Tuesday, May 19, 2026
Google search engine
Homeಕ್ರೀಡೆಚೆನ್ನೈ ಸೋಲಿಸಿದ ಎಸ್‌ಆರ್‌ಎಚ್, ಗುಜರಾತ್‌ ಟೈಟಾನ್ಸ್‌ ಪ್ಲೇಆಫ್‌ ಗೆ ಲಗ್ಗೆ

ಚೆನ್ನೈ ಸೋಲಿಸಿದ ಎಸ್‌ಆರ್‌ಎಚ್, ಗುಜರಾತ್‌ ಟೈಟಾನ್ಸ್‌ ಪ್ಲೇಆಫ್‌ ಗೆ ಲಗ್ಗೆ

5 ಬಾರಿಯ ಚಾಂಪಿಯನ್‌ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡವನ್ನು 5 ವಿಕೆಟ್‌ ಗಳಿಂದ ಸೋಲಿಸಿದ ಸನ್‌ ರೈಸರ್ಸ್‌ ಹೈದರಾಬಾದ್‌ ತಂಡ ಐಪಿಎಲ್‌ ಟಿ-20ಟೂರ್ನಿಯಲ್ಲಿ ಪ್ಲೇಆಫ್‌ ಪ್ರವೇಶಿಸಿದ್ದೂ ಅಲ್ಲದೇ ತನ್ನ ಜೊತೆ ಗುಜರಾತ್‌ ಟೈಟಾನ್ಸ್‌ ತಂಡದ ಸ್ಥಾನವನ್ನೂ ಭದ್ರಗೊಳಿಸಿತು.

ಸೋಮವಾರ ಚೆನ್ನೈನಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡವನ್ನು 7 ವಿಕೆಟ್‌ ಗೆ 180 ರನ್‌ ಗೆ ಕಟ್ಟಿ ಹಾಕಿದ ಸನ್‌ ರೈಸರ್ಸ್‌ ಹೈದರಾಬಾದ್‌ ತಂಡ ಒಂದು ಓವರ್‌ ಬಾಕಿ ಇರುವಂತೆಯೇ ೫ ವಿಕೆಟ್‌ ಕಳೆದುಕೊಂಡು ಜಯಭೇರಿ ಬಾರಿಸಿತು.

ಈ ಮೂಲಕ ಎಸ್‌ ಆರ್‌ ಎಚ್‌ 16 ಅಂಕದೊಂದಿಗೆ ಪ್ಲೇಆಫ್‌ ನಲ್ಲಿ ತನ್ನ ಸ್ಥಾನ ಖಚಿತಪಡಿಸಿಕೊಂಡಿತು. ಗುಜರಾತ್‌ ಟೈಟಾನ್ಸ್‌ ಕೂಡ ಪ್ಲೇಆಫ್‌ ಪ್ರವೇಶಿಸಿದರೆ ಚೆನ್ನೈ ಸೂಪರ್‌ ಕಿಂಗ್ಸ್‌ ಹಾದಿ ದುರ್ಗಮಗೊಂಡಿತು.

ವಿಕೆಟ್‌ ಕೀಪರ್‌ ಇಶಾನ್‌ ಕಿಶನ್‌ ಮತ್ತು ಹೆನ್ರಿಚ್‌ ಕ್ಲಾಸೆನ್‌ ಮೂರನೇ ವಿಕೆಟ್‌ ಗೆ 77 ರನ್‌ ಜೊತೆಯಾಟದಿಂದ ತಂಡದ ಪರ ಹೋರಾಟ ನಡೆಸಿ ಮಧ್ಯಮ ಕ್ರಮಾಂಕದ ಬಲ ತುಂಬಿದರು. ಇಶಾನ್‌ ಕಿಶನ್‌ 47 ಎಸೆತಗಳಲ್ಲಿ 7 ಬೌಂಡರಿ ಮತ್ತು 3 ಸಿಕ್ಸರ್‌ ಒಳಗೊಂಡ 70 ರನ್‌ ಬಾರಿಸಿ ಔಟಾದರೆ, ಕ್ಲಾಸೆನ್‌ ೨೬ ಎಸೆತಗಳಲ್ಲಿ 6 ಬೌಂಡರಿ ಮತ್ತು 2 ಸಿಕ್ಸರ್‌ ಸಹಾಯದಿಂದ 47 ರನ್‌ ಗಳಿಸಿದ್ದಾಗ ಔಟಾಗಿ ಅರ್ಧಶತಕದಿಂದ ವಂಚಿತರಾದರು.

ನಂತರ ಬಂದ ಬಾಲಂಗೋಚಿಗಳು ಗೆಲುವಿನ ಹಾದಿ ಸುಗಮವಾಗಿದ್ದರಿಂದ ಅಲ್ಪಸ್ವಲ್ಪ ರನ್‌ ಗಳಿಸಿ ಗೆಲುವು ತಂದುಕೊಟ್ಟರು.

ಇದಕ್ಕೂ ಮುನ್ನ ಬ್ಯಾಟ್‌ ಮಾಡಿದ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡ ನಾಯಕ ಪ್ಯಾಟ್‌ ಕಮಿನ್ಸ್‌ ದಾಳಿಗೆ ತತ್ತರಿಸಿ ನಿಯಮಿತವಾಗಿ ವಿಕೆಟ್‌ ಕಳೆದುಕೊಂಡಿದ್ದರಿಂದ ದೊಡ್ಡ ಮೊತ್ತ ಕಲೆಹಾಕುವಲ್ಲಿ ವಿಫಲವಾಯಿತು. ಅಲ್ಲದೇ ಕ್ಲಾಸೆನ್‌ ಅವರಿಗೆ ಜೀವದಾನ ನೀಡಿದ್ದು ತಂಡಕ್ಕೆ ದುಬಾರಿ ಆಯಿತು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments