ಜಪಾನ್ ನ ಈ ಉದ್ಯಮಿ ದಿನಕ್ಕೆ 30 ನಿಮಿಷ ಅಷ್ಟೇ ದಿನ ಮಾಡೋದಂತೆ. ಅದು ಒಂದು ದಿನ, ಎರಡು ದಿನ ಅಲ್ಲ ಬದಲಾಗಿ ಸತತ 12 ವರ್ಷಗಳಿಂದ ಈ 30 ನಿಮಿಷಕ್ಕಿಂತ ಹೆಚ್ಚು ನಿದ್ದೆಯನ್ನೇ ಮಾಡಿಲ್ಲವಂತೆ!
ಪಶ್ಚಿಮ ಜಪಾನ್ ನ ಹ್ಯುಗೊ ನಿವಾಸಿ 40 ವರ್ಷದ ಡೈಸುಕಿ ಹೊರಿ ಈ ವಿಷಯ ಹೇಳಿಕೊಂಡಿದ್ದು, ಕನಿಷ್ಠ ನಿದ್ದೆಗೆ ದೇಹ ಮತ್ತು ಮನಸ್ಸು ಸಿದ್ಧಗೊಳಿಸಿದ್ದು, ಇದರಿಂದ ಆರೋಗ್ಯವಾಗಿದ್ದೇನೆ ಎಂದಿದ್ದಾರೆ.
ಸಂಗೀತ, ಪೇಟಿಂಗ್ ಮತ್ತು ಮೆಕಾನಿಕಲ್ ಡಿಸೈನ್ ವಿಭಾಗದಲ್ಲಿ ಕೆಲಸ ಮಾಡುತ್ತಿರುವ ಡೈಸುಕಿ ಹೊರಿ, ಹೆಚ್ಚು ಕ್ರಿಯಾಶೀಲವಾಗಿ ಮತ್ತು ದುಡಿಮೆ ಹೆಚ್ಚು ಮಾಡುವ ಉದ್ದೇಶದಿಂದ 12 ವರ್ಷಗಳಿಂದ ಕನಿಷ್ಠ ನಿದ್ದೆ ಮಾಡುವ ಅಭ್ಯಾಸ ರೂಢಿಸಿಕೊಂಡಿದ್ದಾಗಿ ತಿಳಿಸಿದ್ದಾರೆ.
ದಿನದಿಂದ ದಿನಕ್ಕೆ ನಿದ್ದೆ ಪ್ರಮಾಣ ಕಡಿಮೆ ಮಾಡಿಕೊಂಡು ಬಂದಿದ್ದು, 45 ನಿಮಿಷದಿಂದ 30 ನಿಮಿಷಕ್ಕೆ ಇಳಿಸಿದ್ದೇನೆ. ವೈದ್ಯರು ಕೂಡ ಹೆಚ್ಚು ಪರಿಣಾಮಕಾರಿಕಾರಿ ಕೆಲಸ ಮಾಡಬೇಕಾದರೆ ನಿದ್ದೆ ಕಡಿಮೆ ಮಾಡಬೇಕು ಎನ್ನುತ್ತಾರೆ. ಅದರಂತೆ ನಿದ್ದೆ ಕಡಿಮೆ ಮಾಡಿ ದುಡಿಮೆ ಹೆಚ್ಚು ಮಾಡುತ್ತಿದ್ದೇನೆ ಎಂದು ಅವರು ಹೇಳಿಕೊಂಡಿದ್ದಾರೆ.
ಊಟಕ್ಕಿಂತ ಮುಂಚೆ ಕಾಫಿ ಕುಡಿಯುವುದರಿಂದ ತೂಕಡಿಕೆ ಬರುವುದಿಲ್ಲ. ಅದೇ ರೀತಿ ಕ್ರೀಡೆಯಲ್ಲಿ ಹೆಚ್ಚುತೊಡಗಿಸಿಕೊಂಡರೆ ನಿದ್ದೆ ಕಡಿಮೆ ಆಗುತ್ತದೆ ಎಂದು ಅವರು ತಮ್ಮ ಆರೋಗ್ಯದ ಗುಟ್ಟು ಬಿಟ್ಟುಕೊಂಡಿದ್ದಾರೆ.
ಟಿವಿ ಸಂದರ್ಶನದಲ್ಲಿ ಸಂದರ್ಶಕ ಅನುಮಾನ ವ್ಯಕ್ತಪಡಿಸಿದಾಗ ನೀವು ನನ್ನನ್ನು ಹಿಂಬಾಲಿಸುತ್ತೀರಾ ಎಂದು ಪ್ರಶ್ನಿಸಿದ್ದಾನೆ. ಇಡೀ ದಿನ ಆತನ ಜೊತೆಗಿದ್ದಾಗ ಡೈಸುಕಿ ಕೇವಲ 26 ನಿಮಿಷ ಮಾತ್ರ ನಿದ್ದೆ ಮಾಡಿದ್ದು, ಉತ್ಸಾಹದಿಂದ ಇರುವುದನ್ನು ಗಮನಿಸಿದ್ದಾರೆ.
ಹೈಸುಕಿ ಹೊರಿ ಅವರ ಚಟುವಟಿಕೆ ಮತ್ತು ನಿದ್ದೆ ಕಡಿಮೆ ಕುರಿತು ಆನ್ ಲೈನ್ ಮಾಹಿತಿ ಪಡೆದ 2100ಕ್ಕೂ ಹೆಚ್ಚು ಜನರು ಅತ್ಯಂತ ಕಡಿಮೆ ನಿದ್ದೆ ಮಾಡುವ ಅಭ್ಯಾಸ ಬೆಳೆಸಿಕೊಂಡಿದ್ದಾರೆ. ಒಬ್ಬ ಅಭಿಮಾನಿ 8 ಗಂಟೆ ನಿದ್ದೆಯಿಂದ 90 ನಿಮಿಷಕ್ಕೆ ಇಳಿಸಿದ್ದಾಗಿ ಹೇಳಿಕೊಂಡಿದ್ದಾನೆ.