Thursday, May 14, 2026
Google search engine
Homeಕ್ರೀಡೆಭಾರತ ಎ ತಂಡಕ್ಕೆ ವೈಭವ್ ಸೂರ್ಯವಂಶಿ ಪಾದರ್ಪಣೆ: ಟೀಂ ಇಂಡಿಯಾಗೆ ಒಂದೇ ಹೆಜ್ಜೆ ಬಾಕಿ!

ಭಾರತ ಎ ತಂಡಕ್ಕೆ ವೈಭವ್ ಸೂರ್ಯವಂಶಿ ಪಾದರ್ಪಣೆ: ಟೀಂ ಇಂಡಿಯಾಗೆ ಒಂದೇ ಹೆಜ್ಜೆ ಬಾಕಿ!

15 ವರ್ಷದ ಸ್ಫೋಟಕ ಬ್ಯಾಟ್ಸ್ ಮನ್ ವೈಭವ್ ಸೂರ್ಯವಂಶಿ ಶ್ರೀಲಂಕಾದಲ್ಲಿ ನಡೆಯಲಿರುವ ತ್ರಿಕೋನ ಏಕದಿನ ಸರಣಿಗೆ ಪ್ರಕಟಿಸಲಾದ ಭಾರತ ಎ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.

ಐಪಿಎಲ್ ಹಾಗೂ 19 ವರ್ಷದೊಳಗಿನವರ ಕ್ರಿಕೆಟ್ ಪಂದ್ಯಗಳಲ್ಲಿ ಸ್ಫೋಟಕ ಬ್ಯಾಟಿಂಗ್ ನಿಂದ ಸಂಚಲನ ಸೃಷ್ಟಿಸಿರುವ ವೈಭವ್ ಸೂರ್ಯವಂಶಿ ಭಾರತ ಎ ತಂಡದಲ್ಲಿ ಸ್ಥಾನ ಪಡೆಯುವ ಮೂಲಕ ಭಾರತ ತಂಡದಲ್ಲಿ ಸ್ಥಾನ ಪಡೆಯುವ ಸುಳಿವು ನೀಡಿದ್ದಾರೆ.

ಬಿಸಿಸಿಐ ಆಯ್ಕೆ ಸಮಿತಿ ವ್ಯಾಪಕ ಚರ್ಚೆಯ ನಂತರ ವೈಭವ್ ಸೂರ್ಯವಂಶಿಗೆ ಭಾರತ ಎ ತಂಡದಲ್ಲಿ ಸ್ಥಾನ ನೀಡುವ ಮೂಲಕ ಭರ್ಜರಿ ಅವಕಾಶ ನೀಡಿದೆ. ಇದರಿಂದ ಭಾರತ ತಂಡಕ್ಕೆ ಮರಳಲು ವೈಭವ್ ಗೆ ಕೇವಲ ಒಂದು ಹೆಜ್ಜೆ ಮಾತ್ರ ಬಾಕಿ ಇದೆ.

19 ವರ್ಷದೊಳಗಿನವರ ವಿಶ್ವಕಪ್ ನಲ್ಲಿ 80 ಎಸೆತಗಳಲ್ಲಿ 175 ರನ್ ಸಿಡಿಸಿದ್ದ ವೈಭವ್ ಸೂರ್ಯವಂಶಿ ಪ್ರಸ್ತುತ ನಡೆಯುತ್ತಿರುವ ಐಪಿಎಲ್ ನಲ್ಲಿ ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿದ್ದು, ಒಂದು ಶತಕ ಕೂಡ ಬಾರಿಸಿ ಗಮನ ಸೆಳೆದಿದ್ದಾರೆ.

ಭಾರತ ಎ ತಂಡ: ತಿಲಕ್ ವರ್ಮಾ (ನಾಯಕ), ಪ್ರಿಯಾಂಶ್ ಆರ್ಯ, ವೈಭವ್ ಸೂರ್ಯವಂಶಿ, ರಿಯಾನ್ ಪರಾಗ್, ಆಯುಷ್ ಬದೋನಿ, ನಿಶಾಂತ್ ಸಿದು, ಹರ್ಷ್ ದುಬೆ, ಸೂರ್ಯವಂಶ್ ಶಿಂಧೆ, ಪ್ರಭಸಿಮ್ರನ್ ಸಿಂಗ್ (ವಿ.ಕೆ.), ಕುಮಾರ್ ಕುಶಹಾರ (ವಿ.ಕೆ), ವಿಪ್ರಾಜ್ ನಿಗಮ್, ಯಶ್ ಥಾಕೂರ್, ಯಧುವೀರ್ ಸಿಂಗ್, ಅಂಶುಲ್ ಕಮೋಜ್, ಅರ್ಷದ್ ಖಾನ್.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments