ನವದೆಹಲಿ: ಕರ್ನಾಟಕದ ನೂತನ ರಾಜ್ಯಪಾಲರಾಗಿ ಸುಧಾ ಯಾದವ್ ಅವರನ್ನು ನೇಮಕ ಮಾಡಿ ರಾಷ್ಟ್ರಪತಿ ದ್ರೌಪದಿ ಮರ್ಮು ಆದೇಶ ಹೊರಡಿಸಿದ್ದಾರೆ.
ರಾಷ್ಟ್ರಪತಿ ಸೋಮವಾರ 6 ರಾಜ್ಯಗಳ ರಾಜ್ಯಪಾಲರನ್ನು ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ.
ಕರ್ನಾಟಕದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಗೆ ಗೇಟ್ ಪಾಸ್ ನೀಡಲಾಗಿದ್ದು, ಅವರ ಜಾಗಕ್ಕೆ ಸುಧಾ ಯಾದವ್ ಅವರನ್ನು ನೇಮಕ ಮಾಡಲಾಗಿದೆ.
ಕೇರಳದ ರಾಜ್ಯಪಾಲ ರಾಜೇಂದ್ರ ವಿಶ್ವನಾಥ್ ಅರ್ಲೆಕರ್ ಅವರನ್ನು ತಮಿಳುನಾಡು ರಾಜ್ಯಪಾಲರನ್ನಾಗಿ ಹಾಗೂ ಸಿಕ್ಕಿಂ ರಾಜ್ಯಪಾಲರಾಗಿದ್ದ ಪ್ರಕಾಶ್ ಮತ್ತೂರ್ ಅವರನ್ನು ಕೇರಳಗೆ ವರ್ಗಾಯಿಸಲಾಗಿದೆ.
ಒಡಿಶಾ ರಾಜ್ಯಪಾಲರಾಗಿ ಬ್ರಿಜ್ ಮೋಹನ್, ಉತ್ತರಾಖಂಡ್ ರಾಜ್ಯಪಾಲರಾಗಿ ಧಾಲ್ ಸಿಂಗ್ ಬಿಸೆನ್ ಮತ್ತು ಸಿಕ್ಕಿಂ ರಾಜ್ಯಪಾಲರಾಗಿ ದ್ಯುಷಂತ್ ಗೌತಮ್ ಅವರನ್ನು ನೇಮಕ ಮಾಡಲಾಗಿದೆ.



