ಮಧ್ಯಮ ವೇಗಿ ಮೊಹಮದ್ ಸಿರಾಜ್ ಗೆ ಅಡಿಲೇಡ್ ನಲ್ಲಿ ನಡೆದ ಭಾರತ ಮತ್ತು ಆಸ್ಟ್ರೇಲಿಯಾ ನಡುವಣ ಎರಡನೇ ಟೆಸ್ಟ್ ಪಂದ್ಯದ ವೇಳೆ ನಿಯಮ ಉಲ್ಲಂಘಿಸಿದ್ದಕ್ಕಾಗಿ ಶೇ.20ರಷ್ಟು ದಂಡ ವಿಧಿಸಲಾಗಿದೆ.
ಎರಡನೇ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್ ವೇಳೆ 140 ರನ್ ಸಿಡಿಸಿದ್ದ ಟ್ರಾವಿಸ್ ಹೆಡ್ ಅವರನ್ನು ಮೊಹಮದ್ ಸಿರಾಜ್ ಔಟ್ ಮಾಡಿದಾಗ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿತ್ತು. ಈ ವಿಷಯದಲ್ಲಿ ನಾನು ವಿಕೆಟ್ ಪಡೆದ ಸಂಭ್ರಮದಲ್ಲಿದ್ದಾಗ ಟ್ರಾವಿಸ್ ಹೆಡ್ ನಿಂದಿಸಿದರು ಎಂದು ಹೇಳಿದರೆ, ನಾನು ಉತ್ತಮ ಎಸೆತ ಎಂದಷ್ಟೇ ಹೇಳಿದ್ದೆ ಎಂದು ಹೆಡ್ ಸುದ್ದಿಗೋಷ್ಠಿಯಲ್ಲಿ ಪ್ರತಿಕ್ರಿಯಿಸಿದ್ದರು.
ಈ ವಿವಾದ ಭಾರೀ ಚರ್ಚೆಗೆ ಕಾರಣವಾಗಿದ್ದು, ಅಂಪೈರ್ ಗಳು ಮತ್ತು ಮ್ಯಾಚ್ ರೆಫರಿ ವಿಚಾರಣೆ ನಡೆಸಿ ಮೊಹಮದ್ ಸಿರಾಜ್ ಗೆ ಪಂದ್ಯ ಶುಲ್ಕದ ಶೇ.20ರಷ್ಟು ದಂಡ ವಿಧಿಸಿದ್ದರೆ, ಟ್ರಾವಿಸ್ ಹೆಡ್ ಕಳೆದ 24 ತಿಂಗಳಲ್ಲಿ ಮಾಡಿದ ಮೊದಲ ನಿಯಮ ಬಾಹಿರ ಎಂಬ ಕಾರಣಕ್ಕೆ ಎಚ್ಚರಿಕೆ ನೀಡಲಾಗಿದ್ದು ದಂಡ ವಿಧಿಸಲಾಗಿಲ್ಲ.
ವಿಚಾರಣೆ ವೇಳೆ ಇಬ್ಬರೂ ಆಟಗಾರರು ತಾವು ಮಾಡಿದ ತಪ್ಪನ್ನು ಒಪ್ಪಿಕೊಂಡಿದ್ದಾರೆ. ಹೆಡ್ ಅವರನ್ನು ಸಿರಾಜ್ ನಿಂದಿಸಿದ್ದು ದೃಢಪಟ್ಟ ಹಿನ್ನೆಲೆಯಲ್ಲಿ ಅವರಿಗೆ ದಂಡ ವಿಧಿಸಲಾಗಿದೆಡ.