ಕೇರಳದಲ್ಲಿ ಎರಡು ಮಂಕಿಪಾಕ್ಸ್ ಪ್ರಕರಣಗಳು ಪತ್ತೆಯಾಗಿವೆ ಎಂದು ಆರೋಗ್ಯ ಸಚಿವ ವೀಣಾ ಜಾರ್ಜ್ ತಿಳಿಸಿದ್ದಾರೆ.
ಯುನೈಟೆಡ್ ಅರಬ್ ಎಮಿರೇಟ್ಸ್ ನಿಂದ ಕೇರಳಕ್ಕೆ ಬಂದಿದ್ದ ಇಬ್ಬರಲ್ಲಿ ಮಂಕಿಪಾಕ್ಸ್ ಪ್ರಕರಣಗಳು ಪತ್ತೆಯಾಗಿವೆ ಎಂದು ಸಚಿವರು ತಿಳಿಸಿದ್ದಾರೆ.
ಮಂಕಿಪಾಕ್ಸ್ ಪ್ರಕರಣ ಪತ್ತೆಯಾದ ಇಬ್ಬರಲ್ಲಿ ಒಬ್ಬರು ವಯನಾಡು ಜಿಲ್ಲೆಯವರಾಗಿದ್ದು, ಎರಡನೇ ಪ್ರಕರಣ ಕಣ್ಣೂರು ಜಿಲ್ಲೆಯವರಾಗಿದ್ದಾರೆ.
ಇಬ್ಬರೂ ಸೋಂಕಿತರಿಗೆ ಕಣ್ಣೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇಬ್ಬರು ಸೋಂಕಿತರನ್ನು ಟ್ರಾವೆಲ್ ಹಿಸ್ಟರಿ ತಪಾಸಣೆ ಮಾಡಲಾಗುತ್ತಿದ್ದು, ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಸಚಿವೆ ವೀಣಾ ಸ್ಪಷ್ಟಪಡಿಸಿದರು.