12 ಎಸ್ ಯು-30 ಎಂಕೆಐ ಫೈಟರ್ ಜೆಟ್ಸ್ ಮತ್ತು 100 ಕೆ-9 ವಜ್ರಾ ಸ್ವಯಂ ಪ್ರೊಫೆಲೆಡ್ ಹೌಥಿಜೆರ್ಸ್ ಖರೀದಿಸಲು 22 ಸಾವಿರ ಕೋಟಿ ವಿನಿಯೋಗಿಸಲು ಕೇಂದ್ರ ಸಚಿವ ಸಂಪುಟ ನಿರ್ಧರಿಸಿದೆ.
ಪ್ರಧಾನಿ ಮೋದಿ ನೇತೃತ್ವದಲ್ಲಿ ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ನೌಕಾಪಡೆಗಾಗಿ ಎಸ್ ಯು-30 ಎಂಕೆಐ ಫೈಟರ್ ಜೆಟ್ಸ್ ಹಾಗೂ ಭೂಸೇನೆಗೆ ಕೆ-9 ಹೌಥಿಜೆರ್ಸ್ ಖರೀದಿಸಲು ತೀರ್ಮಾನಿಸಲಾಯಿತು.
ಎಸ್ ಯು-30 ಎಂಕೆಐ ಫೈಟರ್ ಜೆಟ್ಸ್ ನಿರ್ಮಿಸಲು ಈಗಾಗಲೇ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್ ಎಎಲ್)ಗೆ 13 ಸಾವಿರ ಕೋಟಿ ರೂ. ಒಪ್ಪಂದ ಮಾಡಿಕೊಳ್ಳಲಾಗಿದೆ. ಹೊಸ ಫೈಟರ್ ಜೆಟ್ ಬರುತ್ತಿದ್ದಂತೆ ಹಳೆಯ ವಿಮಾನಗಳ ಜಾಗವನ್ನು ತುಂಬಲಿವೆ.