ಇರಾನ್ ರಾಜಧಾನಿಯ ವಿಮಾನ ನಿಲ್ದಾಣದ ಮೇಲೆ ಇಸ್ರೇಲ್ ಕ್ಷಿಪಣಿ ದಾಳಿ ನಡೆಸಿದ್ದು, ಪ್ರಾಣಹಾನಿಯಾದ ಬಗ್ಗೆ ಯಾವುದೇ ವರದಿಗಳು ಬಂದಿಲ್ಲ.
ಇಸ್ರೇಲ್ ದಾಳಿ ಬೆನ್ನಲ್ಲೇ ಇರಾನ್ ಇಸ್ಫಾನ್, ಶೈರಾಜ್ ಮತ್ತು ತೆಹರ್ರಾನ್ ವಿಮಾನ ನಿಲ್ದಾಣಗಳ ಕಾರ್ಯಚರಣೆ ಕೂಡಲೇ ನಿಲ್ಲಿಸುವಂತೆ ಸೂಚಿಸಿದೆ. ಅಲ್ಲದೇ ದಾಳಿಗೆ ಶೀಘ್ರದಲ್ಲೇ ಪ್ರತ್ಯುತ್ತರ ನೀಡುವುದಾಗಿ ಎಚ್ಚರಿಕೆ ಸಂದೇಶ ರವಾನಿಸಿದೆ.
ಇಸ್ಫಾನ್ ನಗರದಲ್ಲಿ ಬಹುತೇಕ ಅಣುಸ್ಥಾವರಗಳಿವೆ. ಅದರಲ್ಲೂ ನತಾಂನ್ಜ್ ನಲ್ಲಿ ಯೂರೇನಿಯಂ ಕಾರ್ಯಗಾರ ಇದೆ. ಇಲ್ಲಿ ದಾಳಿಯಾದರೆ ಅಪಾರ ಪ್ರಮಾಣದ ಹಾನಿಯಾಗುವ ಸಂಭವವಿದೆ ಎಂದು ಹೇಳಲಾಗಿದೆ.
ಇಸ್ರೇಲ್ ನ ಕ್ಷಿಪಣಿ ಹಾಗೂ ಡ್ರೋಣ್ ಹಲವು ದಾಳಿಯನ್ನು ಇರಾನ್ ವಿಫಲಗೊಳಿಸಿದೆ. ಇದರಿಂದ ಹಾನಿ ಪ್ರಮಾಣ ಕಡಿಮೆ ಇದೆ ಎಂದು ಅಮೆರಿಕ ಶಂಕಿಸಿದೆ.
ಕೆಲವು ದಿನಗಳ ಹಿಂದೆಯಷ್ಟೇ ಇಸ್ರೇಲ್ ಮೇಲೆ ಇರಾನ್ 300ಕ್ಕೂ ಹೆಚ್ಚು ಕ್ಷಿಪಣಿ ದಾಳಿ ನಡೆಸಿತ್ತು. ಬಹುತೇಕ ಕ್ಷಿಪಣಿಗಳನ್ನು ಇಸ್ರೇಲ್ ವಿಫಲಗೊಳಿಸಿದ್ದರಿಂದ ಹೆಚ್ಚಿನ ಹಾನಿ ಸಂಭವಿಸಿರಲಿಲ್ಲ. ಅಲ್ಲದೇ ಈ ದಾಳಿಗೆ ಶೀಘ್ರದಲ್ಲೇ ಉತ್ತರ ನೀಡುವುದಾಗಿ ತಿಳಿಸಿತ್ತು.