Saturday, May 16, 2026
Google search engine
Homeಜಿಲ್ಲಾ ಸುದ್ದಿಕೋಲಾರದಲ್ಲಿ ಬೊಲೆರೋ- ಬೈಕ್ ಗಳ ನಡುವೆ ಡಿಕ್ಕಿ: 5 ಮಂದಿ ದುರ್ಮರಣ

ಕೋಲಾರದಲ್ಲಿ ಬೊಲೆರೋ- ಬೈಕ್ ಗಳ ನಡುವೆ ಡಿಕ್ಕಿ: 5 ಮಂದಿ ದುರ್ಮರಣ

ಬೊಲೆರೊ ವಾಹನ ಮತ್ತು ಬೈಕ್ ಗಳ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ 5 ಮಂದಿ ಮೃತಪಟ್ಟ ದಾರುಣ ಘಟನೆ ಕೋಲಾರದಲ್ಲಿ ಸಂಭವಿಸಿದೆ.

ಮುಳಬಾಗಿಲು ತಾಲೂಕಿನ ನಂಗಲಿ ಎಂಬಲ್ಲಿ ಬುಧವಾರ ಸಂಜೆ ಈ ದುರ್ಘಟನೆ ಸಂಭವಿಸಿದ್ದು, ಬೊಲೆರೊ ಡಿಕ್ಕಿ ಹೊಡೆದ ರಭಸಕ್ಕೆ 3 ಬೈಕ್ ಗಳಲ್ಲಿ ಇದ್ದ 5 ಮಂದಿ ಅಸುನೀಗಿದ್ದಾರೆ.

ಕೂಲಿ ಕೆಲಸ ಮುಗಿಸಿಕೊಂಡು ಕಾರ್ಮಿಕರು ಮನೆಗೆ ಮರಳುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದ್ದು, ಕೋನಕುಂಟೆ ಗ್ರಾಮದ ರಾಧಪ್ಪ (46, ವೆಂಕಟರಾಮಪ್ಪ (45) ಪತ್ನಿ ಅಲಮೇಲಮ್ಮ (30) ಮತ್ತು ಇಬ್ಬರು ಅಪರಿಚಿತರು ಮೃತಪಟ್ಟಿದ್ದಾರೆ.

ನಂಗಲಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ಸಂಭವಿಸಿದ್ದು, ಸ್ಥಳಕ್ಕೆ ದೌಡಾಯಿಸಿರುವ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments