Thursday, September 19, 2024
Google search engine
HomeUncategorizedಬೆಳ್ಳುಳ್ಳಿ ತರಕಾರಿಯೇ? ಮಸಾಲಾ ಪದಾರ್ಥವೇ? ದಶಕಗಳ ಗೊಂದಲಕ್ಕೆ ತೆರೆ ಎಳೆದ ಕೋರ್ಟ್!

ಬೆಳ್ಳುಳ್ಳಿ ತರಕಾರಿಯೇ? ಮಸಾಲಾ ಪದಾರ್ಥವೇ? ದಶಕಗಳ ಗೊಂದಲಕ್ಕೆ ತೆರೆ ಎಳೆದ ಕೋರ್ಟ್!

ಬೆಳ್ಳುಳ್ಳಿ ತರಕಾರಿಯೇ ಅಥವಾ ಮಸಾಲಾ ಪದಾರ್ಥವೇ ಎಂಬ ಗೊಂದಲಕ್ಕೆ ಮಧ್ಯಪ್ರದೇಶ ಹೈಕೋರ್ಟ್ ಕೊನೆಗೂ ತೆರೆ ಎಳೆದಿದೆ.

ಬೆಳ್ಳುಳ್ಳಿ ತರಕಾರಿಗೆ ಸೇರಿದ್ದು, ಇದನ್ನು ತರಕಾರಿಗಳ ಜೊತೆ ಹಾಗೂ ಮಸಾಲಾ ಪದಾರ್ಥಗಳ ಜೊತೆಗೂ ಮಾರಾಟ ಮಾಡಬಹುದಾಗಿದೆ ಎಂದು ಕೋರ್ಟ್ ತೀರ್ಪು ನೀಡಿದೆ.

ಬೆಳ್ಳುಳ್ಳಿಯನ್ನು ಏನೆಂದು ಪರಿಗಣಿಸುವುದು ಹಾಗೂ ಯಾವ ಮಾರುಕಟ್ಟೆಯಲ್ಲಿ ಮಾರಾಟ ಮಾಡಬೇಕು ಎಂಬ ಗೊಂದಲ ವ್ಯಾಪಾರಿಗಳು ಮತ್ತು ರೈತರಿಗೆ ಗೊಂದಲ ಉಂಟಾಗಿತ್ತು. ಈ ಹಿನ್ನೆಲೆಯಲ್ಲಿ ಹಲವಾರು ವರ್ಷಗಳ ಗೊಂದಲಕ್ಕೆ ತೆರೆ ಎಳೆದ ನ್ಯಾಯಾಲಯ ಬೆಳ್ಳುಳ್ಳಿ ತರಕಾರಿ ಎಂದು ಪರಿಗಣಿಸಲಾಗುವುದು. ಆದರೆ ಅದನ್ನು ತರಕಾರಿ ಮತ್ತು ಮಸಾಲಾ ಪದಾರ್ಥ ಎರಡೂ ಕಡೆಯೂ ಮಾರಾಟ ಮಾಡಬಹುದು ಎಂದು ತಿಳಿಸಿದೆ.

ಬೆಳ್ಳುಳ್ಳಿಯನ್ನು ರುಚಿಗಾಗಿ ಮತ್ತು ಆರೋಗ್ಯಕ್ಕಾಗಿ ಹಲವಾರು ರೀತಿಯ ಖಾದ್ಯಗಳಿಗೆ ಬಳಸಲಾಗುತ್ತದೆ. ಸಸ್ಯಹಾರಿಗಳ ಜೊತೆಗೆ ಮಾಂಸಹಾರಿಗಳು ಕೂಡ ಹೆಚ್ಚಾಗಿ ಬಳಸುತ್ತಾರೆ.

2015ರಲ್ಲಿ ಮಧ್ಯಪ್ರದೇಶ ರೈತರು ಮಂಡಿಯಲ್ಲಿ ತರಕಾರಿ ರೂಪದಲ್ಲಿ ಮಾರಾಟ ಮಾಡಲು ಮುಂದಾದಾಗ ವ್ಯಾಪಾರಿಗಳು ಇದು ಮಸಾಲಾ ಪದಾರ್ಥ ಎಂದು ಮಾರಾಟಕ್ಕೆ ಅಡ್ಡಿಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಆಲೂಗಡ್ಡೆ, ಈರುಳ್ಳಿ ಮತ್ತು ಬೆಳ್ಳುಳ್ಳಿ ಮಾರಾಟಗಾರರ ಸಂಘ ನ್ಯಾಯಾಲಯದ ಮೊರೆ ಹೋಗಿತ್ತು.

1972ರ ಕೃಷಿ ನಿಯಮಗಳ ಪ್ರಕಾರ ಬೆಳ್ಳುಳ್ಳಿಯನ್ನು ತರಕಾರಿ ಎಂದು ಪರಿಗಣಿಸಲಾಗಿತ್ತು. ಈ ಅಂಶವನ್ನು ಆಧರಿಸಿ ನ್ಯಾಯಾಲಯ ತೀರ್ಪು ಪ್ರಕಟಿಸಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments