Home Uncategorized ಕಾರಂಜಾ ಜಲಾಶಯ ಯೋಜನೆಯ ಸಂತ್ರಸ್ತರ ಬೇಡಿಕೆ ಪರಿಶೀಲನೆಗೆ ತಾಂತ್ರಿಕ ಸಮಿತಿ ರಚನೆ : ಸಿಎಂ ಸಿದ್ದರಾಮಯ್ಯ

ಕಾರಂಜಾ ಜಲಾಶಯ ಯೋಜನೆಯ ಸಂತ್ರಸ್ತರ ಬೇಡಿಕೆ ಪರಿಶೀಲನೆಗೆ ತಾಂತ್ರಿಕ ಸಮಿತಿ ರಚನೆ : ಸಿಎಂ ಸಿದ್ದರಾಮಯ್ಯ

ಬೀದರಿನ ಕಾರಂಜಾ ಜಲಾಶಯ ಯೋಜನೆಯ ಸಂತ್ರಸ್ತರಿಗೆ ಹೆಚ್ಚಿನ ಪರಿಹಾರ ನೀಡುವ ಕುರಿತಾದ ಬೇಡಿಕೆ ಪರಿಶೀಲನೆಗೆ ತಾಂತ್ರಿಕ ಸಮಿತಿ ರಚಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

by Editor
0 comments
siddaramiah

ಬೀದರಿನ ಕಾರಂಜಾ ಜಲಾಶಯ ಯೋಜನೆಯ ಸಂತ್ರಸ್ತರಿಗೆ ಹೆಚ್ಚಿನ ಪರಿಹಾರ ನೀಡುವ ಕುರಿತಾದ ಬೇಡಿಕೆ ಪರಿಶೀಲನೆಗೆ ತಾಂತ್ರಿಕ ಸಮಿತಿ ರಚಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

ಬೆಳಗಾವಿಯಲ್ಲಿ ನಡೆಯುತ್ತಿರುವ ಚಳಿಗಾಲ ಅಧಿವೇಶನದಲ್ಲಿ ಗುರುವಾರ ಕಾರಂಜಾ ಯೋಜನೆ ಸಂತ್ರಸ್ರರ ಹೋರಾಟಗಾರರು, ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಸಭೆ ನಡೆಸಿ, ಸಂತ್ರಸ್ತರ ಬೇಡಿಕೆ ಅನುಷ್ಠಾನದ ಸಾಧ್ಯತೆಗಳ ಬಗ್ಗೆ ಚರ್ಚೆ ನಡೆಸಿದ ನಂತರ ಹೇಳಿದರು.

ತಮ್ಮನ್ನು ಭೇಟಿ ಮಾಡಿದ ನಿಯೋಗ ಮತ್ತು ಮುಖಂಡರುಗಳೊಂದಿಗೆ ಸಭೆ ನಡೆಸಿದ ಮುಖ್ಯಮಂತ್ರಿಗಳು ಸಂತ್ರಸ್ತರಿಗೆ ಪರಿಹಾರ ನೀಡುವ ಸಂಬಂಧ ತಾಂತ್ರಿಕ ಸಮಿತಿಯೊಂದನ್ನು ರಚಿಸಿ, ಸಮಿತಿ ನೀಡುವ ವರದಿಯಾಧರಿಸಿ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದರು.

ಕಾರಂಜಾ ಜಲಾಶಯ ನಿರ್ಮಾಣಕ್ಕೆ 1972-73ರಲ್ಲಿ ಭೂಸ್ವಾಧೀನ ವಾಗಿತ್ತು. ಜಮೀನು ಕಳೆದುಕೊಂಡ ಸಂತ್ರಸ್ತರಿಗೆ ಎಕರೆಗೆ ರೂ 3000 ದಂತೆ 1981-86ರಲ್ಲಿ ಆಗಿನ ಮಾರುಕಟ್ಟೆ ಬೆಲೆ ಆಧರಿಸಿ ಪರಿಹಾರ ನೀಡಲಾಗಿತ್ತು. ಆದರೆ ಪರಿಹಾರ ಧನದ ಬಗ್ಗೆ ತಕರಾರು ಎತ್ತಿ ನ್ಯಾಯಾಲಯದ ಮೊರೆ ಹೋದ ಸಂತ್ರಸ್ತರು ಹೆಚ್ಚು ಪರಿಹಾರ ಧನ ಪಡೆದಿದ್ದರು.  ನ್ಯಾಯಾಲಯದ ಮೊರೆ ಹೋಗದ ರೈತರು ಹೆಚ್ಚುವರಿ ಪರಿಹಾರಕ್ಕಾಗಿ ಆಗ್ರಹಿಸಿ ಕಳೆದ 20 ದಿನದಿಂದ ಹೋರಾಟ ನಡೆಸುತ್ತಿದ್ದಾರೆ ಎಂದು ಸಚಿವ ಈಶ್ವರ ಖಂಡ್ರೆ ತಿಳಿಸಿದರು.

banner

ಸಚಿವರಾದ ರಹೀಂ ಖಾನ್, ಕೆಕೆಡಿಬಿ ಅಧ್ಯಕ್ಷ ಅಜಯ ಸಿಂಗ್ ಸೇರಿದಂತೆ ಜನಪ್ರತಿನಿಧಿಗಳು ಹಾಗೂ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

You may also like

Leave a Comment

Soledad is the Best Newspaper and Magazine WordPress Theme with tons of options and demos ready to import. This theme is perfect for blogs and excellent for online stores, news, magazine or review sites.

Buy Soledad now!

Edtior's Picks

Latest Articles

Latest news
ಮುಡಾ ಅಕ್ರಮ ಪ್ರಕರಣ: ಲೋಕಾಯುಕ್ತ ವರದಿ ಸಲ್ಲಿಕೆ ಅವಧಿ ವಿಸ್ತರಿಸಿದ ಹೈಕೋರ್ಟ್ BREAKING ಬೆಳಗಾವಿಯಲ್ಲಿ ಬಿಜೆಪಿ ನಾಯಕ ಸಿಟಿ ರವಿ ಅರೆಸ್ಟ್ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಗೆ ನಿಂದನೆ: ಬಿಜೆಪಿ ಎಂಎಲ್ ಸಿಟಿ ರವಿ ವಿರುದ್ಧ ಎಫ್ ಐಆರ್ ದಾಖಲು RSS, ಹಿಂದೂ ಸಂಘಟನೆ ಮೇಲೆ ದಾಳಿಗೆ ಸಂಚು: 8 ಬಾಂಗ್ಲಾ ಉಗ್ರರು ಅರೆಸ್ಟ್ ಸಿಟಿ ರವಿ ವಿರುದ್ಧ ಸಭಾಪತಿ, ಪೊಲೀಸರಿಗೆ ಲಕ್ಷ್ಮೀ ಹೆಬ್ಬಾಳ್ಕರ್ ದೂರು: 30 ಬೆಂಬಲಿಗರು ಪೊಲೀಸ್ ವಶಕ್ಕೆ ಹೆಸರು ತಪ್ಪಾಗಿದೆ ಅಂತ ಜಗದೀಪ್ ಧನ್ ಕರ್ ವಿರುದ್ಧ ಅವಿಶ್ವಾಸ ನಿರ್ಣಯ ಪ್ರಸ್ತಾಪ ತಿರಸ್ಕಾರ! ರಾಜ್ಯದಲ್ಲಿ ಅಕ್ರಮವಾಗಿ ನೆಲೆಸಿದ್ದ 24 ಪಾಕಿಸ್ತಾನಿಯರು, 159 ಬಾಂಗ್ಲಾದೇಶ ಪ್ರಜೆಗಳು ವಶಕ್ಕೆ: ಗೃಹ ಸಚಿವ ಜಿ. ಪರಮೇಶ್... ಕಾಂಗ್ರೆಸ್ಸಿಗರಿಗೆ ಡಾ.ಅಂಬೇಡ್ಕರರ ಫೋಟೊ ಹಿಡಿಯುವ ಯೋಗ್ಯತೆಯೂ ಇಲ್ಲ: ಆರ್.ಅಶೋಕ್ ಟೀಕೆ ಕಾರಂಜಾ ಜಲಾಶಯ ಯೋಜನೆಯ ಸಂತ್ರಸ್ತರ ಬೇಡಿಕೆ ಪರಿಶೀಲನೆಗೆ ತಾಂತ್ರಿಕ ಸಮಿತಿ ರಚನೆ : ಸಿಎಂ ಸಿದ್ದರಾಮಯ್ಯ ಸಂಸತ್ ಬಳಿ ಹೈಡ್ರಾಮಾ: ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆಗೆ ಗಾಯ: ಸ್ಪೀಕರ್ ಗೆ ದೂರು