ಶ್ರೀಮಂತರನ್ನು ಮದುವೆ ಆಗಿ ನಂತರ ಬೇರೆ ಆಗುವ ನೆಪದಲ್ಲಿ ಮೂವರಿಂದ 1.25 ಕೋಟಿ ರೂ. ಸುಲಿಗೆ ಮಾಡಿದ್ದ ಲೂಟಿ ವಧು ಖ್ಯಾತಿಯ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ.
ಉತ್ತರಾಖಂಡ್ ಮೂಲದ ಸೀಮಾ ಅಲಿಯಾಸ್ ನಿಕ್ಕಿ ಎಂಬಾಕೆ ಮದುವೆ ಆದ ನಂತರ ಗಂಡ ಹಾಗೂ ಅವರ ಮನೆಯವರ ವಿರುದ್ಧ ದೂರು ನೀಡಿ ಬೇರ್ಪಡಲು ಇಷ್ಟು ಹಣ ಕೊಡಬೇಕು ಎಂದು ಬೇಡಿಕೆ ಇಟ್ಟು ಪರಿಹಾರ ರೂಪವಾಗಿ ವಸೂಲು ಮಾಡುವುದನ್ನೇ ವೃತ್ತಿ ಮಾಡಿಕೊಂಡಿದ್ದಳು.
ಶ್ರೀಮಂತರನ್ನೇ ಗುರಿಯಾಗಿಸಿ ತನ್ನ ಕಾರ್ಯಸಾಧನೆ ಮಾಡಿಕೊಳ್ಳುತ್ತಿದ್ದ ಸೀಮಾ ಮದುವೆ ಆಗುವುದು ನಂತರ ಬೇರೆ ಆಗುವ ನೆಪದಲ್ಲಿ ಮೂರು ಮಂದಿಗೆ ವಂಚಿಸಿದ್ದಾಳೆ.
2023ರಲ್ಲಿ ಆಗ್ರಾದ ಉದ್ಯಮಿಯನ್ನು ಮದುವೆ ಆದ ಸೀಮಾ ಆಕೆಯ ಗಂಡ ಹಾಗೂ ಕುಟುಂಬದವರ ವಿರುದ್ಧ ಕೇಸು ದಾಖಲಿಸಿ ನಂತರ ಬೇರೆ ಆಗುವ ನೆಪದಲ್ಲಿ ಪರಿಹಾರ ಮೊತ್ತವಾಗಿ 75 ಲಕ್ಷ ರೂ. ವಸೂಲು ಮಾಡಿದ್ದಳು.
2017ರಲ್ಲಿ ಗುರ್ ಗಾಂವ್ ನಲ್ಲಿ ಸಾಫ್ಟ್ ವೇರ್ ಇಂಜಿನಿಯರ್ ನನ್ನು ಮದುವೆ ಆ ಸೀಮಾ, ಬೇರ್ಪಡಲು 10 ಲಕ್ಷ ರೂ. ಪರಿಹಾರವಾಗಿ ಪಡೆದು ದೂರ ಆಗಿದ್ದಳು.
2023ರಲ್ಲಿ ಜೈಪುರ ಮೂಲದ ಉದ್ಯಮಿಯನ್ನು ಮದುವೆ ಆಗಿದ್ದು, 36 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಮುಂತಾದವರನ್ನು ಕದ್ದು ಪರಾರಿಯಾಗಿದ್ದಳು. ಕುಟುಂಬದವರು ನೀಡಿದ ದೂರಿನ ಅನ್ವಯ ಸೀಮಾಳನ್ನು ಬಂಧಿಸಿದ ಜೈಪುರ ಪೊಲೀಸರು ವಿಚಾರಣೆ ನಡೆಸಿದಾಗ ಇಡೀ ಪ್ರಕರಣ ಬೆಳಕಿಗೆ ಬಂದಿದೆ.
ಮ್ಯಾಟ್ರಿಮೊನಿಯೊದಲ್ಲಿ ವಿಚ್ಛೇದನ ಪಡೆದ ಅಥವಾ ಪತ್ನಿ ತೀರಿಕೊಂಡ ಶ್ರೀಮಂತರ ಪುರುಷನ್ನು ಟಾರ್ಗೆಟ್ ಮಾಡುತ್ತಿದ್ದ ಈಕೆ ಸುಮಾರು 1.25 ಕೋಟಿ ರೂ.ವಂಚಿಸಿದ್ದಾಳೆ ಎಂದು ಪೊಲೀಸರು ವಿವರಿಸಿದ್ದಾರೆ.