Monday, October 21, 2024
Google search engine
HomeUncategorizedBritney Spears: ತನ್ನನ್ನು ತಾನೇ ಮದುವೆ ಆದ ಖ್ಯಾತ ಪಾಪ್ ಗಾಯಕಿ ಬ್ರಿಟ್ನಿ ಸ್ಪಿಯರ್ಸ್!

Britney Spears: ತನ್ನನ್ನು ತಾನೇ ಮದುವೆ ಆದ ಖ್ಯಾತ ಪಾಪ್ ಗಾಯಕಿ ಬ್ರಿಟ್ನಿ ಸ್ಪಿಯರ್ಸ್!

ವಿಶ್ವದ ಖ್ಯಾತ ಪಾಪ್ ಗಾಯಕಿ ಬ್ರಿಟ್ನಿ ಸ್ಪಿಯರ್ಸ್ ತನ್ನನ್ನು ತಾನೇ ಮದುವೆ ಆಗಿದ್ದೇನೆ ಎಂದು ಘೋಷಿಸುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಮದುವೆ ಧರಿಸಿನಲ್ಲಿ ತೆಗೆಸಿಕೊಂಡಿರು ಫೋಟೊ ಹಾಗೂ ವೀಡಿಯೊ ಹಂಚಿಕೊಂಡಿದ್ದಾರೆ.

ಅಕ್ಟೋಬರ್ 21ರಂದು ಬ್ರಿಟ್ನಿ ಸ್ಪಿಯರ್ಸ್ ಸಾಮಾಜಿಕ ಜಾಲತಾಣದಲ್ಲಿ ವೀಡಿಯೋ ಹಂಚಿಕೊಂಡಿದ್ದು, ನನ್ನ ಜೀವನದಲ್ಲಿ ಕೈಗೊಂಡ ಅದ್ಭುತ ನಿರ್ಧಾರ ಇದಾಗಿದೆ. ಶೀಘ್ರದಲ್ಲೇ ನಾನೊಬ್ಬಳೇ ಹನಿಮೂನ್ ಹೋಗಲಿದ್ದೇನೆ ಎಂದು ಹೇಳಿಕೊಂಡಿದ್ದಾರೆ.

ನಾನು ನನ್ನನ್ನು ಮದುವೆ ಆಗಿದ್ದೇನೆ. ಇದು ಎಲ್ಲರಿಗೂ ಮೂರ್ಖತನ ಹಾಗೂ ಮುಜುಗರದ ವಿಷಯವಾಗಿರಬಹುದು. ಆದರೆ ನನ್ನ ಪಾಲಿಗೆ ಇದು ಅತ್ಯಂತ ಸುಂದರವಾದ ನಿರ್ಧಾರವಾಗಿದೆ ಎಂದು ಅವರು ಶೀರ್ಷಿಕೆಯಲ್ಲಿ ಹೇಳಿಕೊಂಡಿದ್ದಾರೆ.

42 ವರ್ಷದ ಬ್ರಿಟ್ನಿ ಸ್ಪಿಯರ್ಸ್ ವೈಟ್ ಗೌನ್ ಧರಿಸಿದ್ದು, ಕಪ್ಪು ಶೂ ಹಾಗೂ ಅದಕ್ಕೆ ಹೊಂದುವ ಸನ್ ಗ್ಲಾಸ್ ಧರಿಸಿರುವ ಫೋಟೊ ಹಂಚಿಕೊಂಡಿದ್ದಾರೆ. ಹನಿಮೂನ್ ಗಾಗಿ ಟ್ರಕ್ಸ್ ಮತ್ತು ಕೈಕೊಸ್ ದ್ವೀಪಕ್ಕೆ ತೆರಳಲಿದ್ದೇನೆ ಎಂದು ಹೇಳಿಕೊಂಡಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments