Sunday, September 29, 2024
Google search engine
Homeಕ್ರೀಡೆತಂಡದಲ್ಲೇ ಉಳಿಯುವ ಐಪಿಎಲ್ ಆಟಗಾರರ ಪಟ್ಟಿ: ಲಕ್ನೋದಲ್ಲಿ ಕೆಎಲ್ ರಾಹುಲ್, ಆರ್ ಸಿಬಿಯಲ್ಲಿ ಮ್ಯಾಕ್ಸ್ ವೆಲ್?

ತಂಡದಲ್ಲೇ ಉಳಿಯುವ ಐಪಿಎಲ್ ಆಟಗಾರರ ಪಟ್ಟಿ: ಲಕ್ನೋದಲ್ಲಿ ಕೆಎಲ್ ರಾಹುಲ್, ಆರ್ ಸಿಬಿಯಲ್ಲಿ ಮ್ಯಾಕ್ಸ್ ವೆಲ್?

ಭಾರೀ ಚರ್ಚೆಗೆ ಕಾರಣವಾಗಿದ್ದ ಭಾರತ ತಂಡದ ನಾಯಕ ರೋಹಿತ್ ಶರ್ಮ ಅವರನ್ನು ಮುಂಬೈ ಇಂಡಿಯನ್ಸ್ ಉಳಿಸಿಳ್ಳಲಿದ್ದರೆ, ಕರ್ನಾಟಕದ ಕೆಎಲ್ ರಾಹುಲ್ ಅವರನ್ನು ಲಕ್ನೋ ಸೂಪರ್ ಜೈಂಟ್ಸ್ ಉಳಿಸಿಕೊಳ್ಳುವ ಸಾಧ್ಯತೆ ದಟ್ಟವಾಗಿದ್ದು, ಇದರಿಂದ ಆರ್ ಸಿಬಿಗೆ ರಾಹುಲ್ ಬರುವ ಅವಕಾಶ ಕೈ ತಪ್ಪುವ ಸಾಧ್ಯತೆ ಇದೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕಳೆದ ಬಾರಿ ವಿಫಲರಾಗಿದ್ದ ಗ್ಲೆನ್ ಮ್ಯಾಕ್ಸ್ ವೆಲ್ ಅವರನ್ನು ಉಳಿಸಿಕೊಂಡು ನಾಯಕ ಫಾಫ್ ಡು ಪ್ಲೆಸಿಸ್ ಅವರನ್ನು ಬಿಡುಗಡೆ ಮಾಡಲಿದೆ. ಅಲ್ಲದೇ ವಿಲ್ ಜಾಕ್ಸ್ ಮತ್ತು ಕೆಮರೂನ್ ವೈಟ್ ತಂಡದಲ್ಲೇ ಉಳಿದುಕೊಂಡ ವಿದೇಶೀ ಆಟಗಾರರಾಗಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಅಧಿಕೃತ ಘೋಷಣೆ ಬಾಕಿಯಿದೆ.

ಐಪಿಎಲ್ ಟಿ-20 ಟೂರ್ನಿಯ ಹರಾಜು ಪ್ರಕ್ರಿಯೆಗೆ ದಿನಗಣನೆ ಆರಂಭಗೊಂಡಿದ್ದು, ಶನಿವಾರ 10 ಫ್ರಾಂಚೈಸಿಗಳು ಉಳಿಸಿಕೊಂಡ ಆಟಗಾರರ ಪಟ್ಟಿಯನ್ನು ಬಹುತೇಕ ಅಂತಿಮಗೊಳಿಸಿದ್ದು, ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಹೇಳಿದ ಮಹೇಂದ್ರ ಸಿಂಗ್ ಧೋನಿ ಚೆನ್ನೈ ಸೂಪರ್ ಕಿಂಗ್ಸ್ ಅನ್ ಪ್ಲೈಡ್ ಕ್ರಿಕೆಟಿಗರಾಗಿ 4 ಕೋಟಿ ರೂ. ಮೂಲಧನದೊಂದಿಗೆ ಚೆನ್ನೈ ಉಳಿಯುವ ಸಾಧ್ಯತೆ ಇದೆ.

ತಂಡದಲ್ಲೇ ಉಳಿದುಕೊಂಡ ಆಟಗಾರರ ಪಟ್ಟಿ 

ಚೆನ್ನೈ ಸೂಪರ್ ಕಿಂಗ್ಸ್:

ಋತುರಾಜ್ ಗಾಯಕ್ವಾಡ್, ರವೀಂದ್ರ ಜಡೇಜಾ, ಶಿವಂ ದುಬೆ, ಡ್ಯಾರಿಲ್ ಮಿಚೆಲ್, ಮಥೀಶ ಪತಿರಾನ, ಎಂಎಸ್ ಧೋನಿ.

ಮುಂಬೈ ಇಂಡಿಯನ್ಸ್:

ಹಾರ್ದಿಕ್ ಪಾಂಡ್ಯ, ರೋಹಿತ್ ಶರ್ಮಾ, ಜಸ್ಪ್ರೀತ್ ಬುಮ್ರಾ, ಸೂರ್ಯಕುಮಾರ್ ಯಾದವ್, ಇಶಾನ್ ಕಿಶನ್, ಅನ್ಶುಲ್ ಕಾಂಬೋಜ್*.

ರಾಯಲ್ ಚಾಲೆಂಜರ್ಸ್ ಬೆಂಗಳೂರು:

ವಿರಾಟ್ ಕೊಹ್ಲಿ, ಮೊಹಮ್ಮದ್ ಸಿರಾಜ್, ವಿಲ್ ಜಾಕ್ಸ್, ಗ್ಲೆನ್ ಮ್ಯಾಕ್ಸ್‌ವೆಲ್, ಕ್ಯಾಮೆರಾನ್ ಗ್ರೀನ್, ಯಶ್ ದಯಾಳ್*.

ರಾಜಸ್ಥಾನ್ ರಾಯಲ್ಸ್:

ಸಂಜು ಸ್ಯಾಮ್ಸನ್, ಜೋಸ್ ಬಟ್ಲರ್, ಯಶಸ್ವಿ ಜೈಸ್ವಾಲ್, ಟ್ರೆಂಟ್ ಬೌಲ್ಟ್, ಯುಜ್ವೇಂದ್ರ ಚಹಾಲ್, ಸಂದೀಪ್ ಶರ್ಮಾ.

ಕೋಲ್ಕತ್ತಾ ನೈಟ್ ರೈಡರ್ಸ್:

ಶ್ರೇಯಸ್ ಅಯ್ಯರ್, ರಿಂಕು ಸಿಂಗ್, ಫಿಲ್ ಸಾಲ್ಟ್, ಸುನಿಲ್ ನರೈನ್, ಆಂಡ್ರೆ ರಸೆಲ್, ಹರ್ಷಿತ್ ರಾಣಾ*.

ಗುಜರಾತ್ ಟೈಟಾನ್ಸ್:

ಶುಭಮನ್ ಗಿಲ್, ರಶೀದ್ ಖಾನ್, ಡೇವಿಡ್ ಮಿಲ್ಲರ್, ಸಾಯಿ ಸುದರ್ಶನ್, ಮೊಹಮ್ಮದ್ ಶಮಿ, ರಾಹುಲ್ ತೆವಾಟಿಯಾ*.

ಲಕ್ನೋ ಸೂಪರ್ ಜೈಂಟ್ಸ್:

ಕೆಎಲ್ ರಾಹುಲ್, ಕ್ವಿಂಟನ್ ಡಿ ಕಾಕ್, ನಿಕೋಲಸ್ ಪೂರನ್, ರವಿ ಬಿಷ್ಣೋಯ್, ಮಾರ್ಕಸ್ ಸ್ಟೊಯಿನಿಸ್, ಮಯಾಂಕ್ ಯಾದವ್*.

ದೆಹಲಿ ಕ್ಯಾಪಿಟಲ್ಸ್:

ರಿಷಬ್ ಪಂತ್, ಟ್ರಿಸ್ಟಾನ್ ಸ್ಟಬ್ಸ್, ಮಿಚೆಲ್ ಮಾರ್ಷ್, ಜೇಕ್ ಫ್ರೇಸರ್-ಮೆಕ್‌ಗುರ್ಕ್, ಅಕ್ಸರ್ ಪಟೇಲ್, ಅಭಿಷೇಕ್ ಪೊರೆಲ್*.

ಪಂಜಾಬ್ ಕಿಂಗ್ಸ್:

ಸ್ಯಾಮ್ ಕುರ್ರಾನ್, ಅರ್ಶ್ದೀಪ್ ಸಿಂಗ್, ಕಗಿಸೊ ರಬಾಡ, ಲಿಯಾಮ್ ಲಿವಿಂಗ್ಸ್ಟೋನ್, ಶಶಾಂಕ್ ಸಿಂಗ್*, ಅಶುತೋಷ್ ಶರ್ಮಾ*.

ಸನ್‌ರೈಸರ್ಸ್ ಹೈದರಾಬಾದ್:

ಪ್ಯಾಟ್ ಕಮಿನ್ಸ್, ಅಭಿಷೇಕ್ ಶರ್ಮಾ, ಟ್ರಾವಿಸ್ ಹೆಡ್, ಹೆನ್ರಿಚ್ ಕ್ಲಾಸೆನ್, ಟಿ. ನಟರಾಜನ್, ನಿತೀಶ್ ಕುಮಾರ್ ರೆಡ್ಡಿ*

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments