Home ಕ್ರೀಡೆ WPL 2025 ಬೆಂಗಳೂರಲ್ಲಿ ಡಿ.15ರಂದು ಮಹಿಳಾ ಪ್ರೀಮಿಯರ್ ಲೀಗ್ ಮಿನಿ ಹರಾಜು

WPL 2025 ಬೆಂಗಳೂರಲ್ಲಿ ಡಿ.15ರಂದು ಮಹಿಳಾ ಪ್ರೀಮಿಯರ್ ಲೀಗ್ ಮಿನಿ ಹರಾಜು

ಮುಂದಿನ ಆವೃತ್ತಿಯ ಮಹಿಳಾ ಪ್ರೀಮಿಯರ್ ಲೀಗ್‌ಗಾಗಿ ಕ್ರಿಕೆಟಿಗರ ಮಿನಿ ಹರಾಜು ಡಿಸೆಂಬರ್ 15ರಂದು ಬೆಂಗಳೂರಿನಲ್ಲಿ ನಡೆಯಲಿದೆ.

by Editor
0 comments
wpl 2025

ಮುಂದಿನ ಆವೃತ್ತಿಯ ಮಹಿಳಾ ಪ್ರೀಮಿಯರ್ ಲೀಗ್‌ಗಾಗಿ ಕ್ರಿಕೆಟಿಗರ ಮಿನಿ ಹರಾಜು ಡಿಸೆಂಬರ್ 15ರಂದು ಬೆಂಗಳೂರಿನಲ್ಲಿ ನಡೆಯಲಿದೆ.

ಮಹಿಳೆಯರ ಪ್ರೀಮಿಯರ್ ಲೀಗಲ್ಲಿ ಒಟ್ಟು 5 ತಂಡಗಳು ಪಾಲ್ಗೋಳುತ್ತಿವೆ. ಅದರಲ್ಲಿ ಪ್ರತಿ ತಂಡವು 6 ವಿದೇಶಿ ಆಟಗಾರ್ತಿಯರನ್ನು ಒಳಗೊಂಡಂತೆ ಒಟ್ಟು 18 ಆಟಗಾರ್ತಿಯರನ್ನು ತಂಡದಲ್ಲಿ ಹೊಂದಿರಬೇಕು.

ಇದೇ ತಿಂಗಳ ಆರಂಭದಲ್ಲಿ ಎಲ್ಲಾ ತಂಡಗಳು ತಮ್ಮ ಉಳಿಕೆ ಪಟ್ಟಿಯನ್ನು ಪ್ರಕಟಿಸಿದ್ದವು. ಭಾಗಶಃ ತಂಡಗಳು ತಮ್ಮ ಕೋರ್ ತಂಡವನ್ನು ಉಳಿಸಿಕೊಂಡಿದ್ದು, ಕೆಲವೇ ಕೆಲವು ಆಟಗಾರ್ತಿಯರನ್ನು ತಂಡದಿಂದ ಬಿಡುಗಡೆ ಮಾಡಿವೆ.

ಈ ಬಾರಿಯ ಮಿನಿ ಹರಾಜಿನಲ್ಲಿ ಇಂಗ್ಲೆಂಡ್ ನಾಯಕಿ ಹೀದರ್ ನೈಟ್, ನ್ಯೂಜಿಲೆಂಡ್ ವೇಗದ ಬೌಲರ್ ಲೀ ತಾಹುಹು, ವೆಸ್ಟ್ ಇಂಡೀಸ್ ಆಲ್ ರೌಂಡರ್ ಡೇಂಡ್ರಾ ಡಾಟಿನ್, ಭಾರತದ ಆಲ್ ರೌಂಡರ್ ಸ್ನೇಹ್ ರಾಣಾ, ಲೆಗ್ ಸ್ಪಿನ್ನರ್ ಪೂನಂ ಯಾದವ್ ಮತ್ತು ಕನ್ನಡತಿ ವೇದಾ ಕೃಷ್ಣಮೂರ್ತಿ ಕೂಡ ಕಾಣಿಸಿಕೊಳ್ಳಲಿದ್ದಾರೆ.

banner

ಯಾರ ಕೈಲಿ ಎಷ್ಟು ಹಣ

ವಾಸ್ತವವಾಗಿ ಡಬ್ಲ್ಯುಪಿಎಲ್ ಹರಾಜಿನಲ್ಲಿ ಪ್ರತಿ ತಂಡಗಳ ಬಳಿ ಗಾತ್ರ 15 ಕೋಟಿ ರೂ. ಇರಲಿದೆ. ಇದೀಗ ಮಿನಿ ಹರಾಜು ನಡೆಯುತ್ತಿರುವ ಕಾರಣ ಫ್ರಾಂಚೈಸಿಗಳ ಬಳಿ ಕಡಿಮೆ ಹಣವಿರಲಿದೆ.

ಅದರಲ್ಲಿ ಗುಜರಾತ್ ಜೈಂಟ್ಸ್ ತಂಡವು ಗರಿಷ್ಠ 4.40 ಕೋಟಿ ರೂ.ಗಳೊಂದಿಗೆ ಹರಾಜಿಗೆ ಪ್ರವೇಶಿಸಲಿದ್ದು, ಈ ತಂಡವು ಕೇವಲ 4 ಸ್ಲಾಟ್ ಗಳನ್ನು ಭರ್ತಿ ಮಾಡಬೇಕಿದೆ. ಯುಪಿ ವಾರಿಯರ್ಸ್ ತಂಡದ ಬಳಿ 3.90 ಕೋಟಿ ರೂ. ಇದ್ದು, ಹರಾಜಿನಲ್ಲಿ ಗರಿಷ್ಠ 3 ಆಟಗಾರ್ತಿಯರನ್ನು ಖರೀದಿಸಬೇಕಾಗಿದೆ.

ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಈ ಬಾರಿ ಒಟ್ಟು 14 ಆಟಗಾರ್ತಿಯರನ್ನು ತಂಡದಲ್ಲಿ ಉಳಿಸಿಕೊಂಡಿಸಿದೆ. ಇದೀಗ ಅದರ ಬಳಿ 3.25 ಕೋಟಿ ರೂಪಾಯಿ ಉಳಿದಿದ್ದು, ಗರಿಷ್ಠ 4 ಆಟಗಾರ್ತಿಯರನ್ನು ಖರೀದಿಸಬಹುದಾಗಿದೆ. ಉಳಿದಂತೆ ಮುಂಬೈ ಇಂಡಿಯನ್ಸ್ ಬಳಿ 2.65 ಕೋಟಿ ರೂ. ಇದೆ. ಅತ್ತ ಡೆಲ್ಲಿ ತಂಡ 14 ಆಟಗಾರರನ್ನು ಉಳಿಸಿಕೊಂಡಿದ್ದು, ಅದರ ಬಳಿ ಕೇವಲ 2.5 ಕೋಟಿ ರೂ. ಹಣವಿದೆ.

You may also like

Leave a Comment

Soledad is the Best Newspaper and Magazine WordPress Theme with tons of options and demos ready to import. This theme is perfect for blogs and excellent for online stores, news, magazine or review sites.

Buy Soledad now!

Edtior's Picks

Latest Articles

Latest news
ಟಿ-20ಯಲ್ಲಿ 11 ಬೌಲರ್ ಗಳನ್ನು ಬಳಸಿ ದಾಖಲೆ ಬರೆದ ದೆಹಲಿ! T20: ಕರ್ನಾಟಕಕ್ಕೆ 2ನೇ ಗೆಲುವಿನ `ಶ್ರೇಯಸ್’ WPL 2025 ಬೆಂಗಳೂರಲ್ಲಿ ಡಿ.15ರಂದು ಮಹಿಳಾ ಪ್ರೀಮಿಯರ್ ಲೀಗ್ ಮಿನಿ ಹರಾಜು ಮೈತ್ರಿ ಮೀಟಿಂಗ್ ರದ್ದು: ಕೊನೆ ಕಾಣದ ಮಹಾ `ಸಿಎಂ’ ಬಿಕ್ಕಟ್ಟು! ಸಂಭಲ್ ಮಸೀದಿ ಸರ್ವೇಗೆ ಸುಪ್ರೀಂ ತಡೆ: ಉತ್ತರ ಪ್ರದೇಶ ಸರ್ಕಾರಕ್ಕೆ ಎಚ್ಚರಿಕೆ ಪಶ್ಚಿಮ ಬಂಗಾಳ: ಉಪ ಚುನಾವಣೆಯಲ್ಲೂ ಸೋತ ಬಿಜೆಪಿಯಲ್ಲಿ ತಾರಕಕ್ಕೇರಿದ ಭಿನ್ನಮತ Fengal Cyclone ನಾಳೆ ಮಧ್ಯಾಹ್ನ ಫೆಂಗಲ್ ಚಂಡಮಾರುತ ತಮಿಳುನಾಡು ಪ್ರವೇಶ! Law News ಸಂಬಂಧ ಮುರಿದರೆ ಆತ್ಮಹತ್ಯೆಗೆ ಪ್ರಚೋದನೆಯಲ್ಲ: ಸುಪ್ರೀಂಕೋರ್ಟ್ ಮಹತ್ವದ ತೀರ್ಪು ಚಂದ್ರಶೇಖರ್ ಸ್ವಾಮೀಜಿಗೆ ಸಂಕಷ್ಟ: ಡಿ.2ರಂದು ವಿಚಾರಣೆಗೆ ಹಾಜರಾಗಲು ನೋಟಿಸ್ ಜಾರಿ! ಒಕ್ಕಲಿಗ ಸ್ವಾಮೀಜಿ ಮುಟ್ಟಿದರೆ ಸಮುದಾಯ ತಿರುಗಿ ಬೀಳಲಿದೆ: ಆರ್.ಅಶೋಕ ಎಚ್ಚರಿಕೆ