Home ಕ್ರೀಡೆ RCB: 1.20 ಕೋಟಿಗೆ ಆರ್ ಸಿಬಿ ಖರೀದಿಸಿದ ಪ್ರೇಮಾ ರಾವತ್ ಯಾರು?

RCB: 1.20 ಕೋಟಿಗೆ ಆರ್ ಸಿಬಿ ಖರೀದಿಸಿದ ಪ್ರೇಮಾ ರಾವತ್ ಯಾರು?

ನಾಲ್ವರು ಆಟಗಾರ್ತಿಯರ ಮೂಲಧನ 10 ಲಕ್ಷ ರೂ. ನಿಗದಿಯಾಗಿದ್ದು, ಪ್ರೇಮಾ ಮಾತ್ರ 1 ಕೋಟಿಗೂ ಅಧಿಕ ಮೊತ್ತಕ್ಕೆ ಮಾರಾಟವಾದರೆ, ಉಳಿದ ಮೂವರು ಮೂಲಧನದ ಮೊತ್ತಕ್ಕೆ ಆರ್ ಸಿಬಿ ಪಾಲಾದರು.

by Editor
0 comments
prema rawat

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಡಬ್ಲೂಪಿಎಲ್ 2025 ಮಿನಿ ಹರಾಜಿನಲ್ಲಿ 1.20 ಕೋಟಿ ರೂ. ನೀಡಿ ಪ್ರೇಮಾ ರಾವತ್ ಅವರನ್ನು ಖರೀದಿಸಿದೆ. 1 ಕೋಟಿಗಿಂತ ಹೆಚ್ಚು ಮೊತ್ತಕ್ಕೆ ಮಾರಾಟವಾದ ನಾಲ್ವರು ಆಟಗಾರ್ತಿಯರಲ್ಲಿ ಪ್ರೇಮಾ ಕೂಡ ಒಬ್ಬರಾಗಿದ್ದಾರೆ.

ಬೆಂಗಳೂರಿನಲ್ಲಿ ಭಾನುವಾರ ನಡೆದ ಮಿನಿ ಹರಾಜಿನಲ್ಲಿ ಆರ್ ಸಿಬಿ ನಾಲ್ವರು ಆಟಗಾರ್ತಿಯರನ್ನು ಸೆಳೆದುಕೊಂಡಿದ್ದು, ಪ್ರೇಮಾ ರಾವತ್ ಅವರನ್ನು ಗರಿಷ್ಠ 1.20 ಕೋಟಿ ರೂ. ನೀಡಿ ಖರೀದಿಸಿದೆ.

ನಾಲ್ವರು ಆಟಗಾರ್ತಿಯರ ಮೂಲಧನ 10 ಲಕ್ಷ ರೂ. ನಿಗದಿಯಾಗಿದ್ದು, ಪ್ರೇಮಾ ಮಾತ್ರ 1 ಕೋಟಿಗೂ ಅಧಿಕ ಮೊತ್ತಕ್ಕೆ ಮಾರಾಟವಾದರೆ, ಉಳಿದ ಮೂವರು ಮೂಲಧನದ ಮೊತ್ತಕ್ಕೆ ಆರ್ ಸಿಬಿ ಪಾಲಾದರು.

ಉತ್ತರಖಾಂಡ್ ಮೂಲದ ಲೆಗ್ ಸ್ಪಿನ್ನರ್ ಪ್ರೇಮಾ ರಾವತ್ ಗೆ ಆರ್ ಸಿಬಿ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವೆ ಪೈಪೋಟಿ ಏರ್ಪಟ್ಟಿದ್ದರಿಂದ 1 ಕೋಟಿಗೆ ಏರಿಕೆಯಾಗಿದೆ. ಉತ್ತರಾಖಂಡ್ ಪ್ರೀಮಿಯರ್ ಲೀಗ್ ನಲ್ಲಿ ಮುಸ್ಸೊರಿ ಥಂಡರ್ಸ್ ಪರ ಆಡಿದ್ದ ಪ್ರೇಮಾ 4 ಪಂದ್ಯಗಳಲ್ಲಿ 3 ವಿಕೆಟ್ ಪಡೆದಿದ್ದರು. ಅಲ್ಲದೇ ಉತ್ತಮ ಫೀಲ್ಡಿಂಗ್ ನಿಂದ ಉತ್ತಮ ಪ್ರದರ್ಶನ ನೀಡಿ ಗಮನ ಸೆಳೆದಿದ್ದರು.

banner

ಆರ್ ಸಿಬಿ ತಂಡದಲ್ಲಿ ಈಗಾಗಲೇ ಆಶಾ ಭೋಜನಾ ಇದ್ದು, ತಂಡದಲ್ಲಿ ಗಾಯದ ಸಮಸ್ಯೆ ಉಂಟಾದರೆ ಎಂಬ ಕಾರಣಕ್ಕೆ ಪ್ರೇಮಾ ಅವರನ್ನು ಕರೆ ತರಲಾಗಿದೆ. ಮುಂದಿನ ಆವೃತ್ತಿಯಲ್ಲಿ ಪ್ರೇಮಾ ದೊಡ್ಡ ಕಾಣಿಕೆ ನೀಡಬಹುದು ಎಂದು ನಿರೀಕ್ಷಿಸಲಾಗಿದೆ.

ಜೋಶಿತಾ, ರಾಘ್ವಿ ಬಿಸ್ಟ್ ಮತ್ತು ಜಾರ್ಗವಿ ಪವರ್ ತಲಾ 10 ಲಕ್ಷ ರೂ.ಗೆ ಆರ್ ಸಿಬಿ ತಂಡಕ್ಕೆ ಆಗಮಿಸಿದ್ದಾರೆ.

You may also like

Leave a Comment

Soledad is the Best Newspaper and Magazine WordPress Theme with tons of options and demos ready to import. This theme is perfect for blogs and excellent for online stores, news, magazine or review sites.

Buy Soledad now!

Edtior's Picks

Latest Articles

Latest news
ಕೇಂದ್ರ ಸರ್ಕಾರ ರೈಲ್ವೆ ಟಿಕೆಟ್ ದರ ಏರಿಸಿಲ್ಲವೇ? ಬಸ್ ಪ್ರಯಾಣ ದರ ಏರಿಕೆಗೆ ಸಿದ್ದರಾಮಯ್ಯ ತಿರುಗೇಟು ಎಂಪಿ ಚುನಾವಣೆಯಲ್ಲಿ ಹಣ ಕೊಡದೇ ಹಲ್ಲೆ: ಜೆಡಿಎಸ್ ಮುಖಂಡನ ಹತ್ಯೆಯ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಆರೋಪಿಗಳು! BREAKING ಭಾರತದ ಕೋಸ್ಟ್ ಗಾರ್ಡ್ ಹೆಲಿಕಾಫ್ಟರ್ `ಧ್ರುವ’ ಪತನ: ಮೂವರು ಯೋಧರ ದುರ್ಮರಣ ವಾರ್ಷಿಕ 40 ಲಕ್ಷ ವ್ಯವಹಾರ: ಪಾನಿಪೂರಿ ವ್ಯಾಪಾರಿಗೆ ಜಿಎಸ್ ಟಿ ನೋಟಿಸ್ ಜಾರಿ! ಮದುವೆ ಮಂಟಪದಿಂದಲೇ ಚಿನ್ನಾಭರಣದೊಂದಿಗೆ ವಧು ಪರಾರಿ! 10 ವರ್ಷಗಳ ನಂತರ ಸರಣಿ ಸೋತ ಭಾರತ: ಡಬ್ಲ್ಯೂಟಿಸಿ ಫೈನಲ್ ಗೆ ಆಸ್ಟ್ರೇಲಿಯಾ-ದ.ಆಫ್ರಿಕಾ Police News: 10 ವರ್ಷದ ಬಾಲಕಿ ಅಪಹರಿಸಿ ಅತ್ಯಾಚಾರ ಎಸಗಿದ 16 ವರ್ಷದ ಬಾಲಕ! ನಿವೃತ್ತಿ ನಿರ್ಧಾರ ಮಾಡಿಲ್ಲ, ಪಂದ್ಯದಿಂದ ಅಷ್ಟೇ: ರೋಹಿತ್ ಶರ್ಮಾ ಬಿಸಿಸಿಐಗೆ ಕಾರ್‍ಯದರ್ಶಿಯಾಗಿ ಜೈ ಶಾ ಸ್ಥಾನಕ್ಕೆ ಸೈಕಿಯಾ ಆಯ್ಕೆ? ಡಿಎಂಕೆ ಸಂಸದ ಕತಿರ್ ಆನಂದ್ ದಾಳಿ: ತಮಿಳುನಾಡಿನಲ್ಲಿ ಇಡಿ ಸರಣಿ ದಾಳಿ!