಬಹುಮಾನ ಮೊತ್ತ ಘೋಷಿಸಲಾಗಿದೆ.
ಪಾಕಿಸ್ತಾನ ಹಾಕಿ ಒಕ್ಕೂಟ ಬುಧವಾರ ಪಾಕಿಸ್ತಾನ ತಂಡದ ಸಾಧನೆಗಾಗಿ ಬುಧವಾರ ವಿಶೇಷ ಬಹುಮಾನ ಮೊತ್ತ ಘೋಷಿಸಿದೆ. ಬಹುಮಾನ ಮೊತ್ತದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ಆಗುತ್ತಿದ್ದು, ಇಷ್ಟು ಸಣ್ಣ ಮೊತ್ತವನ್ನು ಬಹುಮಾನ ಮೊತ್ತ ಎಂದು ಘೋಷಿಸುವ ಅವಶ್ಯಕತೆ ಏನಿತ್ತು ಎಂದು ಪ್ರಶ್ನಿಸುತ್ತಿದ್ದಾರೆ.
ಚೀನಾದಲ್ಲಿ ನಡೆದ ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಸೆಮಿಫೈನಲ್ ನಲ್ಲಿ ಆತಿಥೇಯ ಚೀನಾ ವಿರುದ್ಧ ಸೋಲುಂಡು ಫೈನಲ್ ಪ್ರವೇಶಿಸಲು ವಿಫಲವಾಗಿದ್ದ ಪಾಕಿಸ್ತಾನ ತಂಡ 5-2 ಗೋಲುಗಳಿಂದ ಕೊರಿಯಾ ವಿರುದ್ಧ ಜಯ ಸಾಧಿಸಿ ಕಂಚಿನ ಪದಕ ಗೆದ್ದ ಸಾಧನೆ ಮಾಡಿತ್ತು.
ಪಾಕಿಸ್ತಾನ ತಂಡದ ಆಟಗಾರರು ಮೂರನೇ ಸ್ಥಾನಕ್ಕೆ ಕುಸಿದರೂ ಫೈನಲ್ ನಲ್ಲಿ ಚೀನಾ ತಂಡವನ್ನು ಬೆಂಬಲಿಸಿ ಭಾರತ ವಿರುದ್ಧ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿ ವಿವಾದಕ್ಕೆ ಗುರಿಯಾಗಿದ್ದರು.
ಚೀನಾ ತಂಡವನ್ನು 0-1 ಗೋಲಿನಿಂದ ಸೋಲಿಸಿದ ಭಾರತ ತಂಡ 5ನೇ ಬಾರಿ ಪ್ರಶಸ್ತಿ ಗೆದ್ದು ಇತಿಹಾಸ ಬರೆದಿತ್ತು. ಭಾರತ ತಂಡಕ್ಕೆ ಇನ್ನೂ ಬಹುಮಾನ ಮೊತ್ತ ಘೋಷಿಸಿಲ್ಲ.