Saturday, September 28, 2024
Google search engine
Homeಕ್ರೀಡೆಕೆಕೆಆರ್ ತಂಡದ ಗಂಭೀರ್ ಸ್ಥಾನಕ್ಕೆ ಸಿಎಸ್ ಕೆ ಆಲ್ ರೌಂಡರ್ ನೇಮಕ!

ಕೆಕೆಆರ್ ತಂಡದ ಗಂಭೀರ್ ಸ್ಥಾನಕ್ಕೆ ಸಿಎಸ್ ಕೆ ಆಲ್ ರೌಂಡರ್ ನೇಮಕ!

ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮಾಜಿ ಆಲ್ ರೌಂಡರ್ ಡ್ವೈನ್ ಬ್ರಾವೊ ಕೋಲ್ಕತಾ ನೈಟ್ ರೈಡರ್ಸ್ ತಂಡದ ಮೆಂಟರ್ ಆಗಿ ನೇಮಕಗೊಂಡಿದ್ದಾರೆ.

ಭಾರತ ತಂಡದ ಮುಖ್ಯ ಕೋಚ್ ಆಗಿ ನೇಮಕಗೊಂಡ ಗೌತಮ್ ಗಂಭೀರ್ ತೆರವುಗೊಳಿಸಿದ ಕೆಕೆಆರ್ ತಂಡದ ಮೆಂಟರ್ ಆಗಿ ವೆಸ್ಟ್ ಇಂಡೀಸ್ ಆಲ್ ರೌಂಡರ್ ಡ್ವೈನ್ ಬ್ರಾವೊ ನೇಮಕಗೊಂಡಿದ್ದಾರೆ.

ಗಾಯದ ಕಾರಣ 2024ನೇ ಸಾಲಿನ ಕೆರಿಬಿಯನ್ ಲೀಗ್ ನಂತರ ಎಲ್ಲಾ ಮಾದರಿಯ ಕ್ರಿಕೆಟ್ ಗೆ ಡ್ವೈನ್ ಬ್ರಾವೊ ರಾಜೀನಾಮೆ ಘೋಷಿಸಿದ್ದರು. ಇದರ ಬೆನ್ನಲ್ಲೇ ಕೆಕೆಆರ್ ತಂಡದ ಮೆಂಟರ್ ಆಗಿ ನೇಮಕಗೊಂಡಿದ್ದಾರೆ.

ಕೆಕೆಆರ್ ತಂಡದ ಸಿಇಒ ಮೈಸೂರು ವೆಂಕಟೇಶ್ ಟ್ವಿಟರ್ ನಲ್ಲಿ ಈ ವಿಷಯ ಘೋಷಿಸಿದ್ದು, ತಾವು ಪ್ರತಿನಿಧಿಸಿದ ಎಲ್ಲಾ ತಂಡಗಳು ಗೆಲ್ಲಲೇಬೇಕು ಎಂದು ಆಡುತ್ತಿದ್ದ ಡ್ವೈನ್ ಬ್ರಾವೊ ಈಗ ನಮ್ಮ ತಂಡವನ್ನು ಸೇರಿಕೊಂಡಿದ್ದಾರೆ. ತಂಡದ ಮುಂದಿನ ದಿನಗಳಲ್ಲಿ ಮತ್ತಷ್ಟು ಎತ್ತರಕ್ಕೆ ಹೋಗುವ ವಿಶ್ವಾಸವಿದೆ ಎಂದು ಹೇಳಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments