Thursday, November 21, 2024
Google search engine
Homeತಾಜಾ ಸುದ್ದಿtipu sword ಬ್ರಿಟಿಷರ ವಿರುದ್ಧದ ಯುದ್ಧದಲ್ಲಿ ಬಳಸಿದ್ದ ಟಿಪ್ಪು ಸುಲ್ತಾನ್ ಖಡ್ಗ 3.4  ಕೋಟಿ ರೂ.ಗೆ...

tipu sword ಬ್ರಿಟಿಷರ ವಿರುದ್ಧದ ಯುದ್ಧದಲ್ಲಿ ಬಳಸಿದ್ದ ಟಿಪ್ಪು ಸುಲ್ತಾನ್ ಖಡ್ಗ 3.4  ಕೋಟಿ ರೂ.ಗೆ ಹರಾಜು!

ಬ್ರಿಟಿಷರ ವಿರುದ್ಧದ ಯುದ್ಧದಲ್ಲಿ ಮೈಸೂರು ಹುಲಿ ಟಿಪ್ಪು ಸುಲ್ತಾನ್‌ ಬಳಸಿದ್ದ ಖಡ್ಗ (tipu sword) ಲಂಡನ್‌ ನಲ್ಲಿ 3.4 ಕೋಟಿ ರೂ.ಗೆ ಹರಾಜಾಗಿದೆ.

ಟಿಪ್ಪು ಸುಲ್ತಾನ್‌ ವೈಯಕ್ತಿಕ ಶಸ್ತ್ರಗಾರದ ಭಾಗವಾಗಿದ್ದ ಈ ಖಡ್ಗವನ್ನು ಹರಾಜು ಮಾಡಿರುವುದಾಗಿ  ಬೋನ್‌ ಹ್ಯಾಮ್‌ ಹರಾಜು ಸಂಸ್ಥೆ ಹೇಳಿಕೊಂಡಿದೆ.

ಟಿಪ್ಪು 1799 ರಲ್ಲಿ ಬ್ರಿಟಿಷರ ವಿರುದ್ಧದ ಯುದ್ಧದಲ್ಲಿ ಈ ಖಡ್ಗ ಬಳಸಿದ್ದರು. ಯುದ್ಧದಲ್ಲಿ ಸೋತ ನಂತರ ಆತನ ಖಡ್ಗವನ್ನು ಬ್ರಿಟಿಷ್‌ ಸೇನೆಯ ಕ್ಯಾಪ್ಟನ್‌ ಜೇಮ್ಸ್‌ ಆಂಡ್ರ್ಯೂ ಡಿಕ್‌ ಎಂಬಾತನಿಗೆ ಉಡುಗೊರೆಯಾಗಿ ನೀಡಲಾಗಿತ್ತು.

ಈ ಖಡ್ಗದ ಮೊದಲ ಬಾರಿ ಸೆರಿಂಗಪಟ್ಟಂ ಕದನದಲ್ಲಿ ಬಳಸಲಾಗಿತ್ತು ಎಂದು ಹೇಳಲಾಗಿದೆ. ಸ್ಟೀಲ್ ನಿಂದ ನಿರ್ಮಸಿದ್ದ ಈ ಖಡ್ಗದ ಮೇಲೆ ಮೈಸೂರಿನ ವಿಶಿಷ್ಟ ಗುರುತಾದ ‘ಬುಬ್ರಿ (ಟೈಗರ್ ಸ್ಟ್ರೈಪ್ ಅಥವಾ ಹುಲಿ ಪಟ್ಟೆ)’ ಅಲಂಕಾರ ಮಾಡಲಾಗಿತ್ತು.

ಕತ್ತಿಯನ್ನು ಉಡುಗೊರೆಯಾಗಿ ಪಡೆದಿದ್ದ ಡಿಕ್ 75 ನೇ ಹೈಲ್ಯಾಂಡ್ ರೆಜಿಮೆಂಟ್ ಆಫ್ ಫೂಟ್‌ನಲ್ಲಿ ಸೆರಿಂಗಪಟ್ಟಂನಲ್ಲಿ ಲೆಫ್ಟಿನೆಂಟ್ ಆಗಿ ಸೇವೆ ಸಲ್ಲಿಸಿದ್ದರು. ಯುದ್ಧದ ನಂತರ ಟಿಪ್ಪುವಿನ ದೇಹವನ್ನು ಹುಡುಕುವಲ್ಲಿ ಅವನ ರೆಜಿಮೆಂಟ್ ಸಹಾಯ ಮಾಡಿತ್ತು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments