ಬೆಂಗಳೂರು: ಕೊನೆಯ ಕ್ಷಣದವರೆಗೂ ಗೊಂದಲದ ಗೂಡಾಗಿದ್ದ ಡಿಕೆ ಶಿವಕುಮಾರ್ ನೇತೃತ್ವದ ಸಚಿವ ಸಂಪುಟ ವಿಸ್ತರಣೆ ಆಗಿದ್ದು, ಒಬ್ಬ ಮಹಿಳೆಯೂ ಇಲ್ಲದೇ 19 ಶಾಸಕರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.
ಬೆಂಗಳೂರಿನ ಲೋಕಭವನದಲ್ಲಿ ಸೋಮವಾರ 4 ಗಂಟೆಗೆ ನಡೆಯಬೇಕಿದ್ದ ಸಚಿವ ಸಂಪುಟ ವಿಸ್ತರಣೆ ಗೊಂದಲದಿಂದಾಗಿ ಒಂದು ಗಂಟೆ ತಡವಾಗಿ ಅಂದರೆ ಸಂಜೆ 5 ಗಂಟೆಗೆ ಪ್ರಮಾಣ ವಚನ ಸ್ವೀಕಾರ ಸಮಾರಂಭ ಜರುಗಿತು.
ಸಚಿವ ಸಂಪುಟ ವಿಸ್ತರಣೆಗೂ ಮುನ್ನ ಸಾಕಷ್ಟು ಗೊಂದಲ ಉಂಟಾಗಿದ್ದು, ಕೊನೆಯ ಗಳಿಗೆಯಲ್ಲಿ ಪಟ್ಟಿಯಲ್ಲಿ ಬದಲಾವಣೆ ಮಾಡಲಾಯಿತು. ಪ್ರಮಾಣ ವಚನ ಸ್ವೀಕರಿಸಲು 20 ಮಂದಿಯ ಪಟ್ಟಿ ಅಂತಿಮಗೊಳಿಸಲಾಗಿತ್ತು. ಆದರೆ ಕೊನೆಯ ಗಳಿಗೆಯಲ್ಲಿ ಗಾಯತ್ರಿ, ಮಾಂಕಾಳಪ್ಪ ಅವರ ಹೆಸರು ಕೈಬಿಟ್ಟು 19 ಮಂದಿ ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿದರು.
ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ನೂತನ ಸಚಿವರಿಗೆ ಪ್ರಮಾಣ ವಚನ ಬೋಧಿಸಿದರು. ಶಿವರಾಜ್ ತಂಗಡಗಿ, ಮಧು ಬಂಗಾರಪ್ಪ, ಸಂತೋಷ್ ಲಾಡ್, ರುದ್ರಪ್ಪ ಲಮಾಣಿ, ಎಸ್.ಎಸ್. ಮಲ್ಲಿಕಾರ್ಜುನ, ಬಸವಂತಪ್ಪ, ಚಲುವರಾಯಸ್ವಾಮಿ, ರಿಜ್ವನ್ ಅರ್ಷದ್, ನರೇಂದ್ರ ಸ್ವಾಮಿ, ಬಸವರಾಜ ರಾಯರೆಡ್ಡಿ, ಲಕ್ಷ್ಮಣ್ ಸವದಿ, ಪುಟ್ಟಲಿಂಗಶೆಟ್ಟಿ, ಎಟಿ. ರಘುರಾಮ್, ಬಾಲಕೃಷ್ಣ, ನಾಗೇಂದ್ರ, ಪುಟ್ಟಲಿಂಗಶೆಟ್ಟಿ ಮುಂತಾದವರು ಪ್ರಮಾಣ ವಚನ ಸ್ವೀಕರಿಸಿದರು.
ಜಾತಿವಾರು ಸಚಿವರು
1. ಡಾ. ಅಜಯ್ ಧರಮ್ ಸಿಂಗ್ (ರಜಪೂತ)- ಜೇವರ್ಗಿ
2. ಎಚ್.ಸಿ.ಬಾಲಕೃಷ್ಣ (ಒಕ್ಕಲಿಗ)- ಮಾಗಡಿ
3. ಕೆ.ಎಸ್.ಬಸವಂತಪ್ಪ (ಎಸ್‌ಸಿ) -ಮಾಯಕೊಂಡ
4. ಬಸವರಾಜ ರಾಯರೆಡ್ಡಿ (ಲಿಂಗಾಯತ)-ಯಲಬುರ್ಗಾ
5. ಚಲುವರಾಯಸ್ವಾಮಿ- (ಒಕ್ಕಲಿಗ)- ಒಕ್ಕಲಿಗ
6. ಲಕ್ಷ್ಮಣ ಸವದಿ (ಲಿಂಗಾಯತ)-ಅಥಣಿ
7. ಮಧುಬಂಗಾರಪ್ಪ (ಈಡಿಗ)-ಸೊರಬ
8. ಎಸ್.ಎಸ್.ಮಲ್ಲಿಕಾರ್ಜುನ (ಲಿಂಗಾಯತ) ದಾವಣಗೆರೆ ಉತ್ತರ
9. ಬಿ.ನಾಗೇಂದ್ರ (ಎಸ್)- ಬಳ್ಳಾರಿ ಗ್ರಾಮೀಣ
10. ನರೇಂದ್ರಸ್ವಾಮಿ (ಎಸ್‌ಸಿ)- ಮಳವಳ್ಳಿ
11. ಪುಟ್ಟರಂಗಶೆಟ್ಟಿ (ಉಪ್ಪಾರ)-ಚಾಮರಾಜನಗರ
12. ಟಿ.ರಘುಮೂರ್ತಿ (ಎಸ್‌ಟಿ) – ಚಳ್ಳಕೆರೆ
13. ರಿಜ್ವಾನ್ ಅರ್ಷದ್ (ಮುಸ್ಲಿಂ) ಶಿವಾಜಿನಗರ
14. ರುದ್ರಪ್ಪ ಲಮಾಣಿ (ಎಸ್‌ಸಿ)- ಹಾವೇರಿ
15. ಸಂತೋಷ್ ಲಾಡ್ (ಮರಾಠಿ)- ಕಲಘಟಗಿ
16. ಶಿವಲಿಂಗೇಗೌಡ (ಒಕ್ಕಲಿಗ) – ಅರಸೀಕೆರೆ
17. ಶಿವರಾಜ್ ತಂಗಡಗಿ (ಎಸ್‌ಸಿ) – ಕನಕಗಿರಿ
18. ವಿಜಯಾನಂದ ಕಾಶಪ್ಪನವರ್ (ಲಿಂಗಾಯತ)-ಹುನಗುಂದ
19. ಬಿ.ಝಡ್.ಜಮೀರ್ ಅಹ್ಮದ್ (ಮುಸ್ಲಿಂ)-ಚಾಮರಾಜಪೇಟೆ



