ಬಿಗ್ ಬಾಸ್ ಕನ್ನಡ ರಿಯಾಲಿಟಿ ಶೋನಲ್ಲಿ 50 ದಿನಗಳನ್ನು ಪೂರೈಸಿದ ಬೆನ್ನಲ್ಲೇ ಉಗ್ರಂ ಮಂಜು ಒಂದೇ ವಾರದಲ್ಲಿ ಎರಡೂ ಸಾಧನೆ ಮಾಡಿ ಗಮನ ಸೆಳೆದಿದ್ದಾರೆ.
ಈ ವಾರ ಅದ್ಭುತ ಪ್ರದರ್ಶನ ನೀಡಿದ್ದೂ ಅಲ್ಲದೇ ಅದೃಷ್ಟದ ಸಹಾಯದಿಂದ ವಾರದ ಕ್ಯಾಪ್ಟನ್ ಆಗಿ ಆಯ್ಕೆಯಾದ ಉಗ್ರಂ ಮಂಜುಗೆ ಕಿಚ್ಚನ ಚಪ್ಪಾಳೆಯೂ ಲಭಿಸಿದೆ. ಈ ಮೂಲಕ ಕಳೆದ 50 ದಿನಗಳ ಹೋರಾಟದ ನಂತರ ಮೊದಲ ಬಾರಿ ಕ್ಯಾಪ್ಟನ್ ಜೊತೆಗೆ ಕಿಚ್ಚನ ಚಪ್ಪಾಳೆಯನ್ನೂ ಗಿಟ್ಟಿಸಿದ್ದಾರೆ.
ಚೆಂಡು ಹಿಡಿಯುವ ಸ್ಪರ್ಧೆಯಲ್ಲಿ ಮಿಂಚಿನಂತೆ ಆಡಿದ ಮಂಜು ಅವರನ್ನು ಪ್ರಶಂಸಿಸಿದ ಸುದೀಪ್ ನಿಮ್ಮ ಸ್ಪೀಡ್ ನೋಡಿದರೆ ಗೊತ್ತಾಗುತ್ತೆ ಎಷ್ಟು ಆಕ್ಟಿವ್ ಆಗಿದ್ದೀರಾ ಎಂಬುದು ಎಂದು ಪ್ರಶಂಸಿಸಿದ್ದಾರೆ.
ಇದೇ ವೇಳೆ ಮನೆಯ ಕ್ಯಾಪ್ಟನ್ ಆಗಿದ್ದ ಭವ್ಯಾ ಗೌಡ ಆಗಿ ಕಾಣಲೇ ಇಲ್ಲ ಎಂದು ಛೇಡಿಸಿದರು. ಅಲ್ಲದೇ ಈ ವಾರದ ಕ್ಯಾಪ್ಟನ್ ಆಗಿದ್ದ ತ್ರಿವಿಕ್ರಮ್ ಮತ್ತು ಮಂಜು ಕಾಣಲೇ ಇಲ್ಲ ಎಂದಾಗ ಭವ್ಯಾ ನಾನೇ ಕ್ಯಾಪ್ಟನ್ ಆಗಿದ್ದೆ ಎಂದರೆ ಹೌದಾ, ಮತ್ತೆ ಕಾಣಲೇ ಇಲ್ಲ. ತ್ರಿವಿಕ್ರಮ್ ಹೇಳಿದಂತೆ ಕೇಳಿಕೊಂಡು ಇದ್ದೀರಿ. ನಾನೇನೋ ತ್ರಿವಿಕ್ರಮ್ ಕ್ಯಾಪ್ಟನ್ ಎಂದು ಭಾವಿಸಿದೆ ಎಂದು ಅವರು ಹೇಳಿದರು.
ಕ್ಯಾಪ್ಟನ್ ಮಂಜು ಎರಡು ಕೊಡುಗೆ ಬೆನ್ನಲ್ಲೇ ದಿನ ಕೊನೆಯಲ್ಲಿ ತ್ರಿವಿಕ್ರಮ್ ಮತ್ತು ಮಂಜು ರಣತಂತ್ರ ರೂಪಿಸುವ ಕುರಿತು ಮಾತನಾಡಿಕೊಂಡ ವೀಡಿಯೋ ಪ್ರದರ್ಶಿಸಿ ಆಘಾತ ನೀಡಿದರು.