ಪೂರ್ವದಲ್ಲಿ ನಡೆಯುವ ಯುದ್ಧಗಳ ದುಷ್ಪರಿಣಾಮದಿಂದ ಪಶ್ಚಿಮ ರಾಷ್ಟ್ರಗಳು ನಾಶವಾಗಲಿವೆ ಎಂದು ವಿಶ್ವವಿಖ್ಯಾತ ಬಾಬಾ ವಂಗಾ ೨೦೨೫ರಲ್ಲಿ ನಡೆಯುವ ವಿದ್ಯಾಮಾನಗಳ ಬಗ್ಗೆ ನೀಡಿದ್ದ ಭವಿಷ್ಯ ಇದೀಗ ಭಾರೀ ವೈರಲ್ ಆಗಿದೆ.
1996ರಲ್ಲಿ 85ನೇ ವಯಸ್ಸಿಗೆ ನಿಧನರಾದ ಬಲ್ಗೇರಿಯಾದ ಬಾಬಾ ವಂಗಾ ಎಂದೇ ಖ್ಯಾತರಾದ ವಾಂಜೆಲಿಯಾ ಪಾಂಡೆವಾ ಗುಶ್ವೆರೋವಾ ಕಣ್ಣು ಕಾಣದೇ ಇದ್ದರೂ ಅವರು ನೀಡಿದ ಹಲವರು ಪ್ರಮುಖ ಘಟನೆಗಳ ಭವಿಷ್ಯ ನಿಜವಾಗಿರುವುದರಿಂದ ಇಂದಿಗೂ ಅವರ ಭವಿಷ್ಯವಾಣಿಗಳು ಪ್ರಚಲಿತದಲ್ಲಿವೆ.
ಬಾಲ್ಕನ್ಸ್ ನ ನಾಸ್ಟ್ರಡಾಮಸ್ ಎಂದೇ ಕರೆಯಲಾಗುವ ಬಾಬಾ ವಂಗಾ ಸೆಪ್ಟೆಂಬರ್ 11, 2001 ರಂದು ನ್ಯೂಯಾರ್ಕ್‌ನ ಅವಳಿ ಗೋಪುರಗಳ ಮೇಲಿನ ದಾಳಿ ಸೇರಿದಂತೆ ಜಗತ್ತಿನ ಹಲವು ಪ್ರಮುಖ ಘಟನೆಗಳ ಬಗ್ಗೆ ನುಡಿದಿದ್ದ ಭವಿಷ್ಯ ನಿಜವಾಗಿವೆ.
2025ರಲ್ಲಿ ನಡೆಯುವ ಪ್ರಮುಖ ಘಟನೆಗಳ ಬಗ್ಗೆ ಬಾಬಾ ವಂಗಾ ಭವಿಷ್ಯ ನುಡಿದಿದ್ದು, ಹಲವು ಸಾವು, ವಿನಾಶಗಳ ಮುನ್ಸೂಚನೆ ನೀಡಿದ್ದಾರೆ.
2025ರ ರಾಷ್ಟ್ರಗಳ ನಡುವಿನ ಒಳಸಂಚು, ಯುದ್ಧಗಳಿಂದಾಗಿ ಜನರು ತತ್ತರಿಸಲಿದ್ದಾರೆ. ಸಿರಿಯಾ ಪತನವಾದ ತಕ್ಷಣ, ಪಶ್ಚಿಮ ಮತ್ತು ಪೂರ್ವದ ನಡುವೆ ದೊಡ್ಡ ಯುದ್ಧ ನಡೆಯುವ ಸಾಧ್ಯತೆ ಇದೆ. ಮಾರ್ಚ್ ನಂತರ ಅಂದರೆ ವಸಂತ ಕಾಲದಲ್ಲಿ ಮೂರನೇ ಮಹಾಯುದ್ಧ ಆರಂಭವಾಗಲಿದೆ. ಇದರಿಂದ ಪೂರ್ವದಲ್ಲಿ ಯುದ್ಧ ನಡೆಯಲಿದ್ದು, ಇದರಿಂದ ಪಶ್ಚಿಮದ ಮೇಲೆ ದುಷ್ಪರಿಣಾಮ ಬೀರಲಿದೆ.
ಸಿರಿಯಾ ಮೇಲೆ ಬಂಡುಕೋರರು ಜಯ ಸಾಧಿಸಲಿದ್ದಾರೆ. ಆದರೆ ಅವರು ಒಬ್ಬರಾಗಿರುವುದಿಲ್ಲ ಎಂದು ಹೇಳಿದ್ದು, ಇದೀಗ ಅದು ನಿಜವಾಗಿದೆ.
“ಮಾನವೀಯತೆಯು ಭೂಮ್ಯತೀತ ಜೀವನದೊಂದಿಗೆ ಸಂಪರ್ಕ ಸಾಧಿಸುತ್ತದೆ, ಬಹುಶಃ ಜಾಗತಿಕ ಬಿಕ್ಕಟ್ಟು ಅಥವಾ ಅಪೋಕ್ಯಾಲಿಪ್ಸ್ಗೆ ಕಾರಣವಾಗುತ್ತದೆ.”
ಡೊನಾಲ್ಡ್ ಟ್ರಂಪ್ ಅಧಿಕಾರಕ್ಕೆ ಬಂದಾಗ ಅಮೆರಿಕ ಸರ್ಕಾರ ವಿದೇಶಿಯರು ಹೊಂದಿರುವ ಎಲ್ಲಾ ಫೈಲ್‌ಗಳನ್ನು ಬಿಡುಗಡೆ ಮಾಡುವ ಭರವಸೆಯೊಂದಿಗೆ, ಈ ಭವಿಷ್ಯವು ನಾವು ನಂಬಲು ಬಯಸುವುದಕ್ಕಿಂತ ಹೆಚ್ಚು ನಿಖರವಾಗಿರುವ ಸಾಧ್ಯತೆಯಿದೆ.