Tuesday, May 26, 2026
Google search engine
Homeಬೆಂಗಳೂರುಬೆಂಗಳೂರಿನಲ್ಲಿ ಭೀಕರ ಅಪಘಾತ: ಡಿಕ್ಕಿ ಹೊಡೆದ ಲಾರಿಗಳು ಕಾರಿನ ಮೇಲೆ ಬಿದ್ದು 6 ಮಂದಿ ದುರ್ಮರಣ

ಬೆಂಗಳೂರಿನಲ್ಲಿ ಭೀಕರ ಅಪಘಾತ: ಡಿಕ್ಕಿ ಹೊಡೆದ ಲಾರಿಗಳು ಕಾರಿನ ಮೇಲೆ ಬಿದ್ದು 6 ಮಂದಿ ದುರ್ಮರಣ

ಎರಡು ಲಾರಿಗಳು ಪರಸ್ಪರ ಡಿಕ್ಕಿ ಹೊಡೆದು ಕಾರಿನ ಮೇಲೆ ಬಿದ್ದಿದ್ದರಿಂದ ಕಾರಿನಲ್ಲಿದ್ದ ಇಬ್ಬರು ಮಕ್ಕಳು ಸೇರಿದಂತೆ 6 ಮಂದಿ ಮೃತಪಟ್ಟ ದಾರುಣ ಘಟನೆ ಬೆಂಗಳೂರು ಹೊರವಲಯದಲ್ಲಿ ಸಂಭವಿಸಿದೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ಸಮೀಪದ ತಾಳೇಕೆರೆ ಎಂಬಲ್ಲಿ ಶನಿವಾರ ಮಧ್ಯಾಹ್ನ ಈ ದುರ್ಘಟನೆ ಸಂಭವಿಸಿದೆ.

ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಎರಡು ಲಾರಿಗಳು ಪರಸ್ಪರ ಡಿಕ್ಕಿ ಹೊಡೆದುಕೊಂಡಿದ್ದು, ಒಂದು ಲಾರಿ ಪಕ್ಕದಲ್ಲಿ ಹಾದು ಹೋಗುತ್ತಿದ್ದ ಕಾರಿನ ಲಾರಿಯ ಕಂಟೇನರ್ ಮೇಲೆ ಬಿದ್ದಿದೆ. ಇದರಿಂದ ಕಾರಿನಲ್ಲಿದ್ದ ಮಕ್ಕಳು ಸೇರಿದಂತೆ 6 ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಭೀಕರ ದುರಂತದಿಂದ ಸುಮಾರು 3 ಕಿ.ಮೀ. ದೂರದವರೆಗೆ ಟ್ರಾಫಿಕ್ ಜಾಮ್ ಉಂಟಾಗಿದ್ದು, ಪರಿಹಾರ ಕಾರ್ಯಾಚರಣೆಗೂ ಅಡ್ಡಿಯಾಗಿದೆ.

ಲಾರಿ ಮುಂದೆ ಎರಡು ಕಾರುಗಳು ಮುಂದೆ ಬಂದಿದ್ದರಿಂದ ಅಪಘಾತ ತಪ್ಪಿಸಲು ಹೋದಾದ ಈ ದುರ್ಘಟನೆ ಸಂಭವಿಸಿದೆ. ವಿಜಯಪುರ ಮೂಲದ ಇಂಜಿನಿಯರ್ ಕುಟುಂಬ ಮೃತಪಟ್ಟ ದುರರ್ದೈವಿಗಳು ಎಂದು ಪ್ರಾಥಮಿಕ ಮಾಹಿತಿ ಗಳಿಂದ ತಿಳಿದು ಬಂದಿದೆ.

ಲಾರಿ ತುಮಕೂರು ಕಡೆಯಿಂದ ಬೆಂಗಳೂರು ಕಡೆ ಬರುತ್ತಿದ್ದರೆ, ಬೆಂಗಳೂರಿನಿಂದ ಕಾರು ತುಮಕೂರು ಕಡೆ ಹೋಗುತ್ತಿತ್ತು. ಕಂಟೇನರ್ ಬಿದ್ದಿದ್ದರಿಂದ ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments