ಖನಿಜ ಸಂಪುತ್ತುಗಳ ಹಂಚಿಕೆಯಿಂದ ಸಂಗ್ರಹಿಸುವ ಗೌರವ ತೆರಿಗೆಯಲ್ಲೂ ರಾಜ್ಯಗಳಿಗೆ ಪಾಲು ನೀಡಬೇಕು ಎಂದು ಸುಪ್ರೀಂಕೋರ್ಟ್ ಸಂವಿಧಾನ ಪೀಠ ಮಹತ್ವದ ತೀರ್ಪು ನೀಡಿದೆ.
ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ನೇತೃತ್ವದ 9 ನ್ಯಾಯಮೂರ್ತಿಗಳ ಸಂವಿಧಾನ ಪೀಠ 8:1 ಅನುಪಾತದಲ್ಲಿ ಗುರುವಾರ ಮಹತ್ವದ ತೀರ್ಪು ನೀಡಿದ್ದು, ಖನಿಜ ಸಂಪತ್ತು ಮಾರಾಟದಿಂದ ಸಂಗ್ರಹಿಸುವ ತೆರಿಗೆಯಲ್ಲೂ ರಾಜ್ಯಗಳು ಪಾಲು ಪಡೆಯುವ ಹಕ್ಕು ಹೊಂದಿವೆ ಎಂದು ಆದೇಶ ನೀಡಿದೆ.
ಸುಪ್ರೀಂಕೋರ್ಟ್ ತೀರ್ಪಿನಿಂದ ಖನಿಜ ಸಂಪತ್ತು ಹೇರಳವಾಗಿರುವ ಜಾರ್ಖಂಡ್, ಒಡಿಶಾ, ಪಶ್ಚಿಮ ಬಂಗಾಳ, ಮಧ್ಯಪ್ರದೇಶ ಮತ್ತು ರಾಜಸ್ಥಾನ್ ರಾಜ್ಯಗಳಿಗೆ ಅನುಕೂಲವಾಗಲಿದೆ.