Home ವಿದೇಶ World News ನೆಚ್ಚಿನ ರಾಷ್ಟ್ರ ಪಟ್ಟಿಯಿಂದ ‘ಭಾರತ’ ಕೈಬಿಟ್ಟ ಸ್ವಿಜರ್ಲೆಂಡ್!

World News ನೆಚ್ಚಿನ ರಾಷ್ಟ್ರ ಪಟ್ಟಿಯಿಂದ ‘ಭಾರತ’ ಕೈಬಿಟ್ಟ ಸ್ವಿಜರ್ಲೆಂಡ್!

ನೆಸ್ಟ್ಲೆ ಕಂಪನಿ ವಿರುದ್ಧ ಸುಪ್ರೀಂಕೋರ್ಟ್ ನೀಡಿದ ತೀರ್ಪಿಗೆ ಅಸಮಾಧಾನ ವ್ಯಕ್ತಪಡಿಸಿರುವ ಸ್ವಿಜರ್ಲೆಂಡ್ ಸರ್ಕಾರ, ಭಾರತಕ್ಕೆ ನೀಡಿದ್ದ ನೆಚ್ಚಿನ ದೇಶ [Most Favoured Nation] ಸ್ಥಾನಮಾನವನ್ನು ಹಿಂಪಡೆದಿದೆ.

by Editor
0 comments
nestle

ನೆಸ್ಟ್ಲೆ ಕಂಪನಿ ವಿರುದ್ಧ ಸುಪ್ರೀಂಕೋರ್ಟ್ ನೀಡಿದ ತೀರ್ಪಿಗೆ ಅಸಮಾಧಾನ ವ್ಯಕ್ತಪಡಿಸಿರುವ ಸ್ವಿಜರ್ಲೆಂಡ್ ಸರ್ಕಾರ, ಭಾರತಕ್ಕೆ ನೀಡಿದ್ದ ನೆಚ್ಚಿನ ದೇಶ [Most Favoured Nation] ಸ್ಥಾನಮಾನವನ್ನು ಹಿಂಪಡೆದಿದೆ.

ದ್ವಿಗುಣ ತೆರಿಗೆ ತಪ್ಪಿಸುವ ಒಪ್ಪಂದದ ಉಲ್ಲಂಘನೆ ಹಿನ್ನೆಲೆಯಲ್ಲಿ ಭಾರತದಲ್ಲಿ ಕಾರ್ಯ ನಿರ್ವಹಿಸುವ ಸ್ವಿಜರ್ಲೆಂಡ್ ಕಂಪನಿಗಳ ಮೇಲೆ ಸುಪ್ರೀಂಕೋರ್ಟ್ ತೀರ್ಪು ದೊಡ್ಡ ಪೆಟ್ಟು ನೀಡಿದೆ. ಇದರಿಂದ ಎರಡೂ ದೇಶಗಳ ನಡುವಿನ ಒಪ್ಪಂದದ ಉಲ್ಲಂಘನೆ ಆಗಿದೆ ಎಂದು ಸ್ವಿಜರ್ಲೆಂಡ್ ಆರೋಪಿಸಿದೆ.

ಸ್ವಿಜರ್ಲೆಂಡ್ ಹಣಕಾಸು ಇಲಾಖೆ 2023ರಲ್ಲಿ ನೆಸ್ಟ್ಲೆ ಕಂಪನಿ ವಿರುದ್ಧ ಸುಪ್ರೀಂಕೋರ್ಟ್ ನೀಡಿದ ತೀರ್ಪನ್ನು ಉಲ್ಲೇಖಿಸಿದ್ದು, ಇದರಿಂದ ಮೋಸ್ಟ್ ಫೇವರ್ಡ್ ನೇಷನ್ ಸ್ಥಾನಮಾನ ನೀಡಲು ಸಾಧ್ಯವಿಲ್ಲ ಎಂದು ಹೇಳಿದೆ.

ಭಾರತ ಸರ್ಕಾರವೂ ಈ ಮೊದಲೇ ದೇಶದಲ್ಲಿ ಹೂಡಿಕೆ ಮಾಡಿರುವ ಕಂಪನಿಗಳಿಗೆ ತೆರಿಗೆ ವಿನಾಯಿತಿ ನೀಡುವ ಮೂಲಕ ಓಇಸಿಡಿ ವ್ಯಾಪ್ತಿಗೆ ಬಂದಿದೆ. ಆದ್ದರಿಂದ ಈ ವ್ಯಾಪ್ತಿಗೆ ಬರುವ ರಾಷ್ಟ್ರ ಮತ್ತೊಮ್ಮೆ ಮೋಸ್ಟ್ ಫೇವರ್ಡ್ ನೇಷನ್ ಷರತ್ತಿಗೆ ಬರುವುದಿಲ್ಲ ಎಂದು ಸುಪ್ರೀಂಕೋರ್ಟ್ ತೀರ್ಪು ಪ್ರಕಟಿಸಿತ್ತು. ಈ ತೀರ್ಪಿನ ಹಿನ್ನೆಲೆಯಲ್ಲಿ ಸ್ವಿಜರ್ಲೆಂಡ್ ಕಂಪನಿಗಳ ಹಿತಾಸಕ್ತಿ ಗಮನಿಸಿ ನೆಚ್ಚಿನ ದೇಶ ಸ್ಥಾನವನ್ನು ಹಿಂಪಡೆಯಲಾಗಿದೆ ಎಂದು ಸ್ವಿಜರ್ಲೆಂಡ್ ಸರ್ಕಾರ ಆದೇಶದಲ್ಲಿ ತಿಳಿಸಿದೆ.

banner

1961ರಲ್ಲಿ ಆರ್ಗನೈಸೇಶನ್ ಫಾರ್ ಎಕನಾಮಿಕ್ ಕೋ-ಆಪರೇಷನ್ ಅಂಡ್ ಡೆವಲಪ್ಮೆಂಟ್ [OECD] ಸ್ಥಾಪಿಸಲಾಗಿತ್ತು. ಈ ಸಂಘಟನೆ ಪ್ಯಾರಿಸ್ ನಲ್ಲಿ ಪ್ರಧಾನ ಕಚೇರಿ ಹೊಂದಿದ್ದು, ದತ್ತಾಂಶ, ವಿಶ್ಲೇಷಣೆ ಮತ್ತು ಸಾರ್ವಜನಿಕ ನೀತಿಯಲ್ಲಿನ ಉತ್ತಮ ಅಭ್ಯಾಸಗಳಿಗಾಗಿ ಫೋರಮ್ ಮತ್ತು ಜ್ಞಾನದ ಹಬ್ ಎಂದು ಕರೆಯುತ್ತದೆ.

ಸಾಕ್ಷ್ಯಾಧಾರಿತ ಅಂತರಾಷ್ಟ್ರೀಯ ಮಾನದಂಡಗಳನ್ನು ಸ್ಥಾಪಿಸಲು ಮತ್ತು ಸಾಮಾಜಿಕ, ಆರ್ಥಿಕ ಮತ್ತು ಪರಿಸರ ಸವಾಲುಗಳಿಗೆ ಪರಿಹಾರಗಳನ್ನು ಕಂಡುಹಿಡಿಯಲು ನೀತಿ ನಿರೂಪಕರು, ಮಧ್ಯಸ್ಥಗಾರರು ಮತ್ತು ನಾಗರಿಕರೊಂದಿಗೆ ನಿಕಟವಾಗಿ ಕಾರ್ಯನಿರ್ವಹಿಸುತ್ತದೆ.

You may also like

Leave a Comment

Soledad is the Best Newspaper and Magazine WordPress Theme with tons of options and demos ready to import. This theme is perfect for blogs and excellent for online stores, news, magazine or review sites.

Buy Soledad now!

Edtior's Picks

Latest Articles

Latest news
Belagavi Session ಮಾಜಿ ಸೈನಿಕರಿಗೆ ನಿವೇಶನ ನೀಡಲು ಕ್ರಮ: ಸಚಿವ ಕೃಷ್ಣ ಬೈರೇಗೌಡ World News ಅಮೆರಿಕದಲ್ಲಿ ಕಟ್ಟಡಕ್ಕೆ ವಿಮಾನ ಡಿಕ್ಕಿ ಹೊಡೆದು ಇಬ್ಬರು ಪೈಲೆಟ್ ಗಳ ಸಾವು ದೋಣಿಗೆ ಡಿಕ್ಕಿ ಹೊಡೆದ ನೌಕಾಪಡೆಯ ಸ್ಪೀಡ್ ಬೋಟ್: 13 ಮಂದಿ ದುರ್ಮರಣ ವಕ್ಫ್ ಗೆ ಸೇರಿದ ದೇವಸ್ಥಾನ, ರೈತರ ಜಮೀನು ವಾಪಸ್: ಸಚಿವ ಜಮೀರ್ ಅಹಮದ್ ಖಾನ್ ಘೋಷಣೆ ಅಂಬೇಡ್ಕರ್ ಮೇಲೆ ಗೌರವ ಇದ್ದರೆ ಸಚಿವ ಸ್ಥಾನದಿಂದ ಅಮಿತ್ ಶಾ ವಜಾ ಮಾಡಿ: ಪ್ರಧಾನಿ ಮೋದಿಗೆ ಮಲ್ಲಿಕಾರ್ಜುನ ಖರ್ಗೆ ಗಡುವು Belagavi ಪಂಚಾಯತ್ ರಾಜ್ ತಿದ್ದುಪಡಿ ವಿಧೇಯಕ ಅಂಗೀಕಾರ: ವಿಧಾನಪರಿಷತ್ ನಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿಗೆ ಮುಖಭಂಗ! 80 ಪ್ರಯಾಣಿಕರ ದೋಣಿಗೆ ಡಿಕ್ಕಿ ಹೊಡೆದ ಸ್ಪೀಡ್ ಬೋಟ್: 1 ಸಾವು, ಇಬ್ಬರು ನಾಪತ್ತೆ ಪ್ರೀತಿಸಿದವರು ಸಿಗಲಿಲ್ಲ ಅಂತ ಮದುವೆ ಆಗಿದ್ದ ಪ್ರೇಮಿಗಳು ಆತ್ಮಹತ್ಯೆ! ಕೋಲಾರದಲ್ಲಿ ಬೊಲೆರೋ- ಬೈಕ್ ಗಳ ನಡುವೆ ಡಿಕ್ಕಿ: 5 ಮಂದಿ ದುರ್ಮರಣ 48 ದಿನದ ನಂತರ ಶಸ್ತ್ರಚಿಕಿತ್ಸೆ ಇಲ್ಲದೇ ಆಸ್ಪತ್ರೆಯಿಂದ ದರ್ಶನ್ ಡಿಸ್ಚಾರ್ಜ್!