ನಕಲಿ ಮಾರಾಟಗಾರರು ಹಾಗೂ ನಕಲಿ ಗ್ರಾಹಕರನ್ನು ಸೃಷ್ಟಿಸಿ ಆನ್‌ಲೈನ್ ಇ-ಕಾಮರ್ಸ್ ವೇದಿಕೆ ಮೀಶೋ ಕಂಪನಿಗೆ ವಂಚಿಸಿದ್ದ ಗುಜರಾತ್ ಮೂವರು ಆರೋಪಿಗಳನ್ನು ಸಿಸಿಬಿ ಸೈಬರ್ ಕ್ರೈಂ ಪೊಲೀಸರು ಬಂಧಿಸಿದ್ದಾರೆ.
ಗುಜರಾತ್ ನ ಸೂರತ್ ನ ಉತ್ತಮ್ ಕುಮಾರ್ (31) ಪ್ರತಾಪ್ ಬಾಯ್ (21) ಹಾಗೂ ಮೌಲಿಕ್ (20) ಬಂಧಿತ ಆರೋಪಿಗಳಾಗಿದ್ದಾರೆ ಎಂದು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಮೀಶೋ ಕಂಪನಿ ನೋಡಲ್ ಅಧಿಕಾರಿಯು ಕಳೆದ ಜುಲೈ 1ರಂದು ಸಲ್ಲಿಸಿದ ದೂರಿನಲ್ಲಿ ಕಂಪನಿಯು ಆಪ್ ಮೂಲಕ ಆನ್‌ಲೈನ್‌ನಲ್ಲಿ ಗ್ರಾಹಕರುಗಳು ವಿವಿಯ ವಸ್ತುಗಳನ್ನು ಖರೀದಿಸಬಹುದು. ಈ ರೀತಿ ಖರೀದಿಸಿದ ವಸ್ತುಗಳಿಗೆ ಗ್ರಾಹಕರು ಆನ್‌ಲೈನ್ ಅಥವಾ ನಗದಾಗಿ ಹಣವನ್ನು ನೀಡುತ್ತಾರೆ.
ಈ ಕಂಪನಿಯಲ್ಲಿ ಗುಜರಾತ್ ಮೂಲದ ಸರಬರಾಜುದಾರರು 3ನೇ ಪಾರ್ಟಿ ವಿಜೆಂಟ್‌ಗಳ ಜೊತೆ ಕೈಜೋಡಿಸಿ, ಗ್ರಾಹಕರುಗಳನ್ನು ಸೃಷ್ಟಿಸಿ, ಕಳೆದ ಜನವರಿಯಿಂದ ಜುಲೈವರೆಗೆ 7 ತಿಂಗಳ ಅವಧಿಯಲ್ಲಿ 5 ಕೋಟಿ 50 ಲಕ್ಷ ರೂ. ನಷ್ಟ ಉಂಟು ಮಾಡಿದ್ದಾರೆ ಎಂದು ತಿಳಿಸಿದ್ದರು.
ಪ್ರಕರಣದ ತನಿಖೆಯನ್ನು ಸೈಬರ್ ಕ್ರೈಂ ಪೊಲೀಸರು, ವಿವಿಯ ಆಯಾಮಗಳಲ್ಲಿ ತನಿಖೆಯನ್ನು ಕೈಗೊಂಡು, ಮೀಶೋ ಕಂಪನಿಯಿಂದ ಆನ್‌ಲೈನ್ ಮುಖಾಂತರ ಹಣವನ್ನು ವರ್ಗಾವಣೆ ಮಾಡಿಕೊಂಡ ಬ್ಯಾಂಕ್ ಖಾತೆಯ ವಿವರ ಮತ್ತು ಕೃತ್ಯಕ್ಕೆ ಉಪಯೋಗಿಸಿದ ಹಲವಾರು ಮೊಬೈಲ್ ಪೋನ್ ನಂಬರ್‌ಗಳ ಬಗ್ಗೆ ಮಾಹಿತಿಯನ್ನು ಸಂಗ್ರಹಿಸಿ, ಈ ಪ್ರಕರಣದಲ್ಲಿ ವಂಚನೆ ಮಾಡಿದವರ ಪತ್ತೆಗಾಗಿ ವಿಶೇಷ ತಂಡವನ್ನು ರಚಿಸಿ ಗುಜರಾತ್ ಗೆ ಕಳುಹಿಸಲಾಗಿತ್ತು.
ಕಳೆದ ನ.21ರಂದು ಈ ಪ್ರಕರಣದಲ್ಲಿ ಭಾಗಿಯಾಗಿದ್ದ ಮೂವರನ್ನು ಸೂರತ್ ನಗರದಲ್ಲಿ ಪತ್ತೆಮಾಡಿ ಬಂಧಿಸಲಾಗಿದೆ.
ವಂಚನೆ ಹೇಗೆ?
ಮೀಶೋ ಆ್ಯಪ್‌ನ ಮೂಲಕ ಗ್ರಾಹಕರು ವಿವಿಯ ವಸ್ತುಗಳನ್ನು ಖರೀದಿಸಬಹುದು. ಈ ರೀತಿ ಖರೀದಿಸಿದ ವಸ್ತುಗಳಿಗೆ ಗ್ರಾಹಕರು ಆನ್‌ಲೈನ್ ಅಥವಾ ನಗದು ಮೂಲಕ ಪಾವತಿಸಬಹುದು. ಸೂರತ್‌ನಲ್ಲಿ ಓಂ ಸಾಯಿ ಎಂಬ ಹೆಸರಿನಲ್ಲಿ ನಕಲಿ ಕಂಪನಿ ತೆರೆದಿದ್ದ ಆರೋಪಿಗಳು, ಅದನ್ನು ಮಾರಾಟಗಾರ ಕಂಪನಿಯೆಂದು ಮೀಶೋದಲ್ಲಿ ರಿಜಿಸ್ಟರ್ ಮಾಡಿಸಿದ್ದರು. ನಂತರ ಮೀಶೋ ಆ್ಯಪ್ ಬಳಸಿ ತಾವೇ ಗ್ರಾಹಕರ ಸೋಗಿನಲ್ಲಿ ನಕಲಿ ಹೆಸರು ಮತ್ತು ವಿಳಾಸ ನೀಡಿ ಪ್ರತಿ ದಿನ ಸರಾಸರಿ 2000ರಿಂದ 2500 ವಿವಿಯ ಉತ್ಪನ್ನಗಳನ್ನು ಬುಕ್ ಮಾಡುತ್ತಿದ್ದರು.
ಆ ರೀತಿ ತಪ್ಪಾಗಿ ನೀಡಿದ ಗ್ರಾಹಕರ ವಿಳಾಸದಿಂದ ಉತ್ಪನ್ನಗಳು ವಾಪಸ್ ಮಾರಾಟಗಾರ ಕಂಪನಿಯಾಗಿರುವ ಓಂ ಸಾಯಿ ್ಯಾಷನ್‌ಗೆ ಹಿಂತಿರುಗುತ್ತಿದ್ದವು. ಹಾಗೆ ಹಿಂತಿರುಗಿದ ಉತ್ಪನ್ನವಿರುವ ಪಾರ್ಸಲ್‌ನಲ್ಲಿರುವ ವಸ್ತುವನ್ನು ಬದಲಾಯಿಸುತ್ತಿದ್ದ ಆರೋಪಿಗಳು, ಪಾರ್ಸಲ್‌ನಲ್ಲಿದ್ದ ವಸ್ತು ಬದಲಾಗಿದೆ ಎಂದು ವೀಡಿಯೋ ಮಾಡಿ ಆ ವೀಡಿಯೊವನ್ನು ಮೀಶೋ ಕಂಪನಿಯವರಿಗೆ ಕಳಿಸುತ್ತಿದ್ದರು. ಉತ್ಪನ್ನಗಳ ಮೌಲ್ಯದಷ್ಟು ಹಣವನ್ನು ಮೀಶೋ ಕಂಪನಿಯಿಂದ ಪಡೆದುಕೊಳ್ಳುತ್ತಿದ್ದರು.
ಬ್ಯಾಂಕ್ ಖಾತೆಯ ವಿವರ
ಪ್ರಕರಣದ ತನಿಖೆ ಕೈಗೊಂಡ ಸೈಬರ್ ಕ್ರೈಂ ಪೊಲೀಸರು ಮೀಶೋ ಕಂಪನಿಯಿಂದ ಹಣ ವರ್ಗಾವಣೆಯಾದ ಬ್ಯಾಂಕ್ ಖಾತೆಯ ವಿವರ ಮತ್ತು ಕೃತ್ಯಕ್ಕೆ ಉಪಯೋಗಿಸಿದ ಹಲವು ಮೊಬೈಲ್ ೆನ್ ನಂಬರ್‌ಗಳ ಮಾಹಿತಿ ಸಂಗ್ರಹಿಸಿ ಗುಜರಾತ್‌ಗೆ ತೆರಳಿ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.
ಇದೇ ರೀತಿ ಒಟ್ಟು 5.50 ಕೋಟಿ ರೂ.ಗಳನ್ನು ಇದುವರೆಗೂ ಆರೋಪಿಗಳು ವಿವಿಯ ಬ್ಯಾಂಕ್ ಖಾತೆಗೆ ಜಮಾ ಮಾಡಿಸಿಕೊಂಡಿದ್ದರು. 2023ರಲ್ಲಿ ವೈಟ್ ಫೀಲ್ಡ್ ವಿಭಾಗದ ಸಿಇಎನ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣದಲ್ಲಿಯೂ ಸಹ ಇದೇ ಆರೋಪಿಗಳು ಭಾಗಿಯಾಗಿದ್ದರು ಎಂಬುದು ತನಿಖೆಯಿಂದ ತಿಳಿದುಬಂದಿದೆ ಎಂದು ತಿಳಿಸಿದರು.