Tuesday, May 19, 2026
Google search engine
Homeದೇಶಟೆಂಪೊ ಮೇಲೆ ಬಿದ್ದ ಕಂಟೇನರ್ ಲಾರಿ: 13 ಮಂದಿ ದುರ್ಮರಣ

ಟೆಂಪೊ ಮೇಲೆ ಬಿದ್ದ ಕಂಟೇನರ್ ಲಾರಿ: 13 ಮಂದಿ ದುರ್ಮರಣ

ಪಲ್ಗರ್: ಅತೀವೇಗವಾಗಿ ಸಂಚರಿಸುತ್ತಿದ್ದ ಕಂಟೇನರ್ ಲಾರಿ ಪಲ್ಟಿ ಹೊಡೆದು ಟೆಂಪೊ ಮೇಲೆ ಬಿದ್ದ ಪರಿಣಾಮ 13 ಮಂದಿ ಮೃತಪಟ್ಟ ದಾರುಣ ಘಟನೆ ಮಹಾರಾಷ್ಟ್ರದಲ್ಲಿ ಸಂಭವಿಸಿದೆ.

ಮಹಾರಾಷ್ಟ್ರದ ಪಾಲ್ಗರ್ ನ ಮುಂಬೈ- ಅಹಮದಾಬಾದ್ ಹೆದ್ದಾರಿಯಲ್ಲಿ ಸೋಮವಾರ ಸಂಜೆ ಈ ದುರ್ಘಟನೆ ಸಂಭವಿಸಿದ್ದು, 25ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ.

50 ಪ್ರಯಾಣಿಕರಿದ್ದ ಟೆಂಪೊ ರಾಂಗ್ ಸೈಡಲ್ಲಿ ಸಂಚರಿಸುತ್ತಿತ್ತು. ಈ ವೇಳೆ ಅತೀ ವೇಗದಿಂದ ಬರುತ್ತಿದ್ದ ಕಂಟೇನರ್ ಲಾರಿ ನಿಯಂತ್ರಣ ತಪ್ಪಿ ಟೆಂಪೊ ಮೇಲೆ ಬಿದ್ದಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments