ಚೀನಾ ಗಡಿ ಬಳಿ ನದಿ ದಾಟುವಾಗ ಜೂನಿಯರ್ ಕಮಿಷನ್ ಆಫೀಸರ್ ಸೇರಿದಂತೆ 5 ಭಾರತೀಯ ಯೋಧರು ಕೊಚ್ಚಿ ಹೋದ ಆಘಾತಕಾರಿ ಘಟನೆ ಲೇಹ್ ನ ದೌಲತ್ ಬೇಗ್ ಓಲ್ಡಿಯಲ್ಲಿ ಶನಿವಾರ ಮುಂಜಾನೆ ಸಂಭವಿಸಿದೆ.
ದೈನಂದಿನ ಕರ್ತವ್ಯದ ಅಂಗವಾಗಿ ಶನಿವಾರ ಮುಂಜಾನೆ 3 ಗಂಟೆಗೆ ಮಂದೀರ್ ಭೋರಾದ ಬೋಧಿ ನದಿ ದಾಟುವಾಗ ಈ ದುರ್ಘಟನೆ ಸಂಭವಿಸಿದೆ.
ಲೇಹ್ ನ ಟಿ-24 ಟ್ಯಾಂಕರ್ ಮೂಲಕ 148 ಕಿ.ಮೀ. ದೂರದ ಬೋಧಿ ನದಿಯಲ್ಲಿ ದಿಢೀರನೆ ನೀರಿನ ಪ್ರಮಾಣ ಹೆಚ್ಚಾಗಿದ್ದರಿಂದ ಟಿ-24 ಟ್ಯಾಂಕ್ ಸಮೇತ ಕೊಚ್ಚಿ ಹೋಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ದುರ್ಘಟನೆಗೆ ಆಘಾತ ಮತ್ತು ಶೋಕ ವ್ಯಕ್ತಪಡಿಸಿದ್ದಾರೆ. ನದಿಯಲ್ಲಿ ಕೊಚ್ಚಿ ಯೋಧರ ಕರ್ತವ್ಯವನ್ನು ಮರೆಯಲು ಸಾಧ್ಯವಿಲ್ಲ. ಈ ಆಘಾತಕಾರಿ ಘಟನೆ ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ದೊರೆಯಲಿ ಎಂದು ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.