Thursday, September 19, 2024
Google search engine
Homeತಾಜಾ ಸುದ್ದಿಒಬ್ಬೊಬ್ಬರನ್ನಾಗಿ ಎಲ್ಲರನ್ನೂ ಸ್ವಚ್ಛಗೊಳಿಸಿ: ಪ್ರಧಾನಿ ಮೋದಿ

ಒಬ್ಬೊಬ್ಬರನ್ನಾಗಿ ಎಲ್ಲರನ್ನೂ ಸ್ವಚ್ಛಗೊಳಿಸಿ: ಪ್ರಧಾನಿ ಮೋದಿ

ಪ್ರಧಾನಿ ಮೋದಿ ಮತ್ತೊಮ್ಮೆ ಆಯ್ಕೆಯಾಗಿ ಬಂದರೆ ದೇಶಕ್ಕೆ ಬೆಂಕಿ ಬೀಳುತ್ತೆ ಎಂದು ರಾಹುಲ್ ಗಾಂಧಿ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿದ ಪ್ರಧಾನಿ ನರೇಂದ್ರ ಮೋದಿ, ಈ ರೀತಿ ಭ್ರಷ್ಟರ ಪರ ಹೇಳಿಕೆ ನೀಡುವ ಒಬ್ಬೊಬ್ಬರನ್ನೂ ಗುರುತಿಸಿ ಸ್ವಚ್ಛಗೊಳಿಸಿ. ಈ ಮೂಲಕ ಮೈದಾನದಲ್ಲಿ ಇಲ್ಲದಂತೆ ಸೋಲಿಸಿ ಶಿಕ್ಷೆ ನೀಡಿ ಎಂದು ಕರೆ ನೀಡಿದರು.

ಉತ್ತರಾಖಂಡದ ರುದ್ರಾಪುರದಲ್ಲಿ ಮಂಗಳವಾರ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ರಾಜವಂಶಸ್ಥ ಕುಟುಂಬದ ಯುವರಾಜ, ಮೋದಿ ಮತ್ತೊಮ್ಮೆ ಪ್ರಧಾನಿ ಆಗಿ ಆಯ್ಕೆಯಾಗಿ ಬಂದರೆ ಎಲ್ಲಾ ಪ್ರತಿಪಕ್ಷಗಳನ್ನು ಮುಗಿಸುತ್ತಾರೆ. ಸಂವಿಧಾನ ಬದಲಿಸುತ್ತಾರೆ. ದೇಶಹೊತ್ತಿ ಉರಿಯಲಿದೆ ಎಂದು ಹೇಳುತ್ತಾರೆ. ತುರ್ತು ಪರಿಸ್ಥಿತಿಯ ಮನಸ್ಥಿತಿಯ ಇವರು ದೇಶದ ಅಭಿವೃದ್ಧಿ ಬಗ್ಗೆ ಕಾಳಜಿ ಹೊಂದಿಲ್ಲ ಎಂದರು.

ಇವರು 60 ವರ್ಷಗಳ ಕಾಲ ದೇಶವನ್ನು ಆಳಿದರು. ಕೇವಲ 10 ವರ್ಷ ಅಧಿಕಾರದಲ್ಲಿ ಇಲ್ಲ ಎಂಬ ಕಾರಣಕ್ಕೆ ದೇಶ ಹೊತ್ತಿ ಉರಿಯುವ ಮಾತನಾಡುತ್ತಾರೆ ಎಂದು ಮೋದಿ ಹೇಳಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments