ಜೋರಾಗಿ ಗಾಳಿ ಬೀಸಿದ್ದರಿಂದ ಮೇಲ್ಸೆತುವೆ ಕುಸಿದುಬಿದ್ದ ಘಟನೆ ತೆಲಂಗಾಣದ ಪೆಡ್ಡಪಳ್ಳಿ ಜಿಲ್ಲೆಯಲ್ಲಿ ಸೋಮವಾರ ತಡರಾತ್ರಿ ಸಂಭವಿಸಿದೆ.
2017ರಲ್ಲಿ ಪೂರ್ಣಗೊಳ್ಳಬೇಕಿದ್ದ ಮೇಲ್ಸೆತುವೆ ಕಾರಣಾಂತರಗಳಿಂದ ಪೂರ್ಣಗೊಂಡಿರಲಿಲ್ಲ. ಸೋಮವಾರ ರಾತ್ರಿ 9.45ರ ಸುಮಾರಿಗೆ ಜೋರಾಗಿ ಗಾಳಿ ಬೀಸಿದ್ದರಿಂದ 5 ಪಿಲ್ಲರ್ ಗಳ ಪೈಕಿ ಒಂದು ಕುಸಿದುಬಿದ್ದಿದೆ.
ಮೇಲ್ಸೆತುವೆ ಕುಸಿಯುವ ಕೇವಲ ಒಂದು ನಿಮಿಷಕ್ಕೂ ಮುನ್ನ ಮದುವೆ ದಿಬ್ಬಣ ಹೊರಟ್ಟಿದ್ದ 65 ಜನರಿದ್ದ ಬಸ್ ಈ ಮೇಲ್ಸೆತುವೆ ಕೆಳಗೆ ಹೋಗಿತ್ತು. ಇದರಿಂದ ಕೂದಲೆಳೆ ಅಂತರದಲ್ಲಿ ದುರಂತವೊಂದು ತಪ್ಪಿದ್ದು, ಸದ್ಯಕ್ಕೆ ಯಾವುದೇ ಸಾವು-ನೋವು ವರದಿಯಾಗಿಲ್ಲ.
ಮನೈರ್ ನದಿಯ ಮೇಲೆ ಸುಮಾರು 1 ಕಿ.ಮೀ. ಉದ್ದದ ಮೇಲ್ಸೆತುವೆ ನಿರ್ಮಾಣ ಕಾರ್ಯ ನಡೆದಿತ್ತು. ಸುಮಾರು 49 ಕೋಟಿ ರೂ. ಮೊತ್ತದ ಈ ಸೇತುವೆಯನ್ನು 2016ರಲ್ಲಿ ಉದ್ಘಾಟಿಸಲಾಗಿತ್ತು.