Thursday, November 21, 2024
Google search engine
HomeಅಪರಾಧHassan ಅತ್ತೆ-ಸೊಸೆ ಜಗಳದಿಂದ ಬೆಸತ್ತು ಗುಂಡು ಹಾರಿಸಿಕೊಂಡ ಪತಿ!

Hassan ಅತ್ತೆ-ಸೊಸೆ ಜಗಳದಿಂದ ಬೆಸತ್ತು ಗುಂಡು ಹಾರಿಸಿಕೊಂಡ ಪತಿ!

ಅತ್ತೆ-ಸೊಸೆ ಜಗಳದಿಂದ ಕೂಸು ಬಡವಾಯ್ತು ಎಂಬ ಮಾತಿದೆ. ಆದರೆ ಇವರಿಬ್ಬರ ಜಗಳದಿಂದ ಬೇಸತ್ತ ಗಂಡ ಬಂದೂಕಿನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಹಾಸನದಲ್ಲಿ ನಡೆದಿದೆ.

ಸಕಲೇಶಪುರ ತಾಲ್ಲೂಕಿನ ಬಾಚೀಹಳ್ಳಿ ಗ್ರಾಮದ ನಿವಾಸಿ ಕರುಣಾಕರ (40) ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಕಾಫಿ ಬೆಳೆಗಾರ ಕರುಣಾಕರಗೆ ಒಂದು ಗಂಡು ಹಾಗೂ ಒಂದು ಹೆಣ್ಣು ಮಗುವಿದ್ದು ಪತ್ನಿ ಹಾಗೂ ಅತ್ತೆ ನಡುವೆ ಹೊಂದಾಣಿಕೆ ಇರದೇ ಪದೇಪದೆ ಜಗಳ ಆಡುತ್ತಿದ್ದರಿಂದ ನೊಂದಿದ್ದ ಎಂದು ಹೇಳಲಾಗಿದೆ.

ತಾಯಿ ಬೇರೆ ಮನೆಯಲ್ಲಿ ವಾಸವಿದ್ದರು. ಅತ್ತೆ-ಸೊಸೆ ಜಗಳದಿಂದ ಕರುಣಾಕರ ಮನನೊಂದಿದ್ದ. ಇಂದು ಬೆಳಗ್ಗೆ ಮನೆಯಲ್ಲಿಯೇ ಬಂದೂಕಿನಿಂದ ಗುಂಡು ಹಾರಿಸಿಕೊಂಡು ಕರುಣಕಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಯಸಳೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಸಕಲೇಶಪುರ ಕ್ರಾಫರ್ಡ್ ಆಸ್ಪತ್ರೆಗೆ ರವಾನಿಸಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments