Saturday, May 16, 2026
Google search engine
Homeಕ್ರೀಡೆ367 ರನ್ ಬಾರಿಸಿದ್ದರೂ ಬ್ರಿಯಾನ್ ಲಾರಾ 400 ರನ್ ದಾಖಲೆ ಮುರಿಯದೇ ಅಚ್ಚರಿ ಮೂಡಿಸಿದ ಮಲ್ಡರ್!

367 ರನ್ ಬಾರಿಸಿದ್ದರೂ ಬ್ರಿಯಾನ್ ಲಾರಾ 400 ರನ್ ದಾಖಲೆ ಮುರಿಯದೇ ಅಚ್ಚರಿ ಮೂಡಿಸಿದ ಮಲ್ಡರ್!

ಬುಲವಾಯೊ: ದಕ್ಷಿಣ ಆಫ್ರಿಕಾದ ನಾಯಕ ವಿಯಾನ್ ಮಲ್ಡರ್, ಟೆಸ್ಟ್ ಕ್ರಿಕೆಟ್ನಲ್ಲಿ ಅತ್ಯಧಿಕ ವೈಯಕ್ತಿಕ ಸ್ಕೋರ್ನ ಬ್ರಿಯಾನ್ ಲಾರಾ ಅವರ ದೀರ್ಘಕಾಲೀನ ದಾಖಲೆಯನ್ನು ಮುರಿಯದಿರಲು ನಿರ್ಧರಿಸಿ ಇನಿಂಗ್ಸ್ ಘೋಷಣೆ ಮಾಡಿ ಅಚ್ಚರಿ ಮೂಡಿಸಿದ್ದಾರೆ.

ಮೊದಲ ಬಾರಿಗೆ ದಕ್ಷಿಣ ಆಫ್ರಿಕಾದ ನಾಯಕನಾಗಿ ಕಣಕ್ಕಿಳಿದ ಮಲ್ಡರ್, ಜಿಂಬಾಬ್ವೆ ವಿರುದ್ಧದ ಎರಡನೇ ಟೆಸ್ಟ್ನ ಎರಡನೇ ದಿನದ ಊಟದ ವಿರಾಮದ ವೇಳೆಗೆ 367 ರನ್ಗಳಿಗೆ ಅಜೇಯರಾಗಿದ್ದರು.

ಅವರು 2004ರಲ್ಲಿ ಆಂಟಿಗುವಾದಲ್ಲಿ ಇಂಗ್ಲೆಂಡ್ ವಿರುದ್ಧ ವೆಸ್ಟ್ ಇಂಡೀಸ್ನ ದಂತಕತೆ ಬ್ರಿಯಾನ್ ಲಾರಾ ಮಾಡಿದ 400 ರನ್ಗಳ ಅಜೇಯ ದಾಖಲೆಗಿಂತ ಕೇವಲ 33 ರನ್ಗಳ ಹಿಂದೆ ಇದ್ದರು.

27 ವರ್ಷದ ಮಲ್ಡರ್, ಟೆಸ್ಟ್ ಕ್ರಿಕೆಟ್ನ ಅತ್ಯಂತ ಐಕಾನಿಕ್ ದಾಖಲೆಯೊಂದನ್ನು ಮುರಿಯುವ ಅವಕಾಶವನ್ನು ತಿರಸ್ಕರಿಸಿ, ಬದಲಿಗೆ ದಕ್ಷಿಣ ಆಫ್ರಿಕಾದ ಮೊದಲ ಇನಿಂಗ್ಸ್ ಅನ್ನು 626-5ರಲ್ಲಿ ಘೋಷಿಸಿದರು. ಮಲ್ಡರ್ ಈ ಬದಲಿಗೆ ಟೆಸ್ಟ್ ಕ್ರಿಕೆಟ್ನ ಐದನೇ ಅತ್ಯಧಿಕ ವೈಯಕ್ತಿಕ ಸ್ಕೋರ್ ಮತ್ತು ದಕ್ಷಿಣ ಆಫ್ರಿಕಾದ ಅತ್ಯುತ್ತಮ ಸ್ಕೋರ್ನೊಂದಿಗೆ ಇನಿಂಗ್ಸ್ ಮುಗಿಸಿದರು.

ಲಾರಾ ಅವರ 2004ರ ಆಂಟಿಗುವಾದ 400 ರನ್ಗಳ ಪ್ರಯತ್ನವು ಎರಡನೇ ಬಾರಿಗೆ ದಾಖಲೆಯನ್ನು ಮುರಿದಿತ್ತು.
ಅವರು 1994ರಲ್ಲಿ ಇಂಗ್ಲೆಂಡ್ ವಿರುದ್ಧ 375 ರನ್ಗಳನ್ನು ಮಾಡಿದ್ದರು, ಆದರೆ 2003ರಲ್ಲಿ ಜಿಂಬಾಬ್ವೆ ವಿರುದ್ಧ ಪತರ್್ನಲ್ಲಿ ಆಸ್ಟ್ರೇಲಿಯಾದ ಮ್ಯಾಥ್ಯೂ ಹೇಡನ್ 380 ರನ್ಗಳೊಂದಿಗೆ ಆ ದಾಖಲೆಯನ್ನು ಮುರಿದಿದ್ದರು.

ಮಲ್ಡರ್ಗಿಂತ ಮುಂಚಿನ ಇತರ ಸ್ಕೋರ್ ಶ್ರೀಲಂಕಾದ ಮಹೇಲ ಜಯವರ್ಧನೆ ಅವರ 2006ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ 374 ರನ್ಗಳಾಗಿದೆ. ಮಲ್ಡರ್, ಟೆಂಬಾ ಬಾವುಮಾ ಮತ್ತು ಕೇಶವ್ ಮಹಾರಾಜ್ರ ಗಾಯಗಳಿಂದಾಗಿ ಕಳೆದ ಮೂರು ಟೆಸ್ಟ್ಗಳಲ್ಲಿ ದಕ್ಷಿಣ ಆಫ್ರಿಕಾದ ಮೂರನೇ ವಿಭಿನ್ನ ನಾಯಕನಾಗಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments