ಕೇಂದ್ರ ಗೃಹ ಸಚಿವ ಅಮಿತ್ ಶಾ ಉಪಸ್ಥಿತಿಯಲ್ಲಿ 6 ರಾಜ್ಯಗಳಿಂದ 30ಕ್ಕೂ ಹೆಚ್ಚು ಮಾವೋವಾದಿ ನಕ್ಸಲರು ಶರಣಾಗಿದ್ದಾರೆ.
ಛತ್ತೀಸಗಢದ ಜಗದಲ್ಪುರದಲ್ಲಿ ಸೋಮವಾರ ನಡೆದ ಸರಳ ಕಾರ್ಯಕ್ರಮದಲ್ಲಿ ಮಾವೋವಾದಿಗಳು ಶರಣಾಗಿದ್ದು, ಇದು ನನ್ನ ಜೀವನದ ಅತ್ಯಂತ ಸಂತೋಷದ ದಿನ ಎಂದು ಅಮಿತ್ ಶಾ ಪ್ರತಿಕ್ರಿಯಿಸಿದ್ದಾರೆ.
ಛತ್ತೀಸ್ ಗಢ, ಒಡಿಶಾ, ಮಹಾರಾಷ್ಟ್ರ, ತೆಲಂಗಾಣ, ಆಂಧ್ರಪ್ರದೇಶ, ಅಸ್ಸಾಂ ರಾಜ್ಯಗಳಿಂದ ಮಾವೋಗಳು ಶರಣಾಗಿದ್ದಾರೆ.
ಶರಣಾಗಿರುವ ನಕ್ಸಲರ ಸಂಖ್ಯೆ ಕಡಿಮೆ ಇರಬಹುದು. ಆದರೆ ಇದು ಅತ್ಯಂತ ಮಹತ್ವದ ಬೆಳವಣಿಗೆ ಆಗಿದೆ. ಇಲ್ಲಿಯವರೆಗೆ ಈಶಾನ್ಯ ರಾಜ್ಯಗಳಲ್ಲಿ 20ಕ್ಕೂ ಹೆಚ್ಚು ಮನವೊಲಿಕೆ ಪ್ರಯತ್ನಗಳು ನಡೆದಿದ್ದು, 9 ಸಾವಿರಕ್ಕೂ ಅಧಿಕ ವಲಸಿಗರು ಹಿಂಸಾಚಾರ ತೊರೆದು ಶರಣಾಗಿದ್ದಾರೆ ಎಂದು ಅಮಿತ್ ಶಾ ಪ್ರಶಂಸಿಸಿದರು.