ಕೇಂದ್ರ ಚುನಾವಣಾ ಆಯೋಗ ಉತ್ತರಪ್ರದೇಶದಲ್ಲಿ ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ ನಡೆಸಿದ್ದು, ಮತದಾರರ ಪಟ್ಟಿಯಿಂದ 2.89 ಕೋಟಿ ಮತದಾರರನ್ನು ಕೈಬಿಟ್ಟಿದೆ.
ಕೇಂದ್ರ ಚುನಾವಣಾ ಆಯೋಗ ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆ ದೇಶಾದ್ಯಂತ ನಡೆಸುತ್ತಿದ್ದು, ಉತ್ತರ ಪ್ರದೇಶದಲ್ಲಿ 2.89 ಕೋಟಿ ಮತದಾರರನ್ನು ಮತದಾರರ ಪಟ್ಟಿಯಿಂದ ಕೈಬಿಡಲಾಗಿದೆ. ಇದರಲ್ಲಿ 46 ಮಂದಿ ಮೃತಪಟ್ಟವರ ಹೆಸರು ಡಿಲಿಟ್ ಮಾಡಲಾಗಿದೆ ಎಂದು ಹೇಳಿದೆ.
ಉತ್ತರ ಪ್ರದೇಶದಲ್ಲಿ 12.56 ಕೋಟಿ ಜನರು ಮತದಾರರು ಇದ್ದಾರೆ. 2025 ಅಕ್ಟೋಬರ್ ನಲ್ಲಿ 15.44 ಕೋಟಿ ಜನರು ಮತದಾರರು ಇದ್ದರು.
ದೇಶದಲ್ಲೇ ಅತೀ ಹೆಚ್ಚು ಜನಸಂಖ್ಯೆ ಹೊಂದಿರುವ ರಾಜ್ಯವಾದ ಉತ್ತರಪ್ರದೇಶದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಸವಾಲಿನದ್ದಾಗಿತ್ತು. ಮತದಾರರ ಪಟ್ಟಿಯಿಂದ ತೆಗೆದುಹಾಕಲಾದ 2.89 ಕೋಟಿ ಮತದಾರರಲ್ಲಿ 2.17 ಮಂದಿ ನಿವಾಸ ಬದಲಿಸಿ ಬೇರೆ ರಾಜ್ಯಗಳಿಗೆ ವಲಸೆ ಹೋಗಿದ್ದರೆ, 46 ಮಂದಿ ಮೃತಪಟ್ಟಿದ್ದಾರೆ.
12,55,56,025 ಮತದಾರರು ಮತದಾರರ ಪಟ್ಟಿಯಲ್ಲಿ ಉಳಿದುಕೊಂಡಿದ್ದಾರೆ. ಈ ಮೂಲಕ ಶೇ.81ರಷ್ಟು ಮತದಾರರ ಪಟ್ಟಿಗೆ ಮರಳಿದ್ದಾರೆ. ಶೇ. 18.7 ಮತದಾರರನ್ನು ಕೈಬಿಡಲಾಗಿದೆ. 2.89 ಕೋಟಿ ಜನರು ಒಟ್ಟಾರೆ ಡಿಲಿಟ್ ಆಗಿರುವ ಮತದಾರರು ಎಂದು ಆಯೋಗ ವಿವರಿಸಿದೆ.



