ಕಾರ್ಮಿಕರಿಗೆ ಕಾರ್ಡ್ ನೀಡುವ ವಿಷಯಕ್ಕೆ ಸಂಬಂಧಿಸಿದಂತೆ ಹಲವು ಬೇಡಿಕೆಗಳು ಬಂದಿವೆ. ಅವುಗಳಲ್ಲಿ ಕಬ್ಬು ಕಟಾವು ಮಾಡುವವರಿಗೂ ಕಾರ್ಮಿಕರ ಕಾರ್ಡ್ ವಿತರಿಸುವ ಬೇಡಿಕೆ ಬಂದಿದ್ದು ಅದು ನ್ಯಾಯಯುತವಾಗಿದೆ. ಅದರ ಬಗ್ಗೆ ಚಿಂತನೆ ನಡೆಸಲಾಗುವುದು ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಹೇಳಿದ್ದಾರೆ.
ಬೆಳಗಾವಿಯ ಸುವರ್ಣಸೌಧದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಧಿವೇಶನದಲ್ಲಿ ಸಾಲು ಸಾಲು ಪ್ರತಿಭಟನೆಗಳು ನಡೆಯುತ್ತಿದ್ದ, ಸರಕಾರ ಪ್ರತಿಭಟನಾಕಾರರನ್ನು ಗೌರವಯುತವಾಗಿ ನಡೆಸಿಕೊಳ್ಳುತ್ತಿದೆ. ಸರಕಾರ ಪ್ರಮುಖವಾದ ಬೇಡಿಕೆಗಳನ್ಉ ಕಾನೂನಿನಡಿ ಅವಕಾಶಗಳಿದ್ದರೆ ಖಂಡಿತ ಈಡೇರಿಸುತ್ತದೆ ಎಂದು ಭರವಸೆ ನೀಡಿದರು.
ಈಗಾಗಲೆ 25 ಸೆಕ್ಟರಗಳಿಗೆ ಕಾರ್ಮಿಕ ಕಾರ್ಡ ಕೊಟ್ಟಿದ್ದೇವೆ. ಸಿಎಂ ಸಿದ್ದರಾಮಯ್ಯ ಹತ್ತಿರ ಕಾರ್ಮಿಕ ಕಾರ್ಡ ವಿಚಾರವಾಗಿ ಹಣ ಕೇಳಿದ್ದೇನೆ. ಕಬ್ಬು ಕಟಾವು ಕಾರ್ಮಿಕರಿಗೆ ಕಾರ್ಮಿಕರ ಕಾರ್ಡ ಡಿಮೆಂಡ್ ಸರಿ ಇದೆ ಎಂದ ಲಾಡ್, ಸದನದಲ್ಲಿ ಸೋಮವಾರದವರೆಗೂ ಚರ್ಚೆ ಇಲ್ಲ ಎನ್ನುವ ವಿಚಾರಕ್ಕೆ ಪ್ರತಿಕ್ರಿಯಿಸಿ, ಈ ಬಗ್ಗೆ ಬಿಜೆಪಿಯವರನ್ನು ಕೇಳಬೇಕು. ಅವರು ಸದನದಲ್ಲಿ ಸ್ಪೀಕರಗೆ ಬರೆದುಕೊಡಬೇಕು. ಸ್ಪೀಕರ್ ಯು.ಟಿ.ಖಾದರ್ ಸದನ ನಡೆಸಲು ಕೊಟ್ಟಷ್ಟು ಸಮಯವನ್ನು ಇತಿಹಾಸದಲ್ಲಿ ಯಾರು ಕೊಟ್ಟಿಲ್ಲ ಎಂದು ಬಿಜೆಪಿ ಶಾಸಕರ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.