ಯಾವುದೇ ಕಾರಣಕ್ಕೂ ಸಿಟಿ ರವಿಯನ್ನು ಕ್ಷಮಿಸುವ ಪ್ರಶ್ನೆಯೇ ಇಲ್ಲ. ಇದು ಮಹಿಳಾ ಸಮುದಾಯಕ್ಕೆ ಮಾಡಿದ ಅಪಮಾನ. ನಾನು ಸಭಾಪತಿಗೆ ಮತ್ತೆ ಕ್ರಮ ಕೈಗೊಳ್ಳುವಂತೆ ಮನವಿ ಮಾಡುವೆ. ನನ್ನ ಬಳಿ ಸಾಕ್ಷಿಗಳಿವೆ. ಮಾಧ್ಯಮಗಳ ಬಳಿಯೂ ಇವೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಚಿಟಿಕಿ ಹೊಡೆದು ಸವಾಲು ಹಾಕಿದ್ದಾರೆ.
ಬೆಳಗಾವಿಯಲ್ಲಿ ಕಾಂಗ್ರೆಸ್ ಸಮಾವೇಶದ ಸಿದ್ಧತೆಗಳನ್ನು ಪರಿಶೀಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅನ್ನಿಸಿಕೊಂಡಿದ್ದು ನಾನು, ಅಂದಿದ್ದು ಸಿಟಿ ರವಿ. ಆದರೆ ಹಾರಾ ತರಾಯಿ ಹಾಕಿಸಿಕೊಂಡು ಸನ್ಮಾನ ಮಾಡಿಸಿಕೊಳ್ಳುತ್ತಾರೆ. ಇವರಿಗೆ ಮಾನ ಮರ್ಯಾದೆ ಇದೆಯಾ? ಆತ್ಮಸಾಕ್ಷಿ ಇದೆಯಾ ಎಂದು ಗುಡುಗಿದರು.
ಸಿಟಿ ರವಿ ತಾಯಿಗೆ ಹುಟ್ಟಿದ್ದನಾ? ಹೆಂಡ್ತಿ ಇಲ್ಲವಾ? ಒಬ್ಬ ಹೆಣ್ಣಮಗಳನ್ನು ನಿಂದಿಸಿದ್ದೂ ಅಲ್ಲದೇ ಅದನ್ನು ಸಮರ್ಥನೆ ಮಾಡಿಕೊಳ್ತಾನೆ. ಹಾರಾ ತುರಾಯಿ ಹಾಕಿಸಿಕೊಂಡು ಸನ್ಮಾನ ಮಾಡಿಸಿಕೊಳ್ತಾನೆ ಎಂದು ಅವರು ಆರೋಪಿಸಿದರು.
ಇದೇ ವೇಳೆ ಸಿಟಿ ರವಿ ಮಾತನಾಡಿದ್ದಾರೆ ಎನ್ನಲಾದ ಅಶ್ಲೀಲ ಪದಗಳ ವೀಡಿಯೊ ದೃಶ್ಯವನ್ನು ಲಕ್ಷ್ಮೀ ಹೆಬ್ಬಾಳ್ಕರ್ ಬಿಡುಗಡೆ ಮಾಡಿದರು.