ಕ್ರೀಡಾ ಲೋಕದಲ್ಲಿ ಸಂಚಲನ ಸೃಷ್ಟಿಸಿದ ಬಾಕ್ಸಿಂಗ್ ನಲ್ಲಿ ಮಾಜಿ ವಿಶ್ವ ಚಾಂಪಿಯನ್ ಮೈಕ್ ಟೈಸನ್ ೨೭ ವರ್ಷದ ಜಾಕ್ ಪಾಲ್ ವಿರುದ್ಧ ಬಾಕ್ಸಿಂಗ್ ನಲ್ಲಿ ಸೋಲುಂಡಿದ್ದಾರೆ. ಆದರೆ ಸೋತರೂ ಮೈಕ್ ಟೈಸನ್ ಬೃಹತ್ ಮೊತ್ತದ ಬಹುಮಾನ ಜೇಬಿಗಿಳಿಸಿಕೊಂಡಿದ್ದಾರೆ.
ಹೌದು, ಅಮೆರಿಕದ ಟೆಕ್ಸಾಸ್ ನ ಅರ್ಲಿಗ್ಯಾಟನ್ ನಲ್ಲಿ ಭಾರತೀಯ ಕಾಲಮಾನದ ಪ್ರಕಾರ ಶನಿವಾರ ಮುಂಜಾನೆ ನಡೆದ ಜಿದ್ದಾಜಿದ್ದಿನ ಪಂದ್ಯದಲ್ಲಿ ೨೭ ವರ್ಷದ ಜಾಕ್ ಪಾಲ್ 80-72, 79-73, 79-73 ಅಂಕಗಳಿಂದ 58 ವರ್ಷದ ಮೈಕ್ ಟೈಸನ್ ವಿರುದ್ಧ ಜಯಭೇರಿ ಬಾರಿಸಿದ್ದಾರೆ.
ಟೈಸನ್ 97 ಬಾರಿ ಪಂಚ್ ಹೊಡೆಯಲು ಯತ್ನಿಸಿದ್ದು ಇದರಲ್ಲಿ 18 ಮಾತ್ರ ಜಾಕ್ ಗೆ ತಗುಲಿವೆ. ಆದರೆ ಜಾಕ್ 278 ಪಂಚ್ ಬಾರಿಸಲು ಯತ್ನಿಸಿದ್ದು, ಇದರಲ್ಲಿ 78 ಬಾರಿ ಯಶಸ್ಸು ಸಾಧಿಸಿ ಮೇಲುಗೈ ಸಾಧಿಸಿದರು.
58 ವರ್ಷದ ಬಾಕ್ಸಿಂಗ್ ದಂತಕತೆ ಟೈಸನ್ ವಯಸ್ಸು ಸಹಜವಾಗಿ ಪರಿಣಾಮ ಬೀರಿದ್ದರಿಂದ ಸೋಲುಂಡರೂ ೨೦ ದಶಲಕ್ಷ ಡಾಲರ್ ಅಂದರೆ ಸುಮಾರು 169 ಕೋಟಿ ರೂ. ಬಹುಮಾನ ಮೊತ್ತವನ್ನು ಗಳಿಸಿದ್ದಾರೆ.
ಬಾಕ್ಸರ್ ಆಗಿ ಬದಲಾಗಿರುವ ಯೂಟ್ಯೂಬರ್ ಜಾಕ್ ಪಾಲ್ ಬಾಕ್ಸರ್ ಜಾಕ್ ಪಾಲ್ 60 ದಶಲಕ್ಷ ಡಾಲರ್ ಅಂದರೆ ಸುಮಾರು 338 ಕೋಟಿ ರೂ. ಬೃಹತ್ ಮೊತ್ತವನ್ನು ಬಹುಮಾನ ರೂಪವಾಗಿ ಗಳಿಸಿದ್ದಾರೆ.