5
ಬ್ಯಾಡ್ಮಿಂಟನ್ ತಾರೆ ಪಿವಿ ಸಿಂಧು ರಾಜಸ್ಥಾನದ ಉದಯಪುರದಲ್ಲಿ ನಡೆದ ಅದ್ಧೂರಿ ಸಮಾರಂಭದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದಾರೆ.
ಎರಡು ಕುಟುಂಬಗಳ ಸಮ್ಮತಿಯಂತೆ ಪಿವಿ ಸಿಂಧು ಸೋಮವಾರ ಸಾಫ್ಟ್ ವೇರ್ ಉದ್ಯಮಿ ವೆಂಕಟ ದತ್ತ ಸಾಯಿ ಅವರನ್ನು ವರಿಸಿದರು. ಮದುವೆ ಸಮಾರಂಭದ ಒಂದು ಫೋಟೊವನ್ನು ಮಾಧ್ಯಮಗಳಿಗೆ ಬಿಡುಗಡೆ ಮಾಡಲಾಗಿದೆ.
ಡಿಸೆಂಬರ್ 24ರಂದು ಹೈದರಾಬಾದ್ ನಲ್ಲಿ ಮದುವೆಯ ಸಾಂಪ್ರದಾಯಿಕ ವಿಧಿವಿಧಾನಗಳನ್ನು ಪೂರೈಸಿದ್ದು, ಸೋಮವಾರ ಉದಯಪುರದಲ್ಲಿ ಅದ್ಧೂರಿಯಾಗಿ ಮದುವೆ ಸಮಾರಂಭ ಜರುಗಿದೆ.