ಪಾಪ್ ಕಾರ್ನ್ ಮೇಲೆ ಶೇ.18ರಷ್ಟು ಜಿಎಸ್ ಟಿ ವಿಧಿಸಿರುವುದನ್ನು ಕೇಂದ್ರ ಸರ್ಕಾರ ಸಮರ್ಥಿಸಿಕೊಂಡಿರುವುದು ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.
ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ನೇತೃತ್ವದಲ್ಲಿ ಶನಿವಾರ ನಡೆದ 55ನೇ ಜಿಎಸ್ ಟಿ ಸಭೆಯಲ್ಲಿ ಪಾಪ್ ಕಾರ್ನ್ ಮೇಲೆ ವಿಧಿಸಲಾಗಿರುವ ಶೇ.18ರಷ್ಟು ಜಿಎಸ್ ಟಿಯಲ್ಲಿ ಯಾವುದೇ ಬದಲಾಣೆ ಇಲ್ಲ ಎಂದು ಸ್ಪಷ್ಟಪಡಿಸಿತ್ತು.
ಸಕ್ಕರೆ ಮಿಶ್ರಿತ ಪಾಪ್ ಕಾರ್ನ್ ಗೂ ಉಪ್ಪು ಮತ್ತು ಖಾರ ಬಳಸಿದ ಪಾಪ್ ಕಾರ್ನ್ ಗೂ ಭಿನ್ನ ರೀತಿಯ ಜಿಎಸ್ ಟಿ ವಿಧಿಸಲಾಗಿದೆ.
ಪ್ಯಾಕ್ ಮಾಡದ ಹಾಗೂ ಲೇಬಲ್ ಇಲ್ಲದ ಪಾಪ್ ಕಾರ್ನ್ ಮೇಲೆ ಶೇ.5ರಷ್ಟು ಜಿಎಎಸ್ ಟಿ, ಪ್ಯಾಕ್ ಮಾಡಿ ಹಾಗೂ ಲೇಬಲ್ ಹೊಂದಿದ ಪಾಪ್ ಕಾರ್ನ್ ಮೇಲೆ ಶೇ.12ರಷ್ಟು ಹಾಗೂ ಸಕ್ಕರೆ ಹಾಗೂ ಇತರೆ ಅಂಶಗಳನ್ನು ಸೇರಿಸಿ ಸಿದ್ಧಪಡಿಸಿದ ಪಾಪ್ ಕಾರ್ನ್ ಮೇಲೆ ಶೇ.18ರಷ್ಟು ತೆರಿಗೆ ವಿಧಿಸಲಾಗಿದೆ ಎಂದು ಕೇಂದ್ರ ಸ್ಪಷ್ಟಪಡಿಸಿದೆ.
ಪಾಪ್ ಕಾರ್ನ್ ಮೇಲಿನ ಜಿಎಸ್ ಟಿ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ಆರಂಭವಾಗಿದ್ದು, ಕಾಲೇಜು ವಿದ್ಯಾರ್ಥಿಗಳು ಬಳಸುವ ಪಾಪ್ ಕಾರ್ನ್ ಪೊಟ್ಟಣಗಳನ್ನು ಪ್ರದರ್ಶಿಸಿದ್ದಾರೆ.
ಸಕ್ಕರೆ ಅಥವಾ ಉಪ್ಪು ಹಾಕಿದ ಪಾಪ್ ಕಾರ್ನ್ ಗೆ ಶೇ.5 ಹಾಗೂ ಮಸಾಲೆ ಹಾಕಿದ ಪಾಪ್ ಕಾರ್ನ್ ಗೆ ಶೇ.18ರಷ್ಟು ತೆರಿಗೆ. ತಿನ್ನೋದು ಒಂದೇ. ತೆರಿಗೆ ಮಾತ್ರ ಭಿನ್ನ ಎಂದು ಟೀಕಿಸಿದ್ದಾರೆ.