ಮೊಸಳೆ ತಜ್ಞ ಬ್ರಿಟನ್ ನ ಪ್ರಾಣಿ ತಜ್ಞ ಆಡಂ ಬ್ರಿಟ್ಟಾನ್ 60 ಶ್ವಾನಗಳ ಹತ್ಯೆ ಪ್ರಕರಣದ ವಿಚಾರಣೆ ಅಂತಿಮ ಹಂತ ತಲುಪಿದ್ದು, ಕನಿಷ್ಠ 249 ಕೋಟಿ ರೂ. ಜೈಲು ಶಿಕ್ಷೆಗೆ ಗುರಿಯಾಗುವ ಸಾಧ್ಯತೆ ಇದೆ.
ಶ್ವಾನಗಳ ಉಸ್ತುವಾರಿ ನೋಡಿಕೊಳ್ಳುತ್ತಿದ ಆಡಂ ಬ್ರಿಟ್ಟಾನ್ ಶ್ವಾನಗಳಿಗೆ ಚಿತ್ರಹಿಂಸೆ ನೀಡಿ ಹತ್ಯೆಗೈಯ್ಯುತ್ತಿದ್ದ ಆರೋಪ ಎದುರಿಸುತ್ತಿದ್ದಾರೆ. ಗುರುವಾರ ವಿಚಾರಣೆ ಪೂರ್ಣಗೊಂಡ ಬೆನ್ನಲ್ಲೇ ಬ್ರಿಟ್ಟಾನ್ ಪರ ವಕೀಲರು ಹೊಸ ಅರ್ಜಿ ಸಲ್ಲಿಸಿದ ಕಾರಣ ವಿಚಾರಣೆಯನ್ನು ಆಗಸ್ಟ್ ಗೆ ಮುಂದೂಡಲಾಗಿದೆ.
ಪ್ರಸ್ತುತ ಆಸ್ಟ್ರೇಲಿಯಾದ ಜೈಲಿನಲ್ಲಿರುವ ಆಡಂ ವಿರುದ್ಧ 60 ಪ್ರಕರಣಗಳು ದಾಖಲಾಗಿದ್ದು, ಎಲ್ಲಾ ಪ್ರಕರಣಗಳು ಸಾಬೀತಾಗಿದ್ದು, 249 ವರ್ಷ ಜೈಲು ಶಿಕ್ಷೆಗೆ ಗುರಿಯಾಗುವ ಸಾಧ್ಯತೆ ಇದೆ.
ವಿಚಾರಣೆ ವೇಳೆ ಎನ್ ಟಿ ಸುಪ್ರೀಂಕೋರ್ಟ್ ನ್ಯಾಯಾಧೀಶ ಮೈಕಲ್ ಗ್ರ್ಯಾಂಟ್ ಸಭಿಕರು ಹಾಗೂ ಪ್ರಾಣಿದಯಾ ಸಂಘದ ಕಾರ್ಯಕರ್ತರನ್ನು ಕೋರ್ಟ್ ನಿಂದ ಹೊರಗೆ ಹೋಗುವಂತೆ ಸೂಚಿಸಿದ್ದಾರೆ. ವಿಚಾರಣೆಗೆ ಬರುವ ಮಾಹಿತಿ ಆಘಾತಕಾರಿ ಆಗಿರಬಹುದು. ಇದರಿಂದ ನೋವಾಗುವ ಸಾಧ್ಯತೆ ಇದೆ ಎಂದು ಅವರು ಹೇಳಿದ್ದರು.