Friday, May 29, 2026
Google search engine
Homeರಾಜ್ಯಬಿಸಿಲಿನಿಂದ ಆವಿಯಾಗುತ್ತಿವೆ ರಾಜ್ಯದ 10 ಜಲಾಶಯಗಳ ನೀರು: ಉತ್ತಮ ಮಳೆಯಾದರೂ ನೀರಿಗೆ ಹಾಹಾಕಾರ?

ಬಿಸಿಲಿನಿಂದ ಆವಿಯಾಗುತ್ತಿವೆ ರಾಜ್ಯದ 10 ಜಲಾಶಯಗಳ ನೀರು: ಉತ್ತಮ ಮಳೆಯಾದರೂ ನೀರಿಗೆ ಹಾಹಾಕಾರ?

ರಾಜ್ಯದಲ್ಲಿ ಈ ಬಾರಿ ಉತ್ತಮ ಮಳೆಯಾಗಿದ್ದರೂ ಬಿಸಿಲಿನ ಹೊಡೆತಕ್ಕೆ ರಾಜ್ಯದ ಜಲಾಶಯಗಳ ನೀರು ಸಂಗ್ರಹದಲ್ಲಿ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗುತ್ತಿದ್ದು, ಈ ಬಾರಿ ಬೇಸಿಗೆಯಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಉಂಟಾಗುವ ಭೀತಿ ಇದೆ.

ರಾಜ್ಯದ 13 ಪ್ರಮುಖ ಅಣೆಕಟ್ಟುಗಳ ಪೈಕಿ 10 ಜಲಾಶಯಗಳಲ್ಲಿ ನೀರು ಸಂಗ್ರಹ ಪ್ರಮಾಣದ ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಕಡಿಮೆ ಆಗಿದೆ. ಇದರಿಂದ ಅಂತರ್ಜಲ ಮಟ್ಟದಲ್ಲೂ ಕುಸಿತದಿಂದ ರಾಜ್ಯದ ಹಲವು ಭಾಗಗಳಲ್ಲಿ ನೀರಿಗೆ ಸಮಸ್ಯೆ ಎದುರಾಗುವ ಸಾಧ್ಯತೆ ಇದೆ ಎಂದು ತಜ್ಞರು ಎಚ್ಚರಿಸಿದ್ದಾರೆ.

ಕರ್ನಾಟಕ ರಾಜ್ಯ ನೈಸರ್ಗಿಕ ವಿಪತ್ತು ಮೇಲ್ವಿಚಾರಣಾ ಕೇಂದ್ರದ (ಕೆಎಸ್‌ಎನ್‌ಡಿಎಂಸಿ) ಮಾಹಿತಿಯ ಪ್ರಕಾರ, 2025 ರಲ್ಲಿ ಎಲ್ಲಾ 13 ಅಣೆಕಟ್ಟುಗಳಲ್ಲಿ ನೀರಿನ ಸಂಗ್ರಹವು 535 ಸಾವಿರ ಮಿಲಿಯನ್ ಘನ ಅಡಿ (ಟಿಎಂಸಿಎಫ್‌ಟಿ) ಆಗಿತ್ತು, ಆದರೆ ಈಗ ಅದು 493 ಟಿಎಂಸಿಎಫ್‌ಟಿ ಆಗಿದೆ, 42 ಟಿಎಂಸಿಎಫ್‌ಟಿಯ ವ್ಯತ್ಯಾಸವಾಗಿದೆ.

ಕಳೆದ ವರ್ಷ ತುಂಗಭದ್ರಾ ಅಣೆಕಟ್ಟೆಯಲ್ಲಿ ಸುಮಾರು 40 ಟಿಎಂಸಿಎಫ್‌ಟಿ ನೀರು ಇದ್ದು, ಈಗ ಅದು 24 ಟಿಎಂಸಿಎಫ್‌ಟಿಗೆ ಇಳಿದಿದೆ. ಅದೇ ರೀತಿ, ಲಿಂಗನಮಕ್ಕಿ ಅಣೆಕಟ್ಟೆಯಲ್ಲಿ ಈಗ 87 ಟಿಎಂಸಿಎಫ್‌ಟಿ ಇದೆ, ಕಳೆದ ವರ್ಷ 78 ಟಿಎಂಸಿಎಫ್‌ಟಿ ಇದೆ.

ಸೂಪಾ ಅಣೆಕಟ್ಟಿನ ನೀರಿನ ಮಟ್ಟ 82 ಟಿಎಂಸಿಎಫ್‌ಟಿಯಿಂದ 77 ಅಡಿಗೆ ಇಳಿದಿದೆ. ಕೃಷ್ಣರಾಜ ಜಲಾಶಯದಲ್ಲಿ ಸ್ವಲ್ಪ ಹೆಚ್ಚಳವಾಗಿದೆ. ಕಳೆದ ವರ್ಷ ಇದು 37.88 ಟಿಎಂಸಿಎಫ್‌ಟಿ ಇತ್ತು, ಈಗ ಅದು 38.64 ಟಿಎಂಸಿಎಫ್‌ಟಿ ಆಗಿದೆ. 13 ಅಣೆಕಟ್ಟುಗಳಲ್ಲಿ ಒಟ್ಟು ಸಾಮರ್ಥ್ಯ 895.07 ಟಿಎಂಸಿ ಅಡಿಯಿದೆ. ಆದರೆ ಸದ್ಯ 493.91 ಟಿಎಂಸಿ ಅಡಿಯಿದೆ. ಆಂದರೆ ಸಾಮರ್ಥ್ಯದ ಶೇ. 45 ರಷ್ಟು ಮಾತ್ರ ನೀರು ಸಂಗ್ರಹವಾಗಿದೆ.

ಜಲಾನಯನ ಪ್ರದೇಶಗಳಲ್ಲಿ ಉತ್ತಮ ಮಳೆಯಾಗಿದ್ದರೂ, ಜಲಾಶಯವು ಅದರಲ್ಲಿ ಶೇ, 70 ರಷ್ಟು ಮಾತ್ರ ಸಂಗ್ರಹಿಸಲು ಸಾಧ್ಯವಾಯಿತು ಎಂದು ಹೇಳಿದ್ದಾರೆ. ಕುಡಿಯುವ ನೀರಿನ ಅಗತ್ಯಗಳೇ ಆದ್ಯತೆಯಾಗಿರುವುದರಿಂದ ರೈತರು ಕೃಷಿ ಜಮೀನುಗಳಿಗೆ ನೀರು ಸರಬರಾಜು ಮಾಡದೆ ತೀವ್ರ ಸಂಕಷ್ಟದಲ್ಲಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

ಅಂತರ್ಜಲದ ತೀವ್ರ ಬಳಕೆಯಿಂದಾಗಿ 43 ತಾಲ್ಲೂಕುಗಳು ಈಗಾಗಲೇ ನೀರಿನ ಬಿಕ್ಕಟ್ಟನ್ನು ಎದುರಿಸುತ್ತಿವೆ ಎಂದು ವಿಪತ್ತು ನಿರ್ವಹಣಾ ಘಟಕಗದ ಮೂಲಗಳು ತಿಳಿಸಿವೆ. ಅಲ್ಲದೆ, ಕೊಳವೆಬಾವಿಗಳನ್ನು ಅವಲಂಬಿಸಿರುವ ಬೆಂಗಳೂರಿನ ಕೆಲವು ಪ್ರದೇಶಗಳು ಸಹ ಬಿಕ್ಕಟ್ಟನ್ನು ಎದುರಿಸುತ್ತವೆ.

ಅಂತರ್ಜಲದ ತೀವ್ರ ಶೋಷಣೆಯಿಂದಾಗಿ ರಾಜ್ಯಾದ್ಯಂತ 500 ಕ್ಕೂ ಹೆಚ್ಚು ಹಳ್ಳಿಗಳು ನೀರಿನ ಗುಣಮಟ್ಟದ ಸಮಸ್ಯೆಗಳನ್ನು ಎದುರಿಸಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ತಜ್ಞರು ಜನರಿಗೆ ಕಡಿಮೆ ನೀರನ್ನು ಬಳಸುವಂತೆ ಮತ್ತು ಅಮೂಲ್ಯವಾದ ನೀರನ್ನು ವ್ಯರ್ಥ ಮಾಡದಂತೆ ಮನವಿ ಮಾಡಿದ್ದಾರೆ. ಕುಡಿಯುವ ನೀರು ಆದ್ಯತೆಯಾಗಿರುವುದರಿಂದ, ನೀರನ್ನು ಇತರ ಉದ್ದೇಶಗಳಿಗಾಗಿ ಬಳಸಬಾರದು ಎಂದು ಅವರು ಸಲಹೆ ನೀಡಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments