Thursday, October 24, 2024
Google search engine
Homeಕ್ರೀಡೆಭಾರತ ಹಾಕಿ ಪಡೆಗೆ 5-3ರಿಂದ ರೋಚಕ ಜಯ, ಸರಣಿ ಗೆದ್ದ ಜರ್ಮನಿ!

ಭಾರತ ಹಾಕಿ ಪಡೆಗೆ 5-3ರಿಂದ ರೋಚಕ ಜಯ, ಸರಣಿ ಗೆದ್ದ ಜರ್ಮನಿ!

ಭಾರತ ಹಾಕಿ ತಂಡ ಪೆನಾಲ್ಟಿ ಶೂಟೌಟ್ ನಲ್ಲಿ 5-3 ಗೋಲುಗಳಿಂದ ಜರ್ಮನಿ ತಂಡವನ್ನು ಸೋಲಿಸಿತು. ಈ ಮೂಲಕ 2 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಸಮಬಲ ಸಾಧಿಸಿದರೂ ಪ್ರಶಸ್ತಿ ಜರ್ಮನಿ ಪಾಲಾಯಿತು.

ದೆಹಲಿಯ ಮೇಜರ್ ಧ್ಯಾನ್ ಚಂದ್ ಕ್ರೀಡಾಂಗಣದಲ್ಲಿ ಗುರುವಾರ ನಡೆದ 2ನೇ ಪಂದ್ಯದಲ್ಲಿ ಉಭಯ ತಂಡಗಳು 0-0ಯಿಂದ ಸಮಬಲ ಸಾಧಿಸಿದ್ದವು. ಈ ಹಿನ್ನೆಲೆಯಲ್ಲಿ ಪೆನಾಲ್ಟಿ ಶೂಟೌಟ್ ನಲ್ಲಿ ಭಾರತ 5-3ರಿಂದ ಗೆಲುವು ಸಾಧಿಸಿತು.

ಜರ್ಮನಿ ಮೊದಲ ಪಂದ್ಯದಲ್ಲಿ 3-1ರಿಂದ ಗೆಲುವು ಸಾಧಿಸಿತ್ತು. ಎರಡನೇ ಪಂದ್ಯವನ್ನು ಪೆನಾಲ್ಟಿ ಶೂಟೌಟ್ ನಲ್ಲಿ ಭಾರತ ಗೆದ್ದಿತ್ತು. ಈ ಹಿನ್ನೆಲೆಯಲ್ಲಿ ಜರ್ಮನಿ ಸರಣಿ ಜಯ ಸಾಧಿಸಿದೆ ಎಂದು ಘೋಷಿಸಲಾಯಿತು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments