ಭಾರತ ಮತ್ತು ಆಸ್ಟ್ರೇಲಿಯಾ ನಡುವಣ ಮೂರನೇ ಟೆಸ್ಟ್ ಪಂದ್ಯ ನೀರಸ ಡ್ರಾದೊಂದಿಗೆ ಅಂತ್ಯಗೊಂಡಿದೆ. ಈ ಮೂಲಕ ಡಬ್ಲ್ಯೂಟಿಎ ಫೈನಲ್ ಕನಸಿಗೆ ಅಡ್ಡಿಯುಂಟಾಗಿದೆ.
ಅಡಿಲೇಡ್ ನಲ್ಲಿ ನಡೆದ ಪಂದ್ಯದ ಮೊದಲ ಇನಿಂಗ್ಸ್ ನಲ್ಲಿ ಫಾಲೋಆನ್ ಭಾರತ ತಪ್ಪಿಕೊಂಡ ನಂತರ ಎರಡನೇ ಇನಿಂಗ್ಸ್ ಆರಂಭಿಸಿದ ಆಸ್ಟ್ರೇಲಿಯಾ 7 ವಿಕೆಟ್ ಗೆ 89 ರನ್ ಗಳಿಸಿದ್ದಾಗ ಡಿಕ್ಲೇರ್ ಮಾಡಿಕೊಂಡಿತು.
ಗೆಲ್ಲಲು 275 ರನ್ ಗುರಿ ಪಡೆದ ಭಾರತ ತಂಡ ವಿಕೆಟ್ ನಷ್ಟವಿಲ್ಲದೇ 8 ರನ್ ಗಳಿಸಿದ್ದಾಗ ಮಂದ ಬೆಳಕಿನ ಕಾರಣ ಆಟವನ್ನು ನಿಲ್ಲಿಸಲಾಯಿತು. ಇದರೊಂದಿಗೆ 3ನೇ ಟೆಸ್ಟ್ ಪಂದ್ಯ ಡ್ರಾದಲ್ಲಿ ಅಂತ್ಯಗೊಂಡಿತು.
ಭಾರತ ಮೊದಲ ಇನಿಂಗ್ಸ್ ನಲ್ಲಿ ಫಾಲೋಆನ್ ನಿಂದ ತಪ್ಪಿಸಿಕೊಂಡರೂ ಇನಿಂಗ್ಸ್ ಹಿನ್ನಡೆ ಅನುಭವಿಸಿದ್ದರಿಂದ ಅಂಕ ಗಳಿಸುವಲ್ಲಿ ವಿಫಲವಾಯಿತು. ಇದೀಗ ಭಾರತ ಡಬ್ಲ್ಯೂಟಿಎ ಫೈನಲ್ ಗೆ ಅರ್ಹತೆ ಪಡೆಯಬೇಕಾದರೆ ಉಳಿದೆರಡು ಪಂದ್ಯಗಳನ್ನು ಗೆದ್ದರೂ ಇತರೆ ತಂಡಗಳ ಫಲಿತಾಂಶದ ಲೆಕ್ಕಾಚಾರ ಗಮನಿಸಬೇಕಾಗಿದೆ.