ಅಂಪೈರ್ ಜೊತೆ ಮೈದಾನದಲ್ಲೇ ವಾಗ್ವಾದ ನಡೆಸಿದ್ದಕ್ಕಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸ್ಟಾರ್ ಬ್ಯಾಟ್ಸ್ ಮನ್ ವಿರಾಟ್ ಕೊಹ್ಲಿಗೆ ಪಂದ್ಯ ಶುಲ್ಕದ ಶೇ.50ರಷ್ಟು ದಂಡ ವಿಧಿಸಲಾಗಿದೆ.
ಕೋಲ್ಕತಾದ ಈಡನ್ ಗಾರ್ಡನ್ ಮೈದಾನದಲ್ಲಿ ಭಾನುವಾರ ನಡೆದ ಪಂದ್ಯದ ವೇಳೆ ಅಂಪೈರ್ ಔಟ್ ನೀಡಿದ ತೀರ್ಪನ್ನು ಮೈದಾನದಲ್ಲೇ ಪ್ರಶ್ನಿಸಿದ್ದ ವಿರಾಟ್ ಕೊಹ್ಲಿ ಅನುಚಿತ ವರ್ತನೆ ತೋರಿದ ಹಿನ್ನೆಲೆಯಲ್ಲಿ ದಂಡ ವಿಧಿಸಲಾಗಿದೆ.
ಸೊಂಟದ ಮೇಲ್ಬಾಗಕ್ಕೆ ಬಂದಿದ್ದ ಚೆಂಡನ್ನು ಹೊಡೆಯುವ ಭರದಲ್ಲಿ ವಿರಾಟ್ ಕೊಹ್ಲಿ ಔಟಾಗಿದ್ದರು. ಮೈದಾನದ ಅಂಪೈರ್ ಎಂದು ತೀರ್ಪು ನೀಡಿದ್ದರು. ಇದನ್ನು ಪ್ರಶ್ನಿಸಿ ಕೊಹ್ಲಿ ಮೇಲ್ಮನವಿ ಸಲ್ಲಿಸಿದ್ದರು. ಆದರೆ ಮೂರನೇ ಅಂಪೈರ್ ಕೂಡ ಔಟ್ ಎಂದು ತೀರ್ಪು ನೀಡಿದ್ದರು.
ಮೊದಲು ಬ್ಯಾಟ್ ಮಾಡಿದ ಕೋಲ್ಕತಾ ನೈಟ್ ರೈಡರ್ಸ್ 222 ರನ್ ಗಳಿಸಿತ್ತು. ಆರ್ ಸಿಬಿ 221 ರನ್ ಗಳಿಸುವ ಮೂಲಕ 1 ರನ್ ನಿಂದ ಸೋಲುಂಡಿತ್ತು. ಈ ಮೂಲಕ ಸತತ 6ನೇ ಸೋಲುಂಡು ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲೇ ಉಳಿಯಿತು.